ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಮತ್ತು ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ದೇಶದ ಅಗ್ರ ಕುಸ್ತಿಪಟುಗಳು ರಾಷ್ಟ್ರೀಯ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಸರ್ವಾಧಿಕಾರಿ ಧೋರಣೆ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು. ಕೈಸರ್‌ಗಂಜ್‌ನ ಬಿಜೆಪಿ ಸಂಸದರೂ ಆಗಿರುವ ಸಿಂಗ್ ಅವರು ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ನಡೆಸುತ್ತಿರುವ ರೀತಿಯಿಂದ ಅವರು ಬೇಸರಗೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಜಂತರ್ ಮಂತರ್‌ನಲ್ಲಿ ಸಮಾವೇಶಗೊಂಡಿದ್ದ 30 ಕುಸ್ತಿಪಟುಗಳು: ಬಜರಂಗ್, ವಿನೇಶ್, ರಿಯೊ ಒಲಿಂಪಿಕ್ಸ್ ಪದಕ ವಿಜೇತೆ ಸಾಕ್ಷಿ ಮಲಿಕ್, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ಸರಿತಾ ಮೋರ್, ಸಂಗೀತಾ ಫೋಗಟ್, ಸತ್ಯವರ್ತ್ ಮಲಿಕ್, ಜಿತೇಂದರ್ ಕಿನ್ಹಾ ಮತ್ತು ಸಿಡಬ್ಲ್ಯೂಜಿ ಪದಕ ವಿಜೇತ ಸುಮಿತ್ ಮಲಿಕ್ ಸೇರಿದಂತೆ 30 ಕುಸ್ತಿಪಟುಗಳು ಜಂತರ್ ಮಂತರ್‌ನಲ್ಲಿ ಇಂದು ಸಮಾವೇಶಗೊಂಡಿದ್ದರು.
ನಮ್ಮ ಹೋರಾಟ ಸರ್ಕಾರ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರದ ವಿರುದ್ಧ ಅಲ್ಲ: ನಮ್ಮ ಹೋರಾಟ ಸರ್ಕಾರ ಅಥವಾ ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್‌ಎಐ) ವಿರುದ್ಧ ಅಲ್ಲ. ಇದು WFI ವಿರುದ್ಧ ಮಾತ್ರ. 'ಯೇ ಅಬ್ ಆರ್ ಪಾರ್ ಕಿ ಲಡೈ ಹೈ' (ಇದು ಅಂತ್ಯದವರೆಗೆ ಹೋರಾಟ). ’’ಕುಸ್ತಿಪಟುಗಳು ಫೆಡರೇಶನ್ ಅಧ್ಯಕ್ಷರು ನಡೆಸುತ್ತಿರುವ ಸರ್ವಾಧಿಕಾರವನ್ನು ಸಹಿಸಲು ಆಗುವುದಿಲ್ಲ‘‘ ಎಂದು ಬಜರಂಗ್ ಪುನಿಯಾ ಹೇಳಿದರು.
ತರಬೇತುದಾರರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ: ಅಧ್ಯಕ್ಷರ ವರ್ತನೆ ಬಗ್ಗೆ ಮಾತನಾಡಿದ ವಿನೇಶ್ ಫೋಗಟ್, ’’ತರಬೇತುದಾರರು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಫೆಡರೇಶನ್‌ನ ಪರ ಇರುವ ಕೆಲವು ತರಬೇತುದಾರರು ಮಹಿಳಾ ಕೋಚ್‌ಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ಅವರು ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಾರೆ. ಡಬ್ಲ್ಯುಎಫ್‌ಐ ಅಧ್ಯಕ್ಷರು ಅನೇಕ ಹುಡುಗಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಸೋಲಿನ ನಂತರ, WFI ಅಧ್ಯಕ್ಷರು ನನ್ನನ್ನು 'ಖೋಟಾ ಸಿಕ್ಕಾ' ಎಂದು ಕರೆದರು. ಡಬ್ಲ್ಯುಎಫ್‌ಐ ನನಗೆ ಮಾನಸಿಕ ಹಿಂಸೆ ನೀಡಿದೆ. ನಾನು ಪ್ರತಿದಿನ ನನ್ನ ಜೀವನವನ್ನು ಕೊನೆಗೊಳಿಸಲು ಯೋಚಿಸುತ್ತಿದ್ದೆ. ಯಾವುದೇ ಕುಸ್ತಿಪಟುವಿಗೆ ಏನಾದರೂ ಸಂಭವಿಸಿದರೆ, ಅದರ ಜವಾಬ್ದಾರಿಯು WFI ಅಧ್ಯಕ್ಷರ ಮೇಲಿರುತ್ತದೆ‘‘ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಚಿನ್, ಕೊಹ್ಲಿ ದಾಖಲೆ ಮುರಿದ ದ್ವಿಶತಕ ವೀರ: ಇನ್ನೂರರ ಗಡಿ ಮುಟ್ಟಿದ ಅತ್ಯಂತ ಕಿರಿಯ ಗಿಲ್
ಬಜರಂಗ್ ಪುನಿಯಾ: ’’ಭಾರತದ ಕುಸ್ತಿ ಒಕ್ಕೂಟದ ನಾಯಕತ್ವವನ್ನು ಬದಲಾಯಿಸಬೇಕೆಂದು ನಾವು ಬಯಸುತ್ತೇವೆ. ಪ್ರಧಾನಿ ಮತ್ತು ಗೃಹ ಸಚಿವರು ನಮಗೆ ಬೆಂಬಲ ನೀಡುತ್ತಾರೆ ಎಂದು ನಾವು ಭಾವಿಸುತ್ತೇವೆ‘‘ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ
ಕಳವಳ ಹಂಚಿಕೊಂಡ ಇತರ ಕುಸ್ತಿಪಟುಗಳು: ಅವರು (ಫೆಡರೇಶನ್ ಅಧ್ಯಕ್ಷ) ನಮ್ಮ ವೈಯಕ್ತಿಕ ಜೀವನದಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆ ಮತ್ತು ನಮಗೆ ತೊಂದರೆ ನೀಡುತ್ತಾರೆ. ಅವರು ನಮ್ಮನ್ನು ಶೋಷಣೆ ಮಾಡುತ್ತಿದ್ದಾರೆ. ನಾವು ಒಲಿಂಪಿಕ್ಸ್‌ಗೆ ಹೋದಾಗ ನಮಗೆ ಫಿಸಿಯೋ ಮತ್ತು ಕೋಚ್ ಇರಲಿಲ್ಲ. ನಾವು ಧ್ವನಿ ಎತ್ತಿದ್ದರಿಂದ ನಮಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಇನ್ನೂ ಕೆಲ ಕುಸ್ತಿಪಟುಗಳು ಆರೋಪಿಸಿದರು.
ಇದನ್ನೂ ಓದಿ:ಶುಭಮನ್ ಗಿಲ್ ದಾಖಲೆಯ ದ್ವಿಶತಕ: ನ್ಯೂಜಿಲ್ಯಾಂಡ್ಗೆ ಬೃಹತ್ ಗೆಲುವಿನ ಗುರಿ ನೀಡಿದ ಭಾರತ