ETV Bharat / sports

ಸಾಗರ್​ ರಾಣಾ ಕೊಲೆ ಪ್ರಕರಣ: 6 ದಿನಗಳ ಪೊಲೀಸ್ ಕಸ್ಟಡಿಗೆ ಕುಸ್ತಿಪಟು ಸುಶೀಲ್ ಕುಮಾರ್​ - Chhatrasal Stadium

ಮೇ 4 ರಂದು ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದಿದ್ದ ಗಲಾಟೆಯಲ್ಲಿ ಸಾಗರ್​ ರಾಣ ಎಂಬ 23 ವರ್ಷದ ಕುಸ್ತಿಪಟು ಕೊಲೆಯಾಗಿದ್ದು, ಆತನ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯಗಳಾಗಿದ್ದವು. ಈ ಪ್ರಕರಣದಲ್ಲಿ 2008 ಮತ್ತು 2012ರ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್​ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

6 ದಿನಗಳ ಪೊಲೀಸ್ ಕಸ್ಟಡಿಗೆ ಕುಸ್ತಿಪಟು ಸುಶೀಲ್ ಕುಮಾರ್​

author img

By

Published : May 23, 2021, 8:15 PM IST

ನವದೆಹಲಿ: ಕುಸ್ತಿಪಟು ಸಾಗರ್​ ರಾಣಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಒಲಿಂಪಿಯನ್​ ಸುಶೀಲ್ ಕುಮಾರ್ ಮತ್ತು ಜೊತೆಗಾರ ಅಜಯ್​ ಕುಮಾರ್​ರನ್ನು ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಮೇ 4 ರಂದು ಛತ್ರಸಾಲ್ ಸ್ಟೇಡಿಯಂನಲ್ಲಿ ನಡೆದಿದ್ದ ಗಲಾಟೆಯಲ್ಲಿ ಸಾಗರ್​ ರಾಣಾ ಎಂಬ 23 ವರ್ಷದ ಕುಸ್ತಿಪಟು ಕೊಲೆಯಾಗಿದ್ದು, ಆತನ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯಗಳಾಗಿದ್ದವು. ಈ ಪ್ರಕರಣದಲ್ಲಿ 2008 ಮತ್ತು 2012ರ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್​ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ಕಳೆದ ಎರಡು ವಾರಗಳಿಂದ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್​ ಶನಿವಾರ ಪಂಜಾಬ್​ನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದರು. ಇಂದು ಅವರು ದೆಹಲಿಯ ಜಿಲ್ಲಾ ನ್ಯಾಯಾಲಕ್ಕೆ ಹಾಜರು ಪಡಿಸಲಾಗಿತ್ತು. ಪೊಲೀಸರ ಪರ ವಕೀಲ ವಿಚಾರಣೆಗಾಗಿ 12 ದಿನಗಳ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡಿದ್ದರು. ಆದರೆ ಇವರಿಬ್ಬರನ್ನು ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲು ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಆದೇಶಿಸಿದರು.

ದೆಹಲಿ ಪೊಲೀಸರ ಪರವಾಗಿ ವಕೀಲ ಅತುಲ್ ಶ್ರೀವಾಸ್ತವ ಮತ್ತು ಆರೋಪಿ ಸುಶೀಲ್ ಕುಮಾರ್ ಅವರ ಪರ ವಿಕ್ರಮ್ ಸಿಂಗ್ ಜಖರ್​ ವಾದ ಮಂಡಿಸಿದರು.

ಇದನ್ನು ಓದಿ: ಕೊಹ್ಲಿ ಅಲ್ಲ.. ಈತ ಕ್ರಿಕೆಟ್ ಜಗತ್ತಿನಲ್ಲಿ​ ಅತಿ ಹೆಚ್ಚು ವೇತನ ಪಡೆಯುತ್ತಿರುವ ಕ್ಯಾಪ್ಟನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.