ನವದೆಹಲಿ: ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಸದಸ್ಯರು ಮೇರಿ ಕೋಮ್, ಡೋಲಾ ಬ್ಯಾನರ್ಜಿ, ಅಲಕಾನಂದ ಅಶೋಕ್, ಯೋಗೇಶ್ವರ್ ದತ್, ಸಹದೇವ್ ಯಾದವ್ ಮತ್ತು ಇಬ್ಬರು ವಕೀಲರು ಇದ್ದಾರೆ.
ನಾವು ಕುಳಿತು ಎಲ್ಲರ ಮಾತನ್ನು ಆಲಿಸುತ್ತೇವೆ ಮತ್ತು ಆರೋಪಗಳನ್ನು ಕೇಳಿದ ನಂತರ ನಿಷ್ಪಕ್ಷಪಾತ ತನಿಖೆ ನಡೆಸುತ್ತೇವೆ ಮತ್ತು ನ್ಯಾಯವನ್ನು ನೀಡಲು ಪ್ರಯತ್ನಿಸುತ್ತೇವೆ ಎಂದು ಭಾರತೀಯ ವೇಟ್‌ಲಿಫ್ಟಿಂಗ್ ಫೆಡರೇಶನ್ ಅಧ್ಯಕ್ಷ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಸಮಿತಿಯ ಸದಸ್ಯರಾದ ಸಹದೇವ್ ಯಾದವ್ ತಿಳಿಸಿದ್ದಾರೆ. ನಾನು ಈ ಸಮಿತಿಯ (ಐಒಎಯ ಏಳು ಸದಸ್ಯರ ಸಮಿತಿ) ಭಾಗವಾಗಿದ್ದೇನೆ ಎಂದು ಮಾಧ್ಯಮಗಳಿಂದ ನನಗೆ ಈಗಷ್ಟೇ ತಿಳಿಯಿತು. ನಾವು ಕೆಲಸವನ್ನು ಪ್ರಾರಂಭಿಸುತ್ತೇವೆ ಮತ್ತು ನಂತರ ನಾವು ನಿಖರವಾದ ಚಿತ್ರಣ ಏನು ಎಂಬುದನ್ನು ಕಂಡುಕೊಳ್ಳಲು ಬಯಸುತ್ತೇವೆ. ವಿಚಾರಣೆಯ ನಂತರ ಸತ್ಯ ಹೊರಬರಲಿದೆ ಎಂದು ಆರ್ಚರ್ ಡೋಲಾ ಬ್ಯಾನರ್ಜಿ ತಿಳಿಸಿದ್ದಾರೆ.
ವಾರ್ಷಿಕ ಸಾಮಾನ್ಯ ಸಭೆಯ ನಂತರ ಸ್ಪಷ್ಟನೆ: ಜನವರಿ 22 ರಂದು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಭಾಗವಹಿಸಿದ ನಂತರ ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗುವುದು. ಅಲ್ಲಿ ತಂದೆ ತಮ್ಮ ಹೇಳಿಕೆಯನ್ನು ನೀಡಲಿದ್ದಾರೆ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ಪುತ್ರ ಪ್ರತೀಕ್ ಭೂಷಣ್ ಮಾಹಿತಿ ನೀಡಿದ್ದಾರೆ.
ಉತ್ತರ ಪ್ರದೇಶದ ಗೊಂಡಾದಲ್ಲಿ ಮಾಧ್ಯಮಗೋಷ್ಠಿಯಲ್ಲಿ WFI ಮುಖ್ಯಸ್ಥರ ಪುತ್ರ ಪ್ರತೀಕ್ ಭೂಷಣ್ ಸಿಂಗ್ ಮಾತನಾಡಿ, ಕುಸ್ತಿ ಫೆಡರೇಶನ್‌ನ ಎಜಿಎಂ ಸಭೆ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿದೆ. ಒಲಿಂಪಿಕ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ (ಸಿಡಬ್ಲ್ಯೂಜಿ) ಸೇರಿದಂತೆ ಕುಸ್ತಿಪಟುಗಳು ಮಾಡಿದ ಆರೋಪಗಳ ಬಗ್ಗೆ ಡಬ್ಲ್ಯುಎಫ್‌ಐ ಕ್ರೀಡಾ ಸಚಿವಾಲಯಕ್ಕೆ ನಿಗದಿತ 72 ಗಂಟೆಗಳ ಒಳಗೆ ವಿವರಣೆಯನ್ನು ನೀಡಲಾಗಿದೆ ಎಂದಿದ್ದಾರೆ.
"ಈ ವಿಷಯದ ಬಗ್ಗೆ ನಮಗೆ ಔಪಚಾರಿಕವಾಗಿ ಏನನ್ನೂ ಮಾತನಾಡಲು ಅಧಿಕಾರವಿಲ್ಲ. ಬ್ರಿಜ್ ಭೂಷಣ್ ಶರಣ್ ಸಿಂಗ್ ಜನವರಿ 22 ರಂದು ಡಬ್ಲ್ಯುಎಫ್ಐನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಾವು ಕ್ರೀಡಾ ಸಚಿವಾಲಯಕ್ಕೆ ನಮ್ಮ ಅಧಿಕೃತ ಹೇಳಿಕೆಯನ್ನು ನೀಡಿದ್ದೇವೆ" ಎಂದು ಹೇಳಿದರು.
ಮಹಿಳಾ ಕುಸ್ತಿಪಟುಗಳು ಭಾರತದ ಕುಸ್ತಿ ಫೆಡರೇಶನ್ (WFI) ಅಧ್ಯಕ್ಷರು ಮತ್ತು ತರಬೇತುದಾರರಿಂದ ಲೈಂಗಿಕ ಕಿರುಕುಳ ಮತ್ತು ದುರುಪಯೋಗದ ಗಂಭೀರ ಆರೋಪ ಮಾಡಿ ದೆಹಲಿಯಲ್ಲಿ ಒಲಿಂಪಿಕ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ (CWG) ಪದಕ ವಿಜೇತರು ಸೇರಿದಂತೆ ಕುಸ್ತಿಪಟುಗಳು ನಡೆಯುತ್ತಿರುವ ಪ್ರತಿಭಟನೆ ಮೂರು ದಿನಗಳಿಂದ ಮಾಡುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಕ್ರೀಡಾ ಸಚಿವಾಲಯವು, 'ಈ ವಿಷಯವು ಕ್ರೀಡಾಪಟುಗಳ ಯೋಗಕ್ಷೇಮಕ್ಕೆ ಸಂಬಂಧಿಸಿದೆ, ಸಚಿವಾಲಯವು ಈ ವಿಷಯವನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಮುಂದಿನ 72 ಗಂಟೆಗಳೊಳಗೆ ಉತ್ತರವನ್ನು ನೀಡಲು WFI ವಿಫಲವಾದರೆ, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ಸಂಹಿತೆ, 2011 ರ ನಿಬಂಧನೆಗಳ ಅಡಿಯಲ್ಲಿ ಫೆಡರೇಶನ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ಹೇಳಿದೆ. ಕುಸ್ತಿಪಟುಗಳ ಗುಂಪು ಶುಕ್ರವಾರ ಸಂಜೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರ ನಿವಾಸಕ್ಕೆ ಭೇಟಿ ನೀಡಿ ತಮ್ಮ ಬೇಡಿಕೆಗಳ ಕುರಿತು ಹೆಚ್ಚಿನ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: WFI ಅಧ್ಯಕ್ಷರ ವಿರುದ್ಧ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾಗೆ ಪತ್ರ ಬರೆದ ಕುಸ್ತಿಪಟುಗಳು