ರೋಕ್ಲಾ(ಪೋಲೆಂಡ್): ಭಾರತ ಅಂಡರ್-19 ಮಿಕ್ಸಡ್ ರಿಕರ್ವ್ ಮತ್ತು ಪುರುಷರ ರಿಕರ್ವ್ ತಂಡ ರೋಕ್ಲಾದಲ್ಲಿ ನಡೆಯುತ್ತಿರುವ ಯೂತ್ ಆರ್ಚರಿ ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿವೆ.
ಅಂಡರ್ 18 ಪುರುಷರ ರಿಕರ್ವ್ ತಂಡದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತರಾದ ಬಿಶಾಲ್ ಚಾಂಗ್ಮಾಯಿ, ವಿಕ್ಕಿ ರುಹಾಲ್, ಅಮಿತ್ ಕುಮಾರ್ ಫ್ರಾನ್ಸ್ ತಂಡವನ್ನು 5-3ರಿಂದ ಮಣಿಸಿ ಚಿನ್ನದ ಪದಕ ಜಯಸಿದ್ದಾರೆ.
ಚಾಂಗ್ಮಾಯಿ ನಂತರ ತಮನ್ನ ಜೊತೆಗೂಡಿ ಮಿಶ್ರ ತಂಡದ ರಿಕರ್ವ್ ವಿಭಾಗದ ಫೈನಲ್‌ನಲ್ಲಿ ಜಪಾನ್ ಜೋಡಿಯ ವಿರುದ್ಧ 6-2 ಅಂಕಗಳ ಅಂತರದ ಆರಾಮದಾಯಕ ಜಯ ಸಾಧಿಸುವ ಮೂಲಕ ದಿನದ 2ನೇ ಚಿನ್ನದ ಪದಕ ಪಡೆದರು.
ಮಹಿಳೆಯರ ಅಂಡರ್-18 ವಿಭಾಗದಲ್ಲಿ ಮಂಜಿರಿ ಅಲೋನೆ, ಅವನಿ ಮತ್ತು ತಮನ್ನ ಕಂಚಿನ ಪದಕ ಪಂದ್ಯದಲ್ಲಿ ಜರ್ಮನಿ ತಂಡವನ್ನು 5-3ರಲ್ಲಿ ಮಣಿಸಿದರು. ಮಂಜಿರಿ ವೈಯಕ್ತಿಕ ವಿಭಾಗದಲ್ಲೂ ಕಂಚಿನ ಪದಕ ಪಡೆದರು.
ಇದನ್ನು ಓದಿ:World Archery Youth C'ship : ಅಮೆರಿಕಾ ಮಣಿಸಿ ಚಿನ್ನದ ಪದಕ ಗೆದ್ದ ಭಾರತ ಪುರುಷ & ಮಿಶ್ರ ತಂಡ