ಯೂಜೀನ್ (ಒರೆಗನ್, ಅಮೆರಿಕ): ಟೋಕಿಯೊ ಒಲಿಂಪಿಕ್ಸ್ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ, ಈಗ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಚಾಂಪಿಯನ್‌ಶಿಪ್‌ನ ನಾಲ್ಕನೇ ಪ್ರಯತ್ನದಲ್ಲಿ ನೀರಜ್ 88.13 ಮೀ. ದೂರ ಜಾವೆಲಿನ್ ಎಸೆಯುವ ಮೂಲಕ ರಜತ ಪದಕ ಪಡೆದರು. ತಮ್ಮ ಪ್ರಥಮ ಎಸೆತದಲ್ಲಿಯೇ 88.39 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ನೀರಜ್ ಪೈನಲ್ ಪ್ರವೇಶಿಸಿದ್ದರು.
-
This is the under-pressure 88.13m throw that took @Neeraj_chopra1 to podium at World Championship.
— Amanpreet Singh (@amanthejourno) July 24, 2022 " class="align-text-top noRightClick twitterSection" data="
The Olympic champion takes silver behind Anderson Peters (90.54).#WorldAthleticsChampionships pic.twitter.com/HrXF6hav4n
">This is the under-pressure 88.13m throw that took @Neeraj_chopra1 to podium at World Championship.
— Amanpreet Singh (@amanthejourno) July 24, 2022
The Olympic champion takes silver behind Anderson Peters (90.54).#WorldAthleticsChampionships pic.twitter.com/HrXF6hav4nThis is the under-pressure 88.13m throw that took @Neeraj_chopra1 to podium at World Championship.
— Amanpreet Singh (@amanthejourno) July 24, 2022
The Olympic champion takes silver behind Anderson Peters (90.54).#WorldAthleticsChampionships pic.twitter.com/HrXF6hav4n
ಗ್ರೆನೆಡಾ ದೇಶದ ಆ್ಯಂಡರ್ಸನ್ ಪೀಟರ್ಸ್ ಅವರು 90.54 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದರು. ಈ ಮೂಲಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಇದನ್ನೂ ಓದಿ: ಎಬಿಡಿ ಹೊಡಿ ಬಡಿ ಆಟದ ಅದ್ಭುತ ವಿಡಿಯೋ.. ಅಭಿಮಾನಿ ಕೆಲಸಕ್ಕೆ ಸೆಲ್ಯೂಟ್ ಹೊಡೆದ ಮಿ. 360!