ಬರ್ಮಿಂಗ್‌ಹ್ಯಾಮ್(ಯುಕೆ): ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತೀಯರೇ ಬಲಿಷ್ಠರು ಎಂಬುದು ಮತ್ತೆ ಸಾಬೀತಾಗಿದೆ. ಕಾಮನ್ವೆಲ್ತ್ ಗೇಮ್ಸ್ನ 73 ಕೆಜಿ ವಿಭಾಗದಲ್ಲಿ ಅಚಿಂತ ಶೆಯುಲಿ ಅವರು ಚಿನ್ನಕ್ಕೆ ಕೊರಳೊಡ್ಡುವ ಮೂಲಕ ಭಾರತಕ್ಕೆ ವೇಟ್ಲಿಫ್ಟಿಂಗ್ನಲ್ಲಿ 3ನೇ ಚಿನ್ನ ತಂದುಕೊಟ್ಟರು. ಅಲ್ಲದೇ, 6 ಪದಕಗಳನ್ನು ವೇಟ್ಲಿಫ್ಟರ್ಗಳು ಕೊಳ್ಳೆ ಹೊಡೆದರು.
ಭಾನುವಾರ ರಾತ್ರಿ ನಡೆದ ಫೈನಲ್ನಲ್ಲಿ ಅಚಿಂತ ಶೆಯುಲಿ 313 ಕೆಜಿ (143 ಕೆಜಿ+170 ಕೆಜಿ) ಭಾರತ ಎತ್ತುವ ಮೂಲಕ ಚಿನ್ನವನ್ನು ಗೆದ್ದರು. ಮೊದಲ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿಯೇ ಪಶ್ಚಿಮ ಬಂಗಾಳದ ಬಲಾಢ್ಯ ದಾಖಲೆ ಬರೆದರು.
20 ವರ್ಷದ ಅಚಿಂತ ಸ್ನ್ಯಾಚ್ ವಿಭಾಗದಲ್ಲಿ ಮೊದಲ ಸಲವೇ 143 ಕೆಜಿ ಎತ್ತಿದರೆ, ಕ್ಲೀನ್ ಅಂಡ್ ಜರ್ಕ್ ವಿಭಾಗದಲ್ಲಿ 170 ಕೆಜಿ ಭಾರವನ್ನು ಎತ್ತಿ ಕಾಮನ್ವೆಲ್ತ್ ದಾಖಲೆ ಬರೆದರು.
ಪಶ್ಚಿಮ ಬಂಗಾಳದ ಅಚಿಂತ ಶೆಯುಲಿ ಬಡತನದಲ್ಲಿ ಬೆಳೆದ ಬಲಾಢ್ಯ ಕ್ರೀಡಾಪಟು. ಕಳೆದ ವರ್ಷ ತಾಷ್ಕೆಂಟ್ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬಂಗಾರ ಗೆದ್ದಿದ್ದರು. ಇದೀಗ ಕಾಮನ್ವೆಲ್ತ್ನಲ್ಲೂ ಚಿನ್ನದ ಸಾಧನೆ ಮಾಡಿದ್ದಾರೆ. ಭಾರ ಎತ್ತುವ ಸ್ಪರ್ಧೆಯಲ್ಲಿ ದೇಶಕ್ಕೆ ಇದು 6ನೇ ಪದಕವಾದರೆ, 3ನೇ ಚಿನ್ನದ ಪದಕ. 2 ಬೆಳ್ಳಿ ಒಂದು ಕೂಡ ಇದೆ.
ಓದಿ: CWG 2022: 300 ಕೆಜಿ ವೇಟ್‌ಲಿಫ್ಟ್ ಮಾಡಿದ 19 ವರ್ಷದ ಯುವ ಯೋಧ ಜೆರೆಮಿ