ಮುಂಬೈ : ಫಿಫಾ ವಿಶ್ವಕಪ್ ಆಡುವ ಕನಸನಲ್ಲಿ ವರ್ಷವಿಡೀ ಎಎಫ್ಸಿ ಏಷ್ಯನ್ ಕಪ್ಗಾಗಿ ತಯಾರಿ ನಡೆಸಿಕೊಂಡಿದ್ದ ಭಾರತ ಮಹಿಳಾ ತಂಡಕ್ಕೆ ಕೋವಿಡ್ 19 ಕನಸು ಛಿದ್ರಗೊಳಿಸಿದ್ದು, ಟೂರ್ನಿಯಿಂದ ಹೊರಬೀಳುವಂತೆ ಮಾಡಿದೆ.
ನಾಯಕಿ ಆಶಾಲತಾ ದೇವಿಯಿಂದ ಹಿಡಿದು ತಂಡದ ಕಿರಿಯ ಆಟಗಾರ್ತಿ ಹೇಮಮ್ ಶಿಲ್ಕಿ ದೇವಿಯವರೆಗೆ ಈ ಏಷ್ಯನ್ ಕಪ್ ಜೀವಮಾನದಲ್ಲಿ ಸಿಗುವ ಒಂದು ಅವಕಾಶವಾಗಿತ್ತು. ಎಲ್ಳಾ ಆಟಗಾರ್ತಿಯರು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದರು, ಏಕೆಂದರೆ ಇದು ಅವರನ್ನು 2023 ರ ವಿಶ್ವಕಪ್‌ಗೆ ಅರ್ಹತೆ ತಂದುಕೊಡುತ್ತಿತ್ತು. ಆದರೆ ಕೋವಿಡ್ ಮಹಾಮಾರಿ ಅವರ ಹೃದಯವನ್ನು ಛಿದ್ರಗೊಳಿಸಿದೆ.
ಶನಿವಾರ ಚೈನೀಸ್ ತೈಪೆ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡದ 12 ಆಟಗಾರರಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿತ್ತು. ಆದರೆ ಪಂದ್ಯಕ್ಕೂ ಮುನ್ನ 13 ಸದಸ್ಯರ ತಂಡವನ್ನು ಸಿದ್ಧಪಡಿಸುವಲ್ಲಿ ಭಾರತ ತಂಡ ವಿಫಲವಾಗಿದ್ದರಿಂದ ಪಂದ್ಯವನ್ನು ರದ್ದುಗೊಳಿಸಿ ಮುಂದೂಡಲಾಗಿತ್ತು. ನಂತರ ಟೂರ್ನಿಯಿಂದಲೇ ಹಿಂದೆ ಸರಿಯಲು ಭಾರತೀಯ ಫುಟ್ಬಾಲ್ ತಂಡ ನಿರ್ಧರಿಸಿದೆ ಎಂದು ಏಷ್ಯಾ ಫುಟ್‌ಬಾಲ್ ಕಾನ್ಫೆಡರೇಷನ್ ಸೋಮವಾರ ಖಚಿತಪಡಿಸಿದೆ.
ಜಾಹೀರಾತು- ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದನ್ನೂ ಓದಿ:2ನೇ ಬಾರಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ ಪಡೆದ ಮಂಧಾನ.. ಈ ವರ್ಷ ಏಕೈಕ ಭಾರತೀಯೆ