ಅಬುಧಾಬಿ: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಭಾರತ ಇಂದು ತನ್ನ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ಥಾನದ ವಿರುದ್ಧ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 210 ರನ್ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ಪರ ಓಪನರ್ ಆಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ರಾಹುಲ್ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್ಗೆ 140 ರನ್ಗಳ ಜೊತೆಯಾಟವಾಡಿತು.
ಕೇವಲ 47 ಎಸೆತಗಳಲ್ಲಿ 8 ಬೌಂಡರಿ 3 ಸಿಕ್ಸರ್ ನೆರವಿನಿಂದ ರೋಹಿತ್ ಶರ್ಮಾ 74 ರನ್ಗಳಿಸಿ ಕರಿಂ ಜನತ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಕೆ.ಎಲ್.ರಾಹುಲ್ 69 ರನ್ಗಳಿಸಿದಾಗ ನಯಿಬ್ಗೆ ವಿಕೆಟ್ ಒಪ್ಪಿಸಿದರು. ರಾಹುಲ್ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿ 2 ಸಿಕ್ಸರ್ ನೆರವಿನಿಂದ 69 ರನ್ಗಳಿಸಿದರು.
ಇವರ ವಿಕೆಟ್ ಬಳಿಕ ಒಂದಾದ ರಿಷಬ್ ಪಂತ್ 27* ಹಾಗೂ ಹಾರ್ದಿಕ್ ಪಾಂಡ್ಯ 35* ಜೋಡಿ ಕೇವಲ ನಾಲ್ಕು ಓವರ್ಗಳಲ್ಲಿ 50 ರನ್ಗಳ ಜೊತೆಯಾಟವಾಡಿತು. ಅಂತಿಮವಾಗಿ ಭಾರತ 20 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 210 ರನ್ಗಳಿಸಿತು. ಅಫ್ಘನ್ ಪರ ನಯಿಬ್ ಮತ್ತು ಕರಿಂ ಜನತ್ ತಲಾ ಒಂದು ವಿಕೆಟ್ ಪಡೆದರು.