ಹೈದರಾಬಾದ್: ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಭಾರತ ಸ್ಪರ್ಧಿಸುತ್ತಿದೆ. ಭಾರತದ ಈಜುಪಟು ಸಾಜನ್ ಪ್ರಕಾಶ್ ಟೋಕಿಯೋದಲ್ಲಿ ನಡೆಯಲಿರುವ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಇಟಲಿಯ ರೋಮ್‌ನಲ್ಲಿ ನಡೆದ ಪುರುಷರ ಕ್ರೀಡಾಕೂಟದ 200 ಮೀಟರ್ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ 1:56:38 ನಿಮಿಷದಲ್ಲಿ ಗುರಿ ತಲುಪಿದ್ದಾರೆ. ಈ ಮೂಲಕ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಮೊದಲ ಭಾರತೀಯ ಈಜುಗಾರ ಎಂಬ ಹೆಗ್ಗಳಿಕೆಗೆ ಸಾಜನ್ ಪ್ರಕಾಶ್ ಪಾತ್ರರಾಗಿದ್ದಾರೆ. ಈ ಕೂಟದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು 1:56:48 ನಿಮಿಷದೊಳಗೆ ಗುರಿ ತಲುಪಬೇಕಿತ್ತು. ಆದರೆ ಸಾಜನ್ ಇನ್ನೂ 10 ಸೆಕೆಂಡ್ ಮುಂಚೆಯೇ ಗುರಿ ತಲುಪಿ ದಾಖಲೆ ಬರೆದಿದ್ದಾರೆ.