ದುಬೈ: ಐಸಿಸಿ ಟಿ20 ವಿಶ್ವಕಪ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ (Babar Azam) ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್ (T20 Cricket)ನಲ್ಲಿ ಅತಿ ವೇಗವಾಗಿ 2500 ರನ್ಗಳಿಕೆ ಮಾಡಿರುವ ಮೊದಲ ಪ್ಲೇಯರ್ ಎಂಬ ಸಾಧನೆ ಮಾಡಿದ್ದಾರೆ. ಇದರ ಜೊತೆಗೆ ವಿರಾಟ್ ಕೊಹ್ಲಿ ಸಾಧನೆ ಬ್ರೇಕ್ ಮಾಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬಾಬರ್ ಆಜಂ 39 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಇದರ ಜೊತೆಗೆ ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 2500 ರನ್ಗಳಿಕೆ ಮಾಡಿರುವ ದಾಖಲೆ ಬರೆದರು. ಇದಕ್ಕಾಗಿ 62 ಇನ್ನಿಂಗ್ಸ್ ತೆಗೆದುಕೊಂಡಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ (Virat Kohli) 68 ಇನ್ನಿಂಗ್ಸ್, ಆಸ್ಟ್ರೇಲಿಯಾದ ಆರೋನ್ ಫಿಂಚ್ 78 ಹಾಗೂ ನ್ಯೂಜಿಲ್ಯಾಂಡ್ನ ಮಾರ್ಟಿನ್ ಗಪ್ಟಿಲ್ 83 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: ರಿಜ್ವಾನ್-ಫಖರ್ ಅರ್ಧಶತಕ: ಆಸ್ಟ್ರೇಲಿಯಾ ಗೆಲುವಿಗೆ 177ರನ್ ಟಾರ್ಗೆಟ್ ನೀಡಿದ ಪಾಕ್
ಇದರ ಜೊತೆಗೆ, ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್ನಲ್ಲಿ 1000 ರನ್ಗಳಿಕೆ ಮಾಡಿರುವ ಮೊದಲ ಪ್ಲೇಯರ್ ಎಂಬ ದಾಖಲೆ ಸಹ ಬರೆದಿದ್ದಾರೆ. ಜೊತೆಗೆ ಟಿ-20 ವಿಶ್ವಕಪ್ನಲ್ಲಿ ಅತಿ ಹೆಚ್ಚಿನ ರನ್ (303*) ಗಳಿಕೆ ಮಾಡಿರುವ ಪ್ಲೇಯರ್ ಎಂಬ ಪಟ್ಟ ಕೂಡ ಅಲಂಕಾರ ಮಾಡಿದ್ದಾರೆ. ಈಗಾಗಲೇ 2014ರಲ್ಲಿ ವಿರಾಟ್ ಕೊಹ್ಲಿ 319ರನ್, 2009ರಲ್ಲಿ ದಿಲ್ಷಾನ್ 317ರನ್, 2010ರಲ್ಲಿ ಜಯವರ್ದನೆ 302ರನ್ಗಳಿಕೆ ಮಾಡಿದ್ದಾರೆ.