ಟೋಕಿಯೋ: ಕೋವಿಡ್-19 ಬಿಕ್ಕಟ್ಟಿನ ನಡುವೆ ಟೋಕಿಯೋದಲ್ಲಿ ಒಲಿಂಪಿಕ್ಸ್ ಶುಕ್ರವಾರದಿಂದ ಆರಂಭವಾಗಿದೆ. ಮಹಿಳೆಯರ 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ನಲ್ಲಿ ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸಿದರು. ಕ್ರೀಡಾಕೂಟದ ಎರಡನೇ ದಿನ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳ ವಿವರ ಇಲ್ಲಿದೆ.
ಅರ್ಚರಿ - ಮಿಕ್ಸಡ್ ಟೀಮ್
ದಕ್ಷಿಣ ಕೊರಿಯಾದ ಆ್ಯನ್ ಸಾನ್ ಮತ್ತು ಕಿಮ್ಜೆ ಡಿಯೋಕ್ ಮಿಕ್ಸಡ್ ಅರ್ಚರಿ ತಂಡದಲ್ಲಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ. ಈ ಜೋಡಿ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಪ್ರವೇಶ ಪಡೆದಿತ್ತು. ಇದು ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯಾ ಗೆದ್ದ 24ನೇ ಪದಕವಾಗಿದೆ. ನೆದರ್ಲೆಂಡ್ಸ್ ತಂಡ ಬೆಳ್ಳಿ ಗೆದ್ದರೆ, ಅರ್ಜೆಂಟೀನಾ ತಂಡ ಕಂಚು ಪಡೆಯಿತು.
ಸೈಕ್ಸಿಂಗ್ - ಮೆನ್ಸ್ ರೋಡ್ ರೇಸ್
ಒಲಿಂಪಿಕ್ ಮೆನ್ಸ್ ರೋಡ್ ರೇಸ್ನಲ್ಲಿ ರಿಚರ್ಡ್ ಈಕ್ವೆಡಾರ್ ಮೊದಲ ಚಿನ್ನದ ಪದಕ ಪಡೆಯಿತು. ರಿಚರ್ಡ್ ಕರಪಾಜ್ ಚಿನ್ನದ ಪದಕ ಪಡೆದರು.
ಫೆನ್ಸಿಂಗ್ - ವುಮೆನ್ಸ್ ಎಪೀ ಇಂಡಿವಿಜಲ್:
ಚೀನಾದ ಸುನ್ ಯಿವೆನ್ 5 ಬಾರಿಯ ಒಲಿಂಪಿಕ್ ಚಾಂಪಿಯನ್ ಅನಾ ಮರಿಯಾ ಪೋಪ್ಸ್ಕು ಅವರನ್ನು 11-10ರಲ್ಲಿ ಮಣಿಸಿ ಚಿನ್ನದ ಪದಕ ಪಡೆದರು. ಪಂದ್ಯ ಮುಗಿಯಲು ಕೇವಲ 3 ಸೆಕೆಂಡ್ ಉಳಿದಿರುವಾಗ 10-10ರಲ್ಲಿ ಸಮಬಲ ಏರ್ಪಡಿತ್ತು. ಆದರೆ ಸುನ್ ಕೊನೆಯ ಕ್ಷಣದಲ್ಲಿ ಗೆಲುವಿನ ಅಂಕ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ಪುರುಷರ ವಿಭಾಗದಲ್ಲಿ ಹಂಗೇರಿಯ ಆ್ಯರೋನ್ ಸ್ಜಿಲಗಿ ಇಟಲಿಯ ಲುಯಿಗಿ ಸಮೇಲ್ ಅವರನ್ನು ಮಣಿಸಿ ಚಿನ್ನದ ಪದಕ ಪಡೆದರು. ಈ ಮೂಲಕ ಸೆಬರ್ ವಿಭಾಗದಲ್ಲಿ 3 ಒಲಿಂಪಿಕ್ಸ್ ಪದಕ ಪಡೆದ ಮೊದಲ ಫೆನ್ಸರ್ ಎನಿಸಿಕೊಂಡರು. ಸ್ಜಿಲಗಿ 2012 ಮತ್ತು 2016ರ ಒಲಿಂಪಿಕ್ಸ್ನಲ್ಲೂ ಚಿನ್ನದ ಪದಕ ಪಡೆದಿದ್ದರು.
ಜೂಡೋ:
ಮಹಿಳೆಯರ 48 ಕೆಜಿ ವಿಭಾಗ ಕೊಸೊವಾದ ಡಿಸ್ಟ್ರಿಯಾ ಕ್ರಾಸ್ನಿಕಿ ಜಪಾನ್ನ ಫುನಾ ತೊನಕಿ ಅವರನ್ನು ಮಣಿಸಿ ಚಿನ್ನದ ಪದಕ ಪಡೆದರು. ಇದು ಕೊಸೊವಾದ ಎರಡನೇ ಒಲಿಂಪಿಕ್ಸ್ ಪದಕವಾಗಿದೆ.
ಪುರುಷರ 60 ಕೆಜಿ ವಿಭಾಗದ ಜೂಡೋ ಫೈನಲ್‌ನಲ್ಲಿ ತೈವಾನ್‌ನ ಯಾಂಗ್ ಯುಂಗ್-ವೀ ಅವರನ್ನು ಸೋಲಿಸುವ ಮೂಲಕ ಜಪಾನ್ ನವೋಹಿಸಾ ಟಕಾಟೊ ತಮ್ಮ ದೇಶಕ್ಕೆ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟರು.
ಶೂಟಿಂಗ್:
ಮಹಿಳೆಯರ 10 ಮೀಟರ್ ಏರ್ ರೈಫಿಲ್ನಲ್ಲಿ ಚೀನಾದ ಯಂಗ್ ಕಿಯಾನ್ ಟೋಕಿಯೋ ಒಲಿಂಪಿಕ್ಸ್ನ ಮೊದಲ ಚಿನ್ನದ ಪದಕ ಗೆದ್ದರು. ಪುರುಷರ ವಿಭಾಗದಲ್ಲಿ ಇರಾನಿನ ಜಾವೇದ್ 10 ಮೀಟರ್ ಏರ್ ಪಿಸ್ತೂಲ್ನಲ್ಲಿ ಫಾರುಕಿ ಚಿನ್ನದ ಪದಕ ಪಡೆದರು. ಒಲಿಂಪಿಕ್ಸ್ ಇತಿಹಾಸದಲ್ಲಿ ಪದಕ ಪಡೆದ ಅತ್ಯಂತ ಹಿರಿಯ ಸೂಟರ್ ಎಂಬ ಶ್ರೇಯಕ್ಕೆ 41 ವರ್ಷದ ಫಾರುಕಿ ಪಾತ್ರರಾದರು.
ಟ್ವಿಕಾಂಡೊ:
ಮಹಿಳೆಯರ 49 ಕೆಜಿ ವಿಭಾಗದ ಟ್ವಿಕಾಂಡೋದಲ್ಲಿ ಥಾಯ್ಲೆಂಡ್ನ ಪಾಣಿಪಕ್ ವೊಂಗ್ಪಟ್ಟನಕಿಟ್ ಹಾಗೂ 58 ಕೆಜಿ ಪುರುಷರ ವಿಭಾಗದಲ್ಲಿ ಇಟಲಿಯ ವಿಟೊ ಡೆಲ್ ಅಕ್ವಿಲಾ ಚಿನ್ನದ ಪದಕ ಪಡೆದರು.
ವೇಟ್ಲಿಫ್ಟಿಂಗ್:
ಮಹಿಳೆಯರ 49 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ನಲ್ಲಿ ಚೀನಾದ ಹೋವ್ ಝಿಹು ಚಿನ್ನದ ಪದಕ ಪಡೆದರು. ಅವರು 210 ಕೆಜಿ ಭಾರ ಎತ್ತುವ ಮೂಲಕ ಒಲಿಂಪಿಕ್ಸ್ ದಾಖಲೆ ಬ್ರೇಕ್ ಮಾಡಿದರು. ಭಾರತದ ಮೀರಾಬಾಯಿ ಚಾನು ಬೆಳ್ಳಿ ಪದಕ ಪಡೆದರು.
ಇದನ್ನು ಓದಿ: ಮಣಿಪುರ ಸರ್ಕಾರದಿಂದ ಚಾನುಗೆ 1 ಕೋಟಿ ರೂ. ಬಹುಮಾನ... ಕೋಚ್ಗೆ ₹10 ಲಕ್ಷ ಘೋಷಿಸಿದ IOA