ಹ್ಯಾಂಗ್‌ಝೌ: ಸಮನ್ವಯ ಕೊರತೆ, ಒತ್ತಡ, ಪೆನಾಲ್ಟಿ ಕಾರ್ನರ್ ಬಿಟ್ಟುಕೊಟ್ಟ ಭಾರತ ಮಹಿಳಾ ಹಾಕಿ ತಂಡ ಏಷ್ಯನ್ ಗೇಮ್ಸ್ನ ಸೆಮಿಫೈನಲ್ ಪಂದ್ಯದಲ್ಲಿ ಚೀನಿ ಮಹಿಳೆಯರ ವಿರುದ್ಧ 0-4 ಗೋಲುಗಳ ಅಂತರದಿಂದ ಸೋಲು ಕಂಡಿತು. ಇದರಿಂದ ಮತ್ತೊಂದು ಚಿನ್ನ, ಬೆಳ್ಳಿ ಪದಕದಿಂದ ವಂಚಿತವಾಯಿತು. ಜೊತೆಗೆ ಪ್ಯಾರಿಸ್ ಒಲಿಂಪಿಕ್ಸ್ಗೆ ನೇರ ಪ್ರವೇಶದ ಅವಕಾಶವನ್ನೂ ತಪ್ಪಿಸಿಕೊಂಡಿತು.
ಕಳೆದ ಆವೃತ್ತಿಯ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ, ವಿಶ್ವದ ಏಳನೇ ಶ್ರೇಯಾಂಕದ ಭಾರತ ಮಹಿಳಾ ತಂಡ ಪಂದ್ಯಾವಳಿಯಲ್ಲಿ ಚಿನ್ನ ಗೆಲ್ಲುವ ಫೇವರೇಟ್ ತಂಡವಾಗಿತ್ತು. ಆದರೆ, ಸೆಮಿಫೈನಲ್‌ನಲ್ಲಿ 2018 ರ ಕಂಚಿನ ಪದಕ ವಿಜೇತ ಚೀನಾ ಎದುರು ಮುಗ್ಗರಿಸಿತು.
ಚೀನೀ ಮಹಿಳೆಯರ ಚುರುಕಿನ ಪ್ರದರ್ಶನ: ಆಕ್ರಮಣಕಾರಿ ಆಟವಾಡಿದ ಚೀನೀ ಮಹಿಳೆಯರು ಆರಂಭದಿಂದಲೇ ಭಾರತದ ರಕ್ಷಣಾ ವಿಭಾಗದ ಮೇಲೆ ಒತ್ತಡ ಹೇರಿತು. ಭಾರತದ ರಕ್ಷಣಾ ಗೋಡೆಯನ್ನು ಪದೇ ಪದೇ ಭೇದಿಸಿಕೊಂಡು ಬಂದ ಆಟಗಾರ್ತಿಯರು ಸತತ ಗೋಲು ದಾಖಲಿಸಿದರು. ಚೀನಾ ಪರವಾಗಿ ಜಿಯಾಕಿ ಜಾಂಗ್ (25ನೇ ನಿಮಿಷ), ಮೀರಾಂಗ್ ಝೌ (40ನೇ), ಮೆಯು ಲಿಯಾಂಗ್ (55ನೇ) ಮತ್ತು ಬಿಂಗ್ಫೆಂಗ್ಗು 60ನೇ ನಿಮಿಷದಲ್ಲಿ ಗೋಲು ಗಳಿಸಿದರು. ಪ್ರಯತ್ನಗಳ ನಡುವೆಯೂ ಭಾರತದ ಆಟಗಾರ್ತಿಯರು ಒಂದು ಗೋಲು ದಾಖಲಿಸಲು ವಿಫಲವಾದರು.
-
Update: Women's Hockey 🏑 at #AsianGames2022
— SAI Media (@Media_SAI) October 5, 2023 " class="align-text-top noRightClick twitterSection" data="
Our girls lost to Team 🇨🇳 0-4 in the SF!
Next Stop: #Bronze🥉 Medal match on 7⃣th Oct!
All the best girls! Keep fighting hard💪🏻#Cheer4India#HallaBol#JeetegaBharat#BharatAtAG22 pic.twitter.com/9ry30J5rfI
">Update: Women's Hockey 🏑 at #AsianGames2022
— SAI Media (@Media_SAI) October 5, 2023
Our girls lost to Team 🇨🇳 0-4 in the SF!
Next Stop: #Bronze🥉 Medal match on 7⃣th Oct!
All the best girls! Keep fighting hard💪🏻#Cheer4India#HallaBol#JeetegaBharat#BharatAtAG22 pic.twitter.com/9ry30J5rfIUpdate: Women's Hockey 🏑 at #AsianGames2022
— SAI Media (@Media_SAI) October 5, 2023
Our girls lost to Team 🇨🇳 0-4 in the SF!
Next Stop: #Bronze🥉 Medal match on 7⃣th Oct!
All the best girls! Keep fighting hard💪🏻#Cheer4India#HallaBol#JeetegaBharat#BharatAtAG22 pic.twitter.com/9ry30J5rfI
ಆಟ ಆರಂಭವಾದ 6 ನೇ ನಿಮಿಷದಲ್ಲಿ ಭಾರತಕ್ಕೆ ಎರಡು ಪೆನಾಲ್ಟಿ ಕಾರ್ನರ್ಗಳ ಅವಕಾಶ ಸಿಕ್ಕಿತು. ಆದರೆ, ತಂಡದ ನಾಯಕಿ ಸವಿತಾ ಅವುಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾದರು. 11ನೇ ನಿಮಿಷದಲ್ಲಿ ಚೀನಾ ಪೆನಾಲ್ಟಿ ಕಾರ್ನರ್‌ಗೆ ಅವಕಾಶ ನೀಡಿದಾಗಲೂ ಗೋಲು ಸಿಗಲಿಲ್ಲ. ಎರಡನೇ ಕ್ವಾರ್ಟರ್‌ನಲ್ಲಿ ಚೀನಾ ಚುರುಕಿನ ಪ್ರದರ್ಶನ ನೀಡಿತು. ಇದರಿಂದ ಭಾರತದ ಮಿಡ್‌ಫೀಲ್ಡ್ ಮತ್ತು ಫಾರ್ವಡ್‌ಲೈನ್ ನಡುವೆ ಸಮನ್ವಯ ತಾಳತಪ್ಪಿತು.
ಇದನ್ನೇ ಬಳಸಿಕೊಂಡು ಚೀನಾ ಪಡೆ 25 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ಪಡೆಯಿತು. ಜಿಯಾಕಿ ಜಾಂಗ್ ಯಾವುದೇ ತಪ್ಪು ಮಾಡದೇ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. ಇದರಿಂದ 0-1 ಮುನ್ನಡೆ ಸಾಧಿಸಿತು. ಕೊನೆಯ ಅವಧಿಯಲ್ಲಿ ಭಾರತೀಯರು ರಕ್ಷಣಾತ್ಮಕ ಆಟದ ಮೊರೆ ಹೋದರು.
ದ್ವಿತೀಯಾರ್ಧದಲ್ಲೂ ಮಿಂಚಿದ ಚೀನಾ: 0-1 ರ ಮುನ್ನಡೆಯಲ್ಲಿದ್ದ ಚೀನಾ ದ್ವಿತೀಯಾರ್ಧದಲ್ಲೂ ಮಿಂಚು ಹರಿಸಿತು. ಆಟ ಆರಂಭವಾದ ಹತ್ತು ನಿಮಿಷದಲ್ಲೇ ಮೀರಾಂಗ್ ಝೌ ಭಾರತದ ಡಿಫೆಂಡರ್ಗಳನ್ನು ದಾಟಿ 40ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ತಪ್ಪಿನ ಮೇಲೆ ತಪ್ಪು ಮಾಡಿದ ಭಾರತದ ಮಹಿಳೆಯರು ಸತತ ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಬಿಟ್ಟುಕೊಟ್ಟರು.
ಬಳಿಕ ಮೆಯು ಲಿಯಾಂಗ್ 55ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಬಳಸಿ ಮತ್ತೊಂದು ಗೋಲು ಬಾರಿಸಿದರು. ಆಗ 0-3 ಮುನ್ನಡೆ ಪಡೆಯಿತು. ಬಳಿಕ 60ನೇ ನಿಮಿಷದಲ್ಲಿ ಬಿಂಗ್ಫೆಂಗ್ಗು ಮತ್ತೊಂದು ಗೋಲು ಬಾರಿಸಿ ಮುನ್ನಡೆಯನ್ನು 0-4 ಕ್ಕೆ ಹೆಚ್ಚಿಸಿದರು. ಈ ಮಧ್ಯೆ ಭಾರತ ತಂಡ ಹಲವು ಬಾರಿ ಗೋಲಿಗೆ ಪ್ರಯತ್ನಿಸಿದಾಗಲೂ ಫಲ ಸಿಗಲಿಲ್ಲ.
ಕಂಚಿಗಾಗಿ ಹೋರಾಟ; ಸೆಮಿಫೈನಲ್ ಸೋಲಿನಿಂದ ಚಿನ್ನ, ಬೆಳ್ಳಿ ಆಸೆ ಕೈಬಿಟ್ಟ ಭಾರತೀಯರು ಶನಿವಾರ (ಅಕ್ಟೋಬರ್ 7) ನಡೆಯಲಿರುವ ಕಂಚಿನ ಪದಕಕ್ಕಾಗಿ ಹೋರಾಡಲಿದೆ. ಜಪಾನ್ ಮತ್ತು ದಕ್ಷಿಣ ಕೊರಿಯಾ ನಡುವಿನ ಎರಡನೇ ಸೆಮಿಫೈನಲ್‌ನಲ್ಲಿ ಸೋತ ತಂಡ ಭಾರತಕ್ಕೆ ಎದುರಾಗಲಿದೆ.
ಇದನ್ನೂ ಓದಿ: ಏಷ್ಯನ್ ಗೇಮ್ಸ್: ಪುರುಷ 'ಗುರಿ'ಕಾರರಿಗೆ ಚಿನ್ನ, ಇದೇ ಮೊದಲ ಬಾರಿಗೆ 21 ಬಂಗಾರದ ಪದಕ ಗೆದ್ದ ಭಾರತ