ETV Bharat / sports

Archery Championships: ವಿಶ್ವ ಆರ್ಚರಿ ಚಾಂಪಿಯನ್‌ಶಿಪ್​ನಲ್ಲಿ 'ಭಾರತೀ'ಯರಿಗೆ ಐತಿಹಾಸಿಕ ಚಿನ್ನ!

author img

By

Published : Aug 4, 2023, 5:15 PM IST

Updated : Aug 4, 2023, 6:17 PM IST

World Archery Championships: ವಿಶ್ವ ಆರ್ಚರಿ ಚಾಂಪಿಯನ್‌ಶಿಪ್​ನಲ್ಲಿ ಭಾರತದ ವನಿತೆಯರಾದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಮೆಕ್ಸಿಕೋ ತಂಡವನ್ನು ಸೋಲಿಸಿ ಚಿನ್ನ ಗೆದ್ದಿದ್ದಾರೆ.

World Archery Championships
ಮೊದಲ ಬಾರಿಗೆ ಚಿನ್ನ ಗೆದ್ದ ಭಾರತೀಯ ವನಿತೆಯರ ತಂಡ

ಬರ್ಲಿನ್ (ಜರ್ಮನಿ): ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಸ್ವಾಮಿ ಅವರಿದ್ದ ತಂಡ ದೇಶಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ. ಶುಕ್ರವಾರ ಬರ್ಲಿನ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಈ ಮಹಿಳಾ ಭಾರತೀಯ ಜೋಡಿ ಸ್ಮರಣೀಯ ಪದಕ ಸಾಧನೆ ಮಾಡಿತು.

  • Our GIRLS have created HISTORY 🔥🔥🔥
    India win GOLD medal in Compound Women's Team event at Archery World Championships.
    ➡️ Its 1ST EVER GOLD for India in Archery World Championships.
    ➡️ The trio of Jyothi Vennam, Aditi & Parneet beat WR 1 Mexico 235-229 in Final. pic.twitter.com/jrugVueIK5

    — India_AllSports (@India_AllSports) August 4, 2023 " class="align-text-top noRightClick twitterSection" data=" ">

ಫೈನಲ್ಸ್​ ಸ್ಪರ್ಧೆಯಲ್ಲಿ ಭಾರತದ ವನಿತೆಯರು 235 ಅಂಕ ಕಲೆಹಾಕಿದ್ದರಿಂದ ಮೆಕ್ಸಿಕನ್​ನ ತಂಡ ಸೋಲುಂಡಿತು. ಎದುರಾಳಿ ಆಟಗಾರ್ತಿಯರಾದ ಡಾಫ್ನೆ ಕ್ವಿಂಟೆರೊ, ಅನಾ ಸೋಫಾ ಹೆರ್ನಾಂಡೆಜ್ ಜಿಯೋನ್ ಮತ್ತು ಆಂಡ್ರಿಯಾ ಬೆಸೆರಾ ಅವರು ಫೈನಲ್​ನಲ್ಲಿ 229 ಅಂಕ ಗಳಿಸಲಷ್ಟೇ ಶಕ್ತರಾದರು. ಇದರಿಂದ ಭಾರತ 6 ಅಂಕಗಳ ಅಂತರದ ಗೆಲುವು ದಾಖಲಿಸಿತು.

ಅರ್ಹತಾ ಸುತ್ತಿನಲ್ಲಿ ಎರಡನೇ ಸ್ಥಾನದಲ್ಲಿದ್ದ ಭಾರತೀಯರು ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕೊಲಂಬಿಯಾವನ್ನು 220-216 ಅಂಕಗಳಿಂದ ಸೋಲಿಸಿ ಪ್ರಶಸ್ತಿ ಸುತ್ತು ಪ್ರವೇಶಿಸಿದ್ದರು. ಮೊದಲ ಸುತ್ತಿನಲ್ಲಿ ಬೈ ಪಡೆದ ನಂತರ, ಭಾರತೀಯ ಮಹಿಳಾ ಆಟಗಾರ್ತಿಯರ ತಂಡವು ಕ್ರಮವಾಗಿ ಚೈನೀಸ್ ತೈಪೆ ಮತ್ತು ಟರ್ಕಿಯನ್ನು ಕ್ವಾರ್ಟರ್-ಫೈನಲ್ ಮತ್ತು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಮಣಿಸಿದರು.

  • Prior to this Gold medal at Archery World Championships, India had won 11 medals:
    ➡️ 9 Silver & 2 Bronze
    ➡️ 4 medals in Recurve (All silver) & 7 in Compound (5 Silver & 2 Bronze).
    PS: Compound is not an Olympic event. https://t.co/NuOtRJwy3K

ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಂದು ಚಿನ್ನ, ಒಂಬತ್ತು ಬೆಳ್ಳಿ ಮತ್ತು ಎರಡು ಕಂಚು ಸೇರಿದಂತೆ ಒಟ್ಟು 12 ಪದಕ ಗೆದ್ದುಕೊಂಡಿದೆ.

ಇದನ್ನೂ ಓದಿ: ವಿಶ್ವ ಕುಬ್ಜರ ಕ್ರೀಡಾಕೂಟ: ಸಾಲ ಮಾಡಿ ಜರ್ಮನಿಗೆ ಹೋಗಿದ್ದ ಬೆಳಗಾವಿ ಕುವರಿ ಮುಡಿಗೆ ಮೂರು ಪದಕ

Last Updated : Aug 4, 2023, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.