ETV Bharat / sports

ತ್ರಿ ರಾಷ್ಟ್ರ ಅಂತಾರಾಷ್ಟ್ರೀಯ ಫುಟ್‌ಬಾಲ್: ಭಾರತಕ್ಕೆ ಕಿರ್ಗಿಜ್ ಗಣರಾಜ್ಯ ವಿರುದ್ಧ ಭರ್ಜರಿ ಗೆಲುವು

ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತ ತಂಡವು ತ್ರಿ-ರಾಷ್ಟ್ರ ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿಯಲ್ಲಿ ಜಯಭೇರಿ ಬಾರಿಸಿದೆ.

Tri Nation International Football Tournament India win title
ತ್ರಿ ರಾಷ್ಟ್ರ ಅಂತರಾಷ್ಟ್ರೀಯ ಫುಟ್‌ಬಾಲ್
author img

By

Published : Mar 29, 2023, 2:56 PM IST

ನವದೆಹಲಿ: ಭಾರತ ಫುಟ್ಬಾಲ್ ತಂಡವು 2023 ರ ತ್ರಿ-ರಾಷ್ಟ್ರ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯನ್ನು ಕಿರ್ಗಿಜ್ ಗಣರಾಜ್ಯವನ್ನು 2-0 ಅಂತರದಿಂದ ಸೋಲಿಸಿದೆ. ಮಂಗಳವಾರ ಮಣಿಪುರದ ಇಂಫಾಲ್‌ನಲ್ಲಿರುವ ಖುಮಾನ್ ಲ್ಯಾಂಪಕ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಿತು. ಪಂದ್ಯದ ವೇಳೆ 30,000 ಪ್ರೇಕ್ಷಕರು ಕ್ರೀಡಾಂಗಣದಲ್ಲಿ ಸೇರಿದ್ದರು.

ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತ ತಂಡವು ಅತ್ಯುತ್ತಮ ಪ್ರದರ್ಶನ ನೀಡಿತು. ಎದುರಾಳಿ ತಂಡಕ್ಕೆ ಒಂದೂ ಗೋಲ್​ ದಾಖಲಿಸಲು ಬಿಡದೇ ಉತ್ತಮ ರಕ್ಷಣಾತ್ಮಕ ಆಟದ ಪ್ರದರ್ಶನವನ್ನೂ ನೀಡಿತು. 34ನೇ ಮತ್ತು 84ನೇ ನಿಮಿಷದಲ್ಲಿ ಭಾರತ ಎರಡು ಸುಲಭ ಗೋಲ್​ ದಾಖಲು ಮಾಡಿತು. ಇದು ಪಂದ್ಯದ ಗೆಲುವಿಗೆ ಕಾರಣವಾಯಿತು.

ಕಿರ್ಗಿಜ್ ಗಣರಾಜ್ಯದ ವಿರುದ್ಧ 34ನೇ ನಿಮಿಷದಲ್ಲಿ ಸೆಂಟರ್ ಬ್ಯಾಕ್ ಸಂದೇಶ್ ಜಿಂಗಾನ್ ಮೊದಲ ಗೋಲು ದಾಖಲಿಸಿದರು. ಬ್ರಾಂಡನ್ ಫೆರ್ನಾಂಡಿಸ್ ಫುಟ್‌ಬಾಲ್ ಅನ್ನು ಜಿಂಗನ್‌ಗೆ ಪಾಸ್​ ಮಾಡಿದರು. ಜಿಂಗನ್ ಯಾವುದೇ ತಪ್ಪು ಮಾಡದೆ ಗೋಲ್​ ಕೀಪರ್​ ಕಣ್ತಪ್ಪಿಸಿ ಗೋಲ್​ ಪಡೆದುಕೊಂಡರು. ಜಿಂಗನ್ ಕಿಕ್ ಎಷ್ಟು ವೇಗವಾಗಿತ್ತು ಎಂದರೆ ಕಿರ್ಗಿಜ್ ಗೋಲ್‌ಕೀಪರ್ ಟೊಕೊಟೇವ್ ಎರ್ಜಾನ್ ಬಾಲ್​ ತನ್ನತ್ತ ಬಂದದ್ದೇ ಅರಿವಿಗೆ ಬಂದಿರಲಿಲ್ಲ. 84ನೇ ನಿಮಿಷದಲ್ಲಿ ಭಾರತ ಎರಡನೇ ಗೋಲು ದಾಖಲಿಸಿತು.

ಗೆಲುವಿನ ಬಳಿಕ ಮಾತನಾಡಿದ ಭಾರತದ ಕೋಚ್ ಇಗೊರ್ ಸ್ಟಿಮಾಕ್, 'ತಂಡದ ಎಲ್ಲಾ ಆಟಗಾರರು ಅಮೋಘ ಆಟ ಪ್ರದರ್ಶಿಸಿದರು. ತಂಡಕ್ಕೆ ಬೇಕಾದ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದೆ' ಎಂದಿದ್ದಾರೆ.

ಗೆಲುವಿನ ನಂತರ ಮಾತನಾಡಿದ ನಾಯಕ ಸುನಿಲ್ ಛೆಟ್ರಿ, 'ಇಡೀ ತಂಡ ಇಂಫಾಲ್‌ನಲ್ಲಿ ಆಡುವುದನ್ನು ಆನಂದಿಸಿದೆ. ಪ್ರೇಕ್ಷಕರು ತಂಡವನ್ನು ಸಾಕಷ್ಟು ಬೆಂಬಲಿಸಿದರು. ಇದರಿಂದಾಗಿ ಆಟಗಾರರ ಉತ್ಸಾಹವು ಪಂದ್ಯದುದ್ದಕ್ಕೂ ಗೋಚರಿಸಿತು' ಎಂದಿದ್ದಾರೆ.

  • Dear Manipur, you were amazing. Your love, hospitality, and support were all felt in big measure. Hope the two wins over the week gave you some joy back as well. pic.twitter.com/FjEscSEXww

    — Sunil Chhetri (@chetrisunil11) March 29, 2023 " class="align-text-top noRightClick twitterSection" data=" ">

ಇದನ್ನೂ ಓದಿ: 'ನನ್ನ ಹೃದಯ ತುಂಬಿ ಬಂತು': ಆರ್‌ಸಿಬಿ ಅಭಿಮಾನಿಗಳ ಪ್ರೀತಿಗೆ ಭಾವನಾತ್ಮಕ ಸಂದೇಶ ಬರೆದ ಎಬಿಡಿ

ಭಾರತ ತಂಡ: ಗುರುಪ್ರೀತ್ ಸಿಂಗ್ ಸಂಧು (ಗೋಲ್‌ಕೀಪರ್), ಸಂದೇಶ್ ಜಿಂಗನ್, ಆಕಾಶ್ ಮಿಶ್ರಾ (ಮೆಹತಾಬ್ ಸಿಂಗ್ 79'), ಅನ್ವರ್ ಅಲಿ (ನವೋರೆಮ್ ರೋಷನ್ ಸಿಂಗ್ 79'), ಪ್ರೀತಮ್ ಕೋಟಾಲ್, ಅನಿರುದ್ಧ್ ಥಾಪಾ (ರೋಹಿತ್ ಕುಮಾರ್ 67'), ಸುರೇಶ್ ಸಿಂಗ್ ವಾಂಗ್‌ಜಮ್, ಜಾಕ್ಸನ್ ಸಿಂಗ್ ತೌನೋಜಮ್ (ಸಹಲ್ ಅಬ್ದುಲ್) ಸಮದ್ 67'), ಬ್ರಾಂಡನ್ ಫೆರ್ನಾಂಡಿಸ್ (ನವೋರೆಮ್ ಮಹೇಶ್ ಸಿಂಗ್ 57'), ಲಾಲಿಂಜುವಲಾ ಚಾಂಗ್ಟೆ, ಸುನಿಲ್ ಛೆಟ್ರಿ (ನಾಯಕ).

ಈ ಆಟಗಾರರು ಪಡೆದ ಪ್ರಶಸ್ತಿಗಳು: ಪಂದ್ಯಾವಳಿಯ ಆಟಗಾರ: ಲಾಲಿಂಜುವಲಾ ಚಾಂಗ್ಟೆ (ಭಾರತ) ಟಾಪ್ ಸ್ಕೋರರ್‌ಗಳು (ಐವರು ಹಂಚಿಕೊಂಡಿದ್ದಾರೆ): ಅನಿರುದ್ಧ್ ಥಾಪಾ (ಭಾರತ), ಆಂಗ್ ಥು (ಮ್ಯಾನ್ಮಾರ್), ಕೈರತ್ ಝಿರ್ಗಲ್ಬೆಕ್ ಉಲು (ಕಿರ್ಗಿಜ್), ಸಂದೇಶ್ ಜಿಂಗಾನ್ (ಭಾರತ), ಸುನಿಲ್ ಛೆಟ್ರಿ (ಭಾರತ)

ಅತ್ಯುತ್ತಮ ಗೋಲ್‌ಕೀಪರ್ (ಇಬ್ಬರು ಹಂಚಿಕೊಂಡಿದ್ದಾರೆ): ಅಮರಿಂದರ್ ಸಿಂಗ್ (ಭಾರತ), ಗುರುಪ್ರೀತ್ ಸಿಂಗ್ ಸಂಧು (ಭಾರತ)

ಇದನ್ನೂ ಓದಿ: IPL 2023: ಐಪಿಎಲ್ ವೀಕ್ಷಕ ವಿವರಣೆಗಾರನಾಗಿ ಸ್ಟೀವ್​ ಸ್ಮಿತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.