ETV Bharat / sports

Tokyo Olympics Shooting: ಸ್ಕೀಟ್​ನಲ್ಲಿ ಅಂಗದ್​ ಬಜ್ವಾಗೆ 11ನೇ ಸ್ಥಾನ, ಫೈನಲ್ ಆಸೆ ಜೀವಂತ​ - ಪುರುಷರ ಸ್ಕೀಟ್ ಅರ್ಹತಾ ಸುತ್ತು

ಅಸಾಕ ಶೂಟಿಂಗ್ ರೇಂಜ್​ನಲ್ಲಿ ನಡೆದ ಮೂರು ಸಿರೀಸ್​ಗಳಿಂದ ಭಾರತೀಯ ಶೂಟರ್​​ ಕ್ರಮವಾಗಿ 25, 24, 24 ಅಂಕ ಪಡೆದು 11ನೇ ಸ್ಥಾನ ಪಡೆದಿದ್ದಾರೆ. ಫೈನಲ್​ ಅರ್ಹತೆ ಪಡೆಯಲು ಇನ್ನೂ ಎರಡು ಸಿರೀಸ್​ ಬಾಕಿಯಿದೆ.

Tokyo Olympics
ಅಂಗದ್​ ಬಜ್ವಾ
author img

By

Published : Jul 25, 2021, 5:52 PM IST

ಟೋಕಿಯೋ: ಭಾರತದ ಅಂಗದ್​ ವೀರ್​ ಸಿಂಗ್ ಬಜ್ವಾ ಪುರುಷರ ಸ್ಕೀಟ್​ ವಿಭಾಗದಲ್ಲಿ 3 ಸಿರೀಸ್​ಗಳ ನಂತರ 73 ಅಂಕ ಪಡೆದು 11ನೇ ಸ್ಥಾನದಲ್ಲಿದ್ದಾರೆ. ಫೈನಲ್​ಗೆ ಕೇವಲ 6 ಮಂದಿಗೆ ಮಾತ್ರ ಅವಕಾಶ ಇರುವುದರಿಂದ ಸೋಮವಾರ ನಡೆಯಲಿರುವ ಮತ್ತೆರಡು ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ ಫೈನಲ್ ಪ್ರವೇಶಿಸಲು ಭಾರತೀಯ ಶೂಟರ್ ಎದುರು ನೋಡುತ್ತಿದ್ದಾರೆ.

ಅಸಾಕ ಶೂಟಿಂಗ್ ರೇಂಜ್​ನಲ್ಲಿ ನಡೆದ ಮೂರು ಸಿರೀಸ್​ಗಳಿಂದ ಭಾರತೀಯ ಶೂಟರ್​​ ಕ್ರಮವಾಗಿ 25, 24, 24 ಅಂಕ ಪಡೆದು 11ನೇ ಸ್ಥಾನ ಪಡೆದಿದ್ದಾರೆ. ಫೈನಲ್​ ಅರ್ಹತೆ ಪಡೆಯಲು ಇನ್ನು ಎರಡು ಸಿರೀಸ್​ ಬಾಕಿಯಿದೆ.

30 ಶೂಟರ್​ ನಡುವೆ ನಡೆದ ಈ ಸ್ಪರ್ಧೆಯಲ್ಲಿ ಅಂಗದ್ 11ನೇ ಸ್ಥಾನ ಪಡೆದರೆ ಮತ್ತೊಬ್ಬ ಭಾರತೀಯ ಮೈರಾಜ್ ಅಹ್ಮದ್ ಖಾನ್ 71 ಅಂಕಗಳೊಂದಿಗೆ 25ನೇ ಸ್ಥಾನ ಪಡೆದಿದ್ದಾರೆ.

ಸೋಮವಾರ ಶೂಟಿಂಗ್​ನಲ್ಲಿ ಭಾರತಕ್ಕೆ ಇದೊಂದು ವಿಭಾಗ ಮಾತ್ರ ಸ್ಪರ್ಧಿಸಲಿದೆ. ಉಳಿದಿರುವ ಎರಡು ಸಿರೀಸ್​ಗಳ ನಂತರ ಮಧ್ಯಾಹ್ನವೇ ಫೈನಲ್ ನಡೆಯಲಿದೆ.

ಇದನ್ನೂ ಓದಿ: Tokyo Olympics: ಟೇಬಲ್ ಟೆನ್ನಿಸ್‌ನಲ್ಲಿ 3ನೇ ಸುತ್ತು ಪ್ರವೇಶಿಸಿದ ಭಾರತದ ಮನಿಕಾ ಬಾತ್ರಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.