ETV Bharat / sports

ಕಾಮನ್​ವೆಲ್ತ್​​ನಲ್ಲಿ ಭಾಗವಹಿಸಿದ್ದ ಪಾಕ್​ನ ಇಬ್ಬರು ಬಾಕ್ಸರ್​ಗಳು ಬರ್ಮಿಂಗ್​ಹ್ಯಾಮ್​ನಲ್ಲಿ ನಾಪತ್ತೆ - ಕಾಮನ್​ವೆಲ್ತ್​ ಕ್ರೀಡಾಕೂಟ

ಕಾಮನ್​ವೆಲ್ತ್​ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಇಬ್ಬರು ಬಾಕ್ಸರ್​ಗಳು ಬರ್ಮಿಂಗ್​ಹ್ಯಾಮ್​ನಿಂದ ವಾಪಸ್​ ಬರುವಾಗ ನಾಪತ್ತೆಯಾಗಿದ್ದಾರೆ. ಪತ್ತೆಗಾಗಿ ತಂಡ ರಚಿಸಲಾಗಿದೆ.

two-pakistani-boxers-missing-in-birmingham
ಪಾಕ್​ನ ಇಬ್ಬರು ಬಾಕ್ಸರ್​ಗಳು ಬರ್ಮಿಂಗ್​ಹ್ಯಾಮ್​ನಲ್ಲಿ ನಾಪತ್ತೆ
author img

By

Published : Aug 11, 2022, 12:05 PM IST

ಕರಾಚಿ: ಇಂಗ್ಲೆಂಡ್​ನ ಬರ್ಮಿಂಗ್​ಹ್ಯಾಮನ್​ಲ್ಲಿ ಈಚೆಗೆ ಮಕ್ತಾಯವಾದ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾಗವಹಿಸಿದ್ದ ಇಬ್ಬರು ಪಾಕಿಸ್ತಾನದ ಬಾಕ್ಸರ್​ಗಳು ನಾಪತ್ತೆಯಾಗಿದ್ದಾರೆ. ಬರ್ಮಿಂಗ್​ಹ್ಯಾಮ್​ನಿಂದ ವಾಪಸ್​ ಆಗಲು ವಿಮಾನ ಹತ್ತುವ ಕೆಲವೇ ಗಂಟೆಗಳ ಮೊದಲು ಅವರು ತಪ್ಪಿಸಿಕೊಂಡಿದ್ದಾರೆ ಎಂದು ಪಾಕ್​ ಅಧಿಕಾರಿಗಳು ತಿಳಿಸಿದರು.

ಪಾಕಿಸ್ತಾನ ಬಾಕ್ಸಿಂಗ್ ಫೆಡರೇಶನ್ (ಪಿಬಿಎಫ್) ಕಾರ್ಯದರ್ಶಿ ನಾಸಿರ್ ಟಾಂಗ್ ಈ ವಿಚಾರವನ್ನು ಖಚಿತಪಡಿಸಿದ್ದು, ಬಾಕ್ಸರ್‌ಗಳಾದ ಸುಲೇಮಾನ್ ಬಲೋಚ್ ಮತ್ತು ನಜಿರುಲ್ಲಾ ಇಸ್ಲಾಮಾಬಾದ್‌ಗೆ ತೆರಳುವ ಕೆಲವೇ ಗಂಟೆಗಳ ಮೊದಲು ನಾಪತ್ತೆಯಾಗಿದ್ದಾರೆ ಎಂದು ಹೇಳಿದರು.

ಕಾಮನ್​ವೆಲ್ತ್​ ಕ್ರೀಡಾಕೂಟ ಸೋಮವಾರವಷ್ಟೇ ಮುಕ್ತಾಯಗೊಂಡಿತು. ಬಾಕ್ಸಿಂಗ್ ತಂಡದ ಸದಸ್ಯರಾಗಿದ್ದ ಸುಲೇಮಾನ್​ ಬಲೋಚ್​ ಮತ್ತು ನಜಿರುಲ್ಲಾ ಅವರ ಪಾಸ್‌ಪೋರ್ಟ್ ಸೇರಿದಂತೆ ಪ್ರಯಾಣದ ದಾಖಲೆಗಳು ತಮ್ಮ ಬಳಿ ಇವೆ. ಬಾಕ್ಸರ್​ಗಳ ನಾಪತ್ತೆ ಬಗ್ಗೆ ಇಂಗ್ಲೆಂಡ್​ನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಮತ್ತು ಲಂಡನ್‌ನಲ್ಲಿರುವ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಪಿಬಿಎಫ್​ ತಿಳಿಸಿದೆ.

ಇನ್ನು ಕಾಣೆಯಾದ ಬಾಕ್ಸರ್‌ಗಳ ಪತ್ತೆಗಾಗಿ ಪಾಕಿಸ್ತಾನ ಒಲಿಂಪಿಕ್ ಅಸೋಸಿಯೇಷನ್ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಹಿಂದೆ ಹಂಗೇರಿಯಲ್ಲಿ ನಡೆದ ಫಿನಾ ವಿಶ್ವ ಚಾಂಪಿಯನ್‌ಶಿಪ್‌ ವೇಳೆ ರಾಷ್ಟ್ರೀಯ ಈಜುಗಾರ ಫೈಜಾನ್ ಅಕ್ಬರ್ ಕಾಣೆಯಾಗಿದ್ದು, ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಅಕ್ಬರ್​ ಚಾಂಪಿಯನ್​ಶಿಪ್​ನಲ್ಲೂ ಭಾಗವಹಿಸಿದೇ, ಬುಡಾಪೆಸ್ಟ್​ಗೆ ಬಂದ ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದರು.

ಓದಿ: ಕಾಮನ್​​​ವೆಲ್ತ್​ ಫೆನ್ಸಿಂಗ್​ ಚಾಂಪಿಯನ್​ಶಿಪ್​​: ಚಿನ್ನ ಗೆದ್ದ ಭಾರತದ ಭವಾನಿ ದೇವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.