ETV Bharat / sports

ಕುಸ್ತಿಪಟುಗಳ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ: ಯೋಗೇಶ್ವರ್ ದತ್

Yogeshwar Dutt allegations against Congress: ಕುಸ್ತಿಪಟುಗಳ ಪ್ರಶಸ್ತಿ ವಾಪಸಾತಿ ಬೆಳವಣಿಗೆಯ ಹಿಂದೆ ಕಾಂಗ್ರೆಸ್ ಪಕ್ಷದ​ ಕೈವಾಡವಿದ್ದು, ಲೋಕಸಭಾ ಚುನಾವಣೆಗಾಗಿ ಈ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ ಎಂದು ಒಲಿಂಪಿಕ್‌ ಪದಕ ವಿಜೇತ ಕ್ರೀಡಾಪಟು ಹಾಗು ಬಿಜೆಪಿ ಮುಖಂಡ ಯೋಗೇಶ್ವರ್ ದತ್ ಆರೋಪಿಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Jan 1, 2024, 12:44 PM IST

'ಕುಸ್ತಿಪಟುಗಳ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ'

ರೋಹ್ಟಕ್(ಹರಿಯಾಣ): ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್​ ಸಿಂಗ್ ಭಾರತೀಯ ಕುಸ್ತಿ ಫೆಡರೇಶನ್‌ (ಡಬ್ಲ್ಯುಎಫ್ಐ​) ಅಧ್ಯಕ್ಷರಾಗಿ ​ಆಯ್ಕೆ ಆಗಿರುವುದನ್ನು ವಿರೋಧಿಸಿ ಸಾಕ್ಷಿ ಮಲಿಕ್ ಕುಸ್ತಿಗೆ​ ನಿವೃತ್ತಿ ಘೋಷಿಸಿದರೆ, ಭಜರಂಗ್​ ಪೂನಿಯಾ ಪದ್ಮಶ್ರೀ ಮತ್ತು ವಿನೇಶ್ ಫೋಗಟ್ ಅವರು ತಮ್ಮ ಖೇಲ್​ ರತ್ನ, ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರೆ. ಕುಸ್ತಿಪಟುಗಳ ಈ ನಡೆಯನ್ನು 'ರಾಜಕೀಯ ಪ್ರೇರಿತ' ಎಂದು ಒಲಿಂಪಿಯನ್ ಯೋಗೇಶ್ವರ್ ದತ್ ವಿಶ್ಲೇಷಿಸಿದರು.

ಈ ಪ್ರಶಸ್ತಿಗಳು ಕೇವಲ ಕ್ರೀಡಾಪಟುವಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಸಂದ ಗೌರವ. ಇದರಲ್ಲಿ ಆಟಗಾರ ಮತ್ತು ಅವರ ಕುಟುಂಬದ ಕೊಡುಗೆ ಇದೆ. ಸರ್ಕಾರದ ವಿಷಯದಲ್ಲೂ ಅದೇ ಆಗುತ್ತದೆ. ಇಂಥ ಬೆಳವಣಿಗೆಗಳು ಅತ್ಯಂತ ದುಃಖಕರವಾಗಿದೆ ಎಂದು ಹರಿಯಾಣದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿದ ನಂತರ ಕುಸ್ತಿ ವಿವಾದದ ಕುರಿತಾಗಿ ಯೋಗೇಶ್ವರ್ ದತ್ ಬೇಸರ ವ್ಯಕ್ತಪಡಿಸಿದರು.

ವಿವಾದದ ಹಿಂದೆ ಕಾಂಗ್ರೆಸ್ ಕೈವಾಡ: ಕುಸ್ತಿ ಆಟಗಾರರ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ದತ್ ಆರೋಪಿಸಿದ್ದಾರೆ. ಈ ಧಾರಾವಾಹಿಯ ಸ್ಕ್ರಿಪ್ಟ್ ಈಗಾಗಲೇ ಸಿದ್ಧಗೊಂಡಿದೆ. ಲೋಕಸಭೆ ಚುನಾವಣೆವರೆಗೂ ಈ ವಿಷಯವನ್ನು ಮುಂದುವರಿಸಲು ಅವರು ಬಯಸುತ್ತಾರೆ. ರಾಹುಲ್ ಗಾಂಧಿ, ದೀಪೇಂದ್ರ ಹೂಡಾ, ಭೂಪೇಂದ್ರ ಹೂಡಾ ಮತ್ತು ಪ್ರಿಯಾಂಕಾ ಗಾಂಧಿ ಇದರ ಹಿಂದಿದ್ದಾರೆ ಎಂದು ದೂರಿದರು.

ಪ್ರಶಸ್ತಿ ಹಿಂದಿರುಗಿಸುವುದು ಕುಸ್ತಿಪಟುಗಳ ವೈಯಕ್ತಿಕ ನಿರ್ಧಾರವಾಗಬಹುದು. ಆದರೆ ಈ ವಿವಾದವು ಕುಸ್ತಿ ಎಂಬ ಕ್ರೀಡೆಗೆ ಅವಮಾನ ಉಂಟುಮಾಡುತ್ತದೆ. ಕುಸ್ತಿ ಆಟದಲ್ಲಿ ವರ್ಷವಿಡೀ ನಡೆಯುತ್ತಿರುವ ಸಮಸ್ಯೆಗಳಿಂದಾಗಿ ಇದು ಜೂನಿಯರ್ ಮತ್ತು ಸಬ್ ಜೂನಿಯರ್ ಆಟಗಾರರ ಆಟದ ಮೇಲೂ ಕೆಟ್ಟ ಪರಿಣಾಮ ಬೀರುತ್ತಿದೆ. ಅವರು ದಿನವೂ ನಷ್ಟ ಅನುಭವಿಸುತ್ತಿದ್ದಾರೆ. ಅವರ ಮಾತು ಕೇಳುವವರೇ ಇಲ್ಲದ ಕಾರಣ ಮಾತನಾಡಲೂ ಆಗದಂತಹ ಪರಿಸ್ಥಿತಿ ಇದೆ. ಭಾರತ ಸರ್ಕಾರ ಮತ್ತು ಕ್ರೀಡಾ ಸಚಿವಾಲಯವು ಈ ವಿಷಯವನ್ನು ಆದಷ್ಟು ಬೇಗ ಪರಿಹರಿಸಿ ಮತ್ತು ಕುಸ್ತಿ ಆಟವನ್ನು ಉಳಿಸಬೇಕೆಂದು ದತ್ ವಿನಂತಿಸಿದರು.

ಆಟಗಾರರ ವಿವಾದಾತ್ಮಕ ವಿಷಯ ಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕಿದ್ದು, ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಫೆಡರೇಶನ್‌ಗೆ ಸಂಬಂಧಿಸಿದಂತೆ ಚುನಾವಣೆಗಳು ನ್ಯಾಯಯುತವಾಗಿವೆ. ಹೋರಾಟಗಾರರು ಫೆಡರೇಶನ್‌ನಲ್ಲಿ ಮಹಿಳಾ ಪದಾಧಿಕಾರಿಗಳನ್ನು ಬಯಸಿದ್ದರೆ, ಅವರು ಕಾರ್ಯದರ್ಶಿ ಹುದ್ದೆಗೆ ಮತ್ತು ಜೂನಿಯರ್ ಉಪಾಧ್ಯಕ್ಷ ಸ್ಥಾನಕ್ಕೆ ಮಹಿಳೆಯರ ಹೆಸರನ್ನು ನೀಡಬೇಕಾಗಿತ್ತು. ಆದರೆ ಈಗಿನ ಬೆಳವಣಿಗೆಗಳನ್ನು ನೋಡಿದರೆ ವಿವಾದ ಸಂಪೂರ್ಣವಾಗಿ ರಾಜಕೀಯ ಬಣ್ಣ ಪಡೆದುಕೊಂಡಿದೆ ಎಂದು ದತ್​ ವಿವರಿಸಿದರು.

ಇದನ್ನೂ ಓದಿ: ಕರ್ತವ್ಯ ಪಥದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಇಟ್ಟ ವಿನೇಶ್ ಫೋಗಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.