ದುಬೈ: ಐಸಿಸಿ ಟಿ20 ವಿಶ್ವಕಪ್ (ICC T20 World Cup)ನ ಎರಡನೇ ಸೆಮಿಫೈನಲ್ (2nd Semi-Final) ಪಂದ್ಯದಲ್ಲಿಂದು ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ (Pakistan vs Australia) ತಂಡ ಮುಖಾಮುಖಿಯಾಗಿದ್ದು, ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ಪಂದ್ಯ ಆರಂಭಗೊಂಡಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಬೌಲಿಂಗ್ ಆಯ್ದುಕೊಂಡಿದೆ. ಸೂಪರ್12 ಹಂತದಲ್ಲಿ ಪಾಕಿಸ್ತಾನ ಆಡಿರುವ ಎಲ್ಲ ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದು ಸೆಮಿಫೈನಲ್ಗೆ ಲಗ್ಗೆ ಹಾಕಿದೆ. ಆಸ್ಟ್ರೇಲಿಯಾ ತಾನು ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಪಡೆದಿದೆ.
ಆಡುವ 11ರ ಬಳಗ ಹೀಗಿದೆ..
ಪಾಕಿಸ್ತಾನ: ಮೊಹಮ್ಮದ್ ರಿಜ್ವಾನ್(ವಿ,ಕೀ), ಬಾಬರ್ ಆಜಂ(ಕ್ಯಾಪ್ಟನ್), ಫಕಾರ್ ಜಮಾನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸೀಫ್ ಅಲಿ, ಶಬ್ದಾದ್ ಖಾನ್, ಇಮಾದ್ ವಾಸೀಂ, ಹಸನ್ ಅಲಿ, ಹ್ಯಾರಿಸ್ ರೌಫ್, ಶಾಹೀನ್ ಆಫ್ರೀದಿ
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರೋನ್ ಫಿಂಚ್(ಕ್ಯಾಪ್ಟನ್), ಮಿಚನ್ ಮಾರ್ಷ್, ಸ್ಟೀವ್ ಸ್ಮಿತ್,ಗ್ಲೇನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೋನಿಸ್, ಮ್ಯಾಥ್ಯೋ ವ್ಯಾಡ್(ವಿ,ಕೀ), ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆ್ಯಂಡಂ ಜಂಪಾ, ಹ್ಯಾಜಲ್ವುಡ್