ಯಾಂಕ್ಟನ್: ಅಮೆರಿಕದ ಯಾಂಕ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಮಹಿಳಾ ಹಾಗೂ ಮಿಶ್ರ ಜೋಡಿ ಕಾಂಪೌಂಡ್ ಆರ್ಚರಿ ತಂಡಗಳು ಎರಡೂ ಸ್ಪರ್ಧೆಗಳಲ್ಲಿ ಕೊಲಂಬಿಯಾ ವಿರುದ್ಧ ಸೋಲುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿವೆ.
-
Indian Compound Mixed duo of Archers @archer_abhishek and @VJSurekha
— SAI Media (@Media_SAI) September 25, 2021 " class="align-text-top noRightClick twitterSection" data="
🏹🎯 wins 🥈 at the #WorldArchery Championships 2021, Yankton USA
Many congratulations to the duo👏👏 pic.twitter.com/lK4JTEVUbA
">Indian Compound Mixed duo of Archers @archer_abhishek and @VJSurekha
— SAI Media (@Media_SAI) September 25, 2021
🏹🎯 wins 🥈 at the #WorldArchery Championships 2021, Yankton USA
Many congratulations to the duo👏👏 pic.twitter.com/lK4JTEVUbAIndian Compound Mixed duo of Archers @archer_abhishek and @VJSurekha
— SAI Media (@Media_SAI) September 25, 2021
🏹🎯 wins 🥈 at the #WorldArchery Championships 2021, Yankton USA
Many congratulations to the duo👏👏 pic.twitter.com/lK4JTEVUbA
ಆರಂಭದಲ್ಲಿ ಭಾರತೀಯ ಮಿಶ್ರ ಜೋಡಿ ಅಭಿಷೇಕ್ ವರ್ಮಾ ಹಾಗೂ ಜ್ಯೋತಿ ಸುರೇಖಾ ವೆನ್ನಮ್ 39 - 38 ಪಾಯಿಂಟ್ಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮವಾಗಿ ಭಾರತೀಯರು ನಾಲ್ಕು ಪಾಯಿಂಟ್‌ಗಳ ಅಂತರದಿಂದ ಎದುರಾಳಿಗಳಿಗೆ (150-154) ಶರಣಾದರು.
ಮತ್ತೊಂದೆಡೆ, ಜ್ಯೋತಿ, ಮುಸ್ಕಾನ್ ಕಿರಾರ್ ಹಾಗೂ ಪ್ರಿಯಾ ಗುರ್ಜರ್ ಅವರನ್ನೊಳಗೊಂಡ ಏಳನೇ ಶ್ರೇಯಾಂಕದ ಮಹಿಳಾ ತಂಡ, ಸಾರಾ ಲೋಪೆಝ್, ಅಲೆಜಾಂಡ್ರಾ ಉಸ್ಕಿಯಾನೊ ಹಾಗೂ ನೋರಾ ವಾಲ್ಡೆಝ್ ಅವರ ವಿರುದ್ಧ ಐದು ಅಂಕಗಳ ಅಂತರದಿಂದ (224-229) ಸೋಲು ಕಂಡಿತು.