ETV Bharat / sports

ಇಂದು ವಿಶ್ವ ಬಾಸ್ಕೆಟ್‌ಬಾಲ್ ದಿನ... ಏನಿದರ ವಿಶೇಷ?

ಬಾಸ್ಕೆಟ್​​ಬಾಲ್​ ಹೆಚ್ಚು ಇಷ್ಟಪಡುವ ಮತ್ತು ವ್ಯಾಪಕವಾಗಿ ಅಭ್ಯಾಸ ಮಾಡುವ ಕ್ರೀಡೆಗಳಲ್ಲಿ ಒಂದಾಗಿದೆ. FIBAದ ಅಂದಾಜು ಮಾಡಿರುವ ಪ್ರಕಾರ, ಪ್ರಸ್ತುತ ವಿಶ್ವಾದ್ಯಂತ ಕನಿಷ್ಠ 450 ಮಿಲಿಯನ್ ಬ್ಯಾಸ್ಕೆಟ್‌ಬಾಲ್ ಆಟಗಾರರಿದ್ದಾರೆ.

World Basketball Day 2023 : A day to honour players
ಇಂದು ವಿಶ್ವ ಬಾಸ್ಕೆಟ್‌ಬಾಲ್ ದಿನ... ಏನಿದರ ವಿಶೇಷ?
author img

By ETV Bharat Karnataka Team

Published : Dec 21, 2023, 7:00 AM IST

ಹೈದರಾಬಾದ್: ಪ್ರತಿ ವರ್ಷ ಡಿಸೆಂಬರ್ 21 ರಂದು ವಿಶ್ವ ಬ್ಯಾಸ್ಕೆಟ್‌ಬಾಲ್ ದಿನವನ್ನು ಆಚರಿಸಲಾಗುತ್ತದೆ. ಕ್ರೀಡೆಯ ಅಭಿವೃದ್ಧಿ ಹಾಗೂ ಆಟವನ್ನ ಗೌರವಿಸುವ ಭಾಗವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವ್ಯಾಪಾರ, ಶಾಂತಿ ಮತ್ತು ರಾಜತಾಂತ್ರಿಕತೆಯ ಕ್ಷೇತ್ರಗಳಲ್ಲಿ ಬ್ಯಾಸ್ಕೆಟ್‌ಬಾಲ್ ತನ್ನದೇ ಆದ ಮಹತ್ವವನ್ನು ಹೊಂದಿದೆ. ಏಕೆಂದರೆ ಇದು ಸಹಯೋಗ, ದೈಹಿಕ ಚಟುವಟಿಕೆ ಮತ್ತು ಪರಸ್ಪರ ಅವಲಂಬನೆಯ ಆಧಾರದ ಮೇಲೆ ನಡೆಯುವ ಕ್ರೀಡೆಯಾಗಿದೆ. ಆಟಗಾರರು ಒಬ್ಬರನ್ನೊಬ್ಬರು ಮಾನವೀಯತೆಯಿಂದ ಹೇಗೆಲ್ಲ ನಡೆದುಕೊಳ್ಳಬಹುದು ಎಂಬುದನ್ನು ತೋರಿಸುತ್ತದೆ.

ಬ್ಯಾಸ್ಕೆಟ್‌ಬಾಲ್ ಇತರ ಕ್ರೀಡೆಗಳಂತೆ ಒಂದು ಸೌಹಾರ್ದಯುತ ಆಟವಾಗಿದೆ. ಗಡಿಗಳು, ಸಂಸ್ಕೃತಿ ಮತ್ತು ಭಾಷೆಗಳನ್ನು ಒಳಗೊಂಡ ಒಂದು ಭಾವನಾತ್ಮಕ ಕ್ರೀಡೆಯಾಗಿದೆ. ಇದು ಎಲ್ಲಾ ಹಿನ್ನೆಲೆಯ ವ್ಯಕ್ತಿಗಳು ಪರಸ್ಪರ ಸಂವಹನ ನಡೆಸಲು, ತೊಡಗಿಸಿಕೊಳ್ಳಲು, ಅಡೆತಡೆಗಳನ್ನು ತೆಗೆದುಹಾಕಲು ಮತ್ತು ಶಾಂತಿಯನ್ನು ಸಾರುವ ಅತ್ಯಂತ ಮಹತ್ವದ ಕ್ರೀಡೆಯಾಗಿದೆ.

ಕ್ರೀಡೆಯ ಇತಿಹಾಸ ಹೀಗಿದೆ: ಕೆನಡಾದ ದೈಹಿಕ ಶಿಕ್ಷಕರಾದ ಡಾ. ಜೇಮ್ಸ್ ನೈಸ್ಮಿತ್ ಅವರು ಡಿಸೆಂಬರ್ 21, 1891 ರಂದು ಅಮೆರಿಕದ ಮ್ಯಾಸಚೂಸೆಟ್ಸ್‌ನ ಸ್ಪ್ರಿಂಗ್‌ಫೀಲ್ಡ್‌ನಲ್ಲಿರುವ ಇಂಟರ್‌ನ್ಯಾಶನಲ್ ವೈಎಂಸಿಎ ಟ್ರೈನಿಂಗ್ ಸ್ಕೂಲ್‌ನಲ್ಲಿ ಈ ಬಾಸ್ಕೆಟ್‌ಬಾಲ್ ಆಟವನ್ನು ಶೋಧಿಸಿದರು. ಚಳಿಗಾಲದ ಉದ್ದಕ್ಕೂ ತನ್ನ ವಿದ್ಯಾರ್ಥಿಗಳನ್ನು ಸಕ್ರಿಯವಾಗಿಡಲು ಅವರು ಈ ಆಟವನ್ನು ಅಭಿವೃದ್ಧಿ ಪಡಿಸಿದರು.

• ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ನಿರ್ಣಯ ಅಂಗೀಕರಿಸುವ ಮೂಲಕ ಆಗಸ್ಟ್ 25, 2023 ಅನ್ನು ವಿಶ್ವ ಬಾಸ್ಕೆಟ್‌ಬಾಲ್ ದಿನವೆಂದು ಘೋಷಿಸಲಾಯಿತು.

• ಇಂಟರ್ನ್ಯಾಷನಲ್ ಬಾಸ್ಕೆಟ್‌ಬಾಲ್ ಫೆಡರೇಶನ್, ಬಾಸ್ಕೆಟ್‌ಬಾಲ್ ವಿಶ್ವಕಪ್ 2023ರನ್ನು ಆಯೋಜಿಸಿತ್ತು. ವಿಶ್ವಾದ್ಯಂತ ಶಾಂತಿ ಮತ್ತು ಸಮೃದ್ಧಿಗಾಗಿ ಈ ಕ್ರೀಡಾದಿನವನ್ನು ಆಚರಿಸಲಾಗುತ್ತದೆ. ಇಂಡೋನೇಷ್ಯಾ, ಜಪಾನ್ ಮತ್ತು ಫಿಲಿಪೈನ್ಸ್ ಬಾಸ್ಕೆಟ್​ ಬಾಲ್​​ ವಿಶ್ವಕಪ್​ ಆಯೋಜಿಸುವ ಮೂಲಕ ಬಾಸ್ಕೆಟ್​ಬಾಲ್​​ಗೆ ಹೆಚ್ಚಿನ ಮನ್ನಣೆ ನೀಡಿವೆ.

• ಈ ದಿನವು ಪರಸ್ಪರ ಸಹಕಾರ, ತಂಡದ ಕೆಲಸ ಮತ್ತು ಸಂವಹನವನ್ನು ಉತ್ತೇಜಿಸುತ್ತದೆ ಮತ್ತು ಈ ಗುಣಲಕ್ಷಣಗಳು ಹೇಗೆ ಸಾಮರಸ್ಯ ಮತ್ತು ತಿಳಿವಳಿಕೆ ಉತ್ತೇಜಿಸುತ್ತದೆ ಎಂಬುದನ್ನು ಎತ್ತಿ ತೋರಿಸುತ್ತದೆ.

ಬ್ಯಾಸ್ಕೆಟ್​​​ಬಾಲ್​​​ನ ಕೆಲ ಇಂಟ್ರೆಸ್ಟಿಂಗ್​ ಮಾಹಿತಿ: ಬ್ಯಾಸ್ಕೆಟ್‌ಬಾಲ್ ಇಂದು ಪ್ರಪಂಚದಲ್ಲಿ ಹೆಚ್ಚು ಇಷ್ಟಪಡುವ ಮತ್ತು ವ್ಯಾಪಕವಾಗಿ ಅಭ್ಯಾಸ ಮಾಡುವ ಕ್ರೀಡೆಗಳಲ್ಲಿ ಒಂದಾಗಿದೆ. FIBA ಬ್ಯಾಸ್ಕೆಟ್‌ಬಾಲ್ ಮೇಲ್ವಿಚಾರಣೆ ಮಾಡುವ ಸಂಸ್ಥೆ, ಪ್ರಸ್ತುತ ವಿಶ್ವಾದ್ಯಂತ ಕನಿಷ್ಠ 450 ಮಿಲಿಯನ್ ಬ್ಯಾಸ್ಕೆಟ್‌ಬಾಲ್ ಆಟಗಾರರಿದ್ದಾರೆ.

ಬ್ಯಾಸ್ಕೆಟ್‌ಬಾಲ್ ಉತ್ತರ ಅಮೆರಿಕಾದಲ್ಲಿ ವಿಶೇಷವಾಗಿ ಅಮೆರಿಕ, ಯುರೋಪ್, ಏಷ್ಯಾ ಮತ್ತು ಇತರ ಪ್ರದೇಶಗಳಲ್ಲಿ ಹೆಚ್ಚಿನ ಆಟಗಾರರು ಮತ್ತು ಅದರ ಅನುಯಾಯಿಗಳನ್ನು ಹೊಂದಿದೆ.

1936 ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಪ್ರಾರಂಭವಾದಾಗಿನಿಂದ ಬ್ಯಾಸ್ಕೆಟ್‌ಬಾಲ್ ಸಹ ಒಲಿಂಪಿಕ್​ನ ಒಂದು ಭಾಗವಾಗಿದೆ. ಬ್ಯಾಸ್ಕೆಟ್‌ಬಾಲ್ ಆಫ್ರಿಕಾ ಲೀಗ್ (BAL) ಅನ್ನು 2019 ರಲ್ಲಿ ಸ್ಥಾಪಿಸಲಾಯಿತು. ಆಫ್ರಿಕಾದಾದ್ಯಂತ 12 ಕ್ಲಬ್ ತಂಡಗಳೊಂದಿಗೆ ವೃತ್ತಿಪರ ಲೀಗ್ ಆಗಿ ಈ ಕ್ರೀಡೆ ಅಪಾರ ಜನ ಮನ್ನಣೆ ಗಳಿಸಿದೆ.

ಬ್ಯಾಸ್ಕೆಟ್‌ಬಾಲ್ ಅನ್ನು ಆಟವನ್ನು ಅಭಿವೃದ್ಧಿಪಡಿಸಿದ ಒಂದು ವರ್ಷದ ನಂತರ 1892 ರಲ್ಲಿ ಮಹಿಳೆಯರು ಸಹ ಕ್ರೀಡೆಯನ್ನು ಆಡಲು ಪ್ರಾರಂಭಿಸಿದರು. 1976 ರ ಮಾಂಟ್ರಿಯಲ್ ಗೇಮ್ಸ್‌ನಲ್ಲಿ ಮಹಿಳಾ ಬ್ಯಾಸ್ಕೆಟ್‌ಬಾಲ್ ಪರಿಚಯಿಸಲಾಯಿತು.

ಸಾಮಾನ್ಯವಾಗಿ, ಬಾಸ್ಕೆಟ್‌ಬಾಲ್ ಒಂದು ಜಾಗತಿಕ ಮಟ್ಟದ ಕ್ರೀಡೆಯಾಗಿದ್ದು, ಜೋರ್ಡಾನ್, ಮ್ಯಾಜಿಕ್, ಕರೀಮ್, ಬರ್ಡ್, ಕೋಬ್, ಲೆಬ್ರಾನ್ ಮತ್ತು ಕರಿಗಳಂತಹ ಪ್ರಸಿದ್ಧ ಹೆಸರುಗಳ ಹೊರತಾಗಿಯೂ, ಎಲ್ಲಾ ವಯಸ್ಸಿನ ಮತ್ತು ಸಾಮರ್ಥ್ಯದ ವ್ಯಕ್ತಿಗಳಿಂದ ಈ ಕ್ರೀಡೆಯನ್ನು ಆಡಲಾಗುತ್ತದೆ.

ಆರಂಭದಲ್ಲಿ ಚೆಂಡನ್ನು ಹಿಡಿಯಲು ಹಣ್ಣಿನ ಬುಟ್ಟಿಗಳನ್ನು ಬಳಸಲಾಗುತ್ತಿತ್ತು ಮತ್ತು ಆಟಕ್ಕೆ ಪ್ರಮಾಣಿತ ಸಾಕರ್ ಚೆಂಡನ್ನು ಬಳಸಲಾಗುತ್ತಿತ್ತು. ಪ್ರತಿ ಬ್ಯಾಸ್ಕೆಟ್​​​​​​​​ನ ನಂತ ರೆಫರಿಗಳು ಚೆಂಡನ್ನು ಹಿಂಪಡೆಯಬೇಕಾಗಿತ್ತು ಎಂಬುದನ್ನು ಗಮನಿಸಬೇಕಾಗುತ್ತದೆ. ನೈಸ್ಮಿತ್ 1891 ರಲ್ಲಿ "ಬ್ಯಾಸ್ಕೆಟ್‌ಬಾಲ್" ಎಂಬ ಪದವನ್ನು ಮೊದಲ ಬಾರಿಗೆ ಬಳಸಿದರು.

ಇದನ್ನು ಓದಿ:ಇಂದು ಅಂತಾರಾಷ್ಟ್ರೀಯ ಮಾನವ ಐಕ್ಯತಾ ದಿನ: ಏನಿದರ ಮಹತ್ವ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.