ಮುಂಬೈ: ಒಲಿಂಪಿಕ್ಸ್ನಲ್ಲಿ ಪದಕ ಗೆದ್ದವರಿಗೆ ನಗದು ಬಹುಮಾನ ಪ್ರಕಟಿಸಿದ್ದ ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಇದೀಗ ಪದಕ ಗೆದ್ದ ಕ್ರೀಡಾಪಟುಗಳ ಕೋಚ್ಗಳಿಗೂ ಬಹುಮಾನ ಘೋಷಿಸಿದೆ.
ಗುರುವಾರ ಐಒಎ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದವರಿಗೆ 75 ಲಕ್ಷ ರೂ, ಬೆಳ್ಳಿ ಗೆದ್ದವರಿಗೆ 40 ಲಕ್ಷ ಮತ್ತು ಕಂಚು ಗೆದ್ದವರಿಗೆ 25 ಲಕ್ಷ ರೂ ಬಹುಮಾನ ಘೋಷಿಸಿತ್ತು. ಜೊತೆಗೆ ಪದಕ ಗೆದ್ದುಕೊಡುವ ಕ್ರೀಡಾಪಟುಗಳನ್ನು ತಯಾರಿಸಿದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ 30 ಮತ್ತು ಒಲಿಂಪಿಕ್ಸ್ಗೆ ಭಾಗವಹಿಸಿದ ಒಕ್ಕೂಟಗಳಿಗೆ ತಲಾ 25 ಲಕ್ಷ ಮತ್ತು ಇತರ ಒಕ್ಕೂಟಗಳಿಗೆ ಪ್ರೋತ್ಸಾಹದಾಯಕವಾಗಿ 15 ಲಕ್ಷರೂ. ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ ಅಸೋಸಿಯೇಷನ್ ಘೋಷಣೆ ಮಾಡಿತ್ತು.
ಈ ಪ್ರಕಾರ ಇಂದು ಬೆಳ್ಳಿ ಗೆದ್ದ ಮೀರಾಬಾಯಿ ಚಾನುಗೆ ಐಒಎ ಕಡೆಯಿಂದ 40 ಲಕ್ಷರೂ ಸಿಗಲಿದೆ. ಇನ್ನು ಇವರ ಕೋಚ್ ವಿಜಯ ಶರ್ಮಾ ಕೂಡ 10 ಲಕ್ಷ ರೂ ಪಡೆಯಲಿದ್ದಾರೆ.
ಮಣಿಪುರ ಸರ್ಕಾರದಿಂದ ಒಂದು ಕೋಟಿ ಬಹುಮಾನ:
ಮೀರಾ ಬಾಯಿ ಬೆಳ್ಳಿ ಪದಕ ತಂದುಕೊಟ್ಟಿರುವುದರಿಂದ ಸಂತೋಷ ವ್ಯಕ್ತಪಡಿಸಿರುವ ಮಣಿಪುರ ಮುಖ್ಯಮಂತ್ರಿ ನಾಂಗ್ಥೊಂಬಮ್ ಬಿರೆನ್ ಒಂದು ಕೋಟಿ ರೂ ಬಹುಮಾನ ಘೋಷಿಸಿದ್ದಾರೆ.
ಸ್ವತಃ ಮಾಜಿ ಫುಟ್ಬಾಲಿಗನಾಗಿರುವ ಬಿರೆನ್ ಮಣಿಪುರದಿಂದ ಯಾರೇ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದರೆ ಒಂದು ಕೋಟಿ ರೂ ಮತ್ತು ಭಾಗವಹಿಸುವ ಕ್ರೀಡಾಪಟುಗಳಿಗೆ ನಗದು ಪ್ರೋತ್ಸಾಹ ನೀಡಲಾಗುವುದು ಎಂದು ಘೋಷಿಸಿದ್ದರು.
ಇದನ್ನು ಓದಿ:Tokyo Olympics: ಈ ಬೆಳ್ಳಿ ಪದಕ ಇಡೀ ದೇಶಕ್ಕೆ ಅರ್ಪಣೆ : ಮೀರಾಬಾಯಿ ಚಾನು