ETV Bharat / sports

World Dwarf Games 2023: ಕುಬ್ಜರ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನ ಬಾಚಿಕೊಂಡ ಹುಬ್ಬಳ್ಳಿಯ ದೇವಪ್ಪ ಮೋರೆ

World Dwarf Games 2023: ಧಾರವಾಡದ ದೇವಪ್ಪ ಮೋರೆ ಅವರು ಕುಬ್ಜರ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ 60 ಮೀಟರ್ ಹಾಗೂ 100 ಮೀಟರ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

World Dwarf Games 2023
World Dwarf Games 2023
author img

By

Published : Aug 5, 2023, 4:23 PM IST

Updated : Aug 5, 2023, 6:47 PM IST

ಕುಬ್ಜರ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಎರಡು ಚಿನ್ನ ಬಾಚಿಕೊಂಡ ದೇವಪ್ಪ ಮೋರೆ

ಹುಬ್ಬಳ್ಳಿ: ಧಾರವಾಡದ ಕುಬ್ಜ ಕ್ರೀಡಾಪಟು ದೇವಪ್ಪ ಮೋರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿಯ ಪತಾಕೆಯನ್ನು ಹಾರಿಸಿದ್ದಾರೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕಾಡನಕೊಪ್ಪ ಗ್ರಾಮದ ಪ್ರತಿಭೆ ದೇವಪ್ಪ ಮೋರೆ ಕುಬ್ಜರ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ 60 ಮೀಟರ್ ಹಾಗೂ 100 ಮೀಟರ್ ಅಥ್ಲೆಟಿಕ್ಸ್ ನಲ್ಲಿ ಚಿನ್ನದ ಪದಕಗಳನ್ನು ಗೆದ್ದು ಬೀಗಿದ್ದಾರೆ.

ಜರ್ಮನ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಕುಬ್ಜರ ಅಥ್ಲೆಟಿಕ್ಸ್​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದೇವಪ್ಪ ಮೋರೆ 60 ಮತ್ತು 100 ಮೀಟರ್​ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಬಡತನದಲ್ಲಿಯೇ ಸಾಧನೆಗೆ ಸೂಕ್ತವಾದ ತಯಾರಿ ನಡೆಸಿದ್ದ ದೇವಪ್ಪ ಮೋರೆ ಜರ್ಮನ್ ದೇಶಕ್ಕೆ ಹೋಗಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಇದಕ್ಕಾಗಿ ಅವರು ಸಾಕಷ್ಟು ಪರಿಶ್ರಮಪಟ್ಟಿದ್ದರು. ಈ ಬಗ್ಗೆ ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಕ್ರೀಡಾಭಿಮಾನಿಗಳು ಆರ್ಥಿಕ ನೆರವು ನೀಡಿದ್ದರು. ಈಗ ದೇವಪ್ಪ ಮೋರೆಯವರು ಉತ್ತಮ ಸಾಧನೆ ಮಾಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದಾರೆ.

ದೇವಪ್ಪ ಮೋರೆ ಅವರ ಸಾಧನೆ: ರಾಷ್ಟ್ರದಲ್ಲಿ ನಡೆಯುವ ಕುಬ್ಜರ ಅಥ್ಲೆಟಿಕ್ಸ್​ನಲ್ಲಿ 100, 200, 50 ಮೀಟರ್ ಓಟದಲ್ಲಿ ಚಿನ್ನ, ಬೆಳ್ಳಿ, ಕಂಚನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ. ಅಮೆರಿಕ, ಕೆನಡಾದಲ್ಲಿ ನಡೆದಿರುವ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಚೆನ್ನೈನಲ್ಲಿ ನಡೆದ ಟ್ರಯಲ್ಸ್‌ನಲ್ಲಿ 50, 100, 200 ಮೀ. ಓಟಕ್ಕೆ ದೇವಪ್ಪ ಮೋರೆ ಆಯ್ಕೆಯಾಗಿದ್ದರು.

ಹುಬ್ಬಳ್ಳಿಯ ಶಿವಾನಂದ ಗುಂಜಾಳ ತರಬೇತುದಾರರು ಹಾಗೂ ವ್ಯವಸ್ಥಾಪಕರಾಗಿರುವ ರಾಷ್ಟ್ರೀಯ ಕುಬ್ಜರ ತಂಡ ಜುಲೈ 26 ರಂದು ಜರ್ಮನಿಗೆ ಹಾರಿತ್ತು. ಇದಕ್ಕೂ ಮುನ್ನ ಸ್ವತಃ ರಾಜ್ಯಪಾಲ ಥಾವರ್‌ಚಂದ ಗೆಹ್ಲೊಟ್ ರಾಜಭವನದಲ್ಲಿ ತಂಡಕ್ಕೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದರು.

ಮಂಜುಳಾ ಶಿವಾನಂದ ಗೊರಗುದ್ದಿ ತ್ರವಳಿ ಪದಕ: ಜರ್ಮನಿಯಲ್ಲಿ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬೆಳಗಾವಿಯ ಚಿಕ್ಕನಂದಿ ಗ್ರಾಮದ ಮಂಜುಳಾ ಶಿವಾನಂದ ಗೊರಗುದ್ದಿ ಅವರು ಒಂದೊಂದು ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದಿದ್ದರು. ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಮಂಜುಳಾ ಶಿವಾನಂದ ಗೊರಗುದ್ದಿ ಅವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಮುಡಿಗೇರಿಸಿಕೊಂಡರೆ, ಚಕ್ರ ಎಸೆತದಲ್ಲಿ ಎರಡನೇ ಸ್ಥಾನ ಗಳಿಸುವ ಮೂಲಕ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಹಾಗೆಯೇ, ಜಾವಲಿನ್ ಥ್ರೋದಲ್ಲಿ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇದನ್ನೂ ಓದಿ: ವಿಶ್ವ ಕುಬ್ಜರ ಕ್ರೀಡಾಕೂಟ: ಸಾಲ ಮಾಡಿ ಜರ್ಮನಿಗೆ ಹೋಗಿದ್ದ ಬೆಳಗಾವಿ ಕುವರಿ ಮುಡಿಗೆ ಮೂರು ಪದಕ

ಇದನ್ನೂ ಓದಿ: ಕುಬ್ಜರ ಅಥ್ಲೆಟಿಕ್​ನ ಎತ್ತರದ ಸಾಧಕ ಹುಬ್ಬಳ್ಳಿಯ ದೇವಪ್ಪ ಮೋರೆ; ಜರ್ಮನಿಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಬೇಕಿದೆ ಸರ್ಕಾರದ ನೆರವಿನ ಹಸ್ತ

Last Updated : Aug 5, 2023, 6:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.