ವಾಷಿಂಗ್ಟನ್(ಅಮೆರಿಕ): ಜುಲೈ 23ರಂದು ಟೋಕಿಯೋ ಒಲಿಂಪಿಕ್- 2020ರ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದು, ಅಮೆರಿಕದ ನಿಯೋಗಕ್ಕೆ ಅಧ್ಯಕ್ಷ ಜೋ ಬೈಡನ್ ಪತ್ನಿ ಜಿಲ್ ಬೈಡನ್ ನೇತೃತ್ವ ವಹಿಸಿಕೊಳ್ಳಲಿದ್ದಾರೆ ಎಂದು ಕ್ಯೋಡೋ ನ್ಯೂಸ್ ವರದಿ ಮಾಡಿದೆ.
ಇದೇ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರ ಪತ್ನಿ, ಒಲಿಂಪಿಕ್ಗೆ ಅಮೆರಿಕದ ನಿಯೋಗದ ನೇತೃತ್ವ ವಹಿಸುತ್ತಿದ್ದಾರೆ ಎಂದು ಕ್ಯೋಡೋ ನ್ಯೂಸ್ ಹೇಳಿದ್ದು, ಒಲಿಂಪಿಕ್ನಲ್ಲಿ ಅಧ್ಯಕ್ಷ ಜೋ ಬೈಡನ್ ಭಾಗವಹಿಸುವ ಸಾಧ್ಯತೆ ಬಗ್ಗೆ ಇನ್ನೂ ನಿರ್ಣಯಿಸಲಾಗುತ್ತಿದೆ ಎಂದು ಶ್ವೇತ ಭವನದ ವಕ್ತಾರರು ಮಾಹಿತಿ ನೀಡಿದ್ದಾರೆ.
ಇನ್ನು ಜುಲೈ 23 ಮತ್ತು ಆಗಸ್ಟ್ 8ರ ನಡುವೆ ಒಲಿಂಪಿಕ್ ನಡೆಯಲಿದ್ದು, ಸುಮಾರು 205 ರಾಷ್ಟ್ರಗಳ ಒಲಿಂಪಿಕ್ ಕಮಿಟಿಗಳ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ ದೇಶವಿಲ್ಲದೇ ನಿರಾಶ್ರಿತರಾದ ಸ್ಪರ್ಧಿಗಳ ಐಓಸಿ ನಿರಾಶ್ರಿತರ ಒಲಿಂಪಿಕ್ ತಂಡ (IOC Refugee Olympic Team) ಕೂಡಾ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದೆ.
ಇದನ್ನೂ ಓದಿ: ಪಿಕೆ-ರಾಹುಲ್ ಭೇಟಿ: ಮುಂದಿನ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ
ಭಾರತದಿಂದ ಈಗಾಗಲೇ 18 ವಿವಿಧ ಕ್ರೀಡೆಗಳಿಂದ 126 ಅಥ್ಲೀಟ್‌ಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದು, ಈ ಬಾರಿ ಹಿಂದಿನ ಬಾರಿಗಿಂತ ಹೆಚ್ಚಿನ ಪದಕಗಳು ಗೆಲ್ಲುವ ನಿರೀಕ್ಷೆಯಿದೆ.