ಹೈದರಾಬಾದ್: 20 ವರ್ಷಗಳ ಹಿಂದೆ ಅಂದಿನ ಈ ದಿನ (ಡಿಸೆಂಬರ್ 24, 2000) ಚೆಸ್ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರು ಸ್ಪೇನ್ನ ಅಲೆಕ್ಸಿ ಶಿರೋವ್ ಅವರನ್ನು ಮಣಿಸಿ ಮೊದಲ ಬಾರಿಗೆ ದಿ ಇಂಟರ್ನ್ಯಾಷನಲ್ ಚೆಸ್ ಫೆಡರೇಷನ್ (ಎಫ್ಐಡಿಇ) ವಿಶ್ವ ಚೆಸ್ ಚಾಂಪಿಯನ್ಶಿಪ್ ಗೆದ್ದು ದಾಖಲೆ ಬರೆದಿದ್ದರು.
ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಎಫ್ಐಡಿಇ ವಿಶ್ವ ಚೆಸ್ ಚಾಂಪಿಯನ್ಶಿಪ್-2000ನವದೆಹಲಿ ಮತ್ತು ಟೆಹ್ರಾನ್‌ನಲ್ಲಿ ನಡೆದಿತ್ತು. ಟೂರ್ನಿಯ ಅಂತಿಮ ಪಂದ್ಯ ಡಿ.20 ರಿಂದ 24ರವರೆಗೆ ಜರುಗಿತ್ತು. ವಿಶ್ವನಾಥನ್ ಆನಂದ್ ಅವರು, 20 ವರ್ಷಗಳ ಹಿಂದೆ ಈ ದಿನ ಏನು ನಡೆದಿತ್ತು ಎಂಬುದನ್ನು ಊಹಿಸುವಿರಾ? ಎಂದು ಟ್ವೀಟ್ ಮಾಡಿದ್ದಾರೆ.
-
Today ....20 years ago . Any guesses?
— Viswanathan Anand (@vishy64theking) December 24, 2020 " class="align-text-top noRightClick twitterSection" data="
">Today ....20 years ago . Any guesses?
— Viswanathan Anand (@vishy64theking) December 24, 2020Today ....20 years ago . Any guesses?
— Viswanathan Anand (@vishy64theking) December 24, 2020
ಇದನ್ನೂ ಓದಿ...ಧೋನಿ ನಿವೃತ್ತಿ ಸೇರಿದಂತೆ 2020ರ ಪ್ರಮುಖ ಕ್ರೀಡಾ ನೆನಪುಗಳು
ಉದಯೋನ್ಮುಖ ಚೆಸ್ ತಾರೆಗಳ ಸೃಷ್ಟಿಸಲು ಅಕಾಡೆಮಿ ಆರಂಭಿಸುತ್ತಿರುವುದಾಗಿ ಈ ತಿಂಗಳ ಆರಂಭದಲ್ಲಿ ವಿಶ್ವನಾಥನ್ ಘೋಷಿಸಿದ್ದರು. ವೆಸ್ಟ್ಬ್ರಿಡ್ಜ್ ಆನಂದ್ ಚೆಸ್ ಅಕಾಡೆಮಿ (ಡಬ್ಲ್ಯೂಎಸಿಎ) ಪ್ರಾರಂಭಿಸುವ ಕುರಿತು ಘೋಷಿಸಲು ತುಂಬಾ ಉತ್ಸುಕನಾಗಿದ್ದೇನೆ. ದೇಶದಲ್ಲಿ ಪ್ರತಿಭೆಗಳನ್ನು ಬೆಳೆಸುವ ನನ್ನ ಕನಸು ಇಂದು ನನಸಾಗುತ್ತಿರುವುದಕ್ಕೆ ಅತೀವ ಸಂತಸವಾಗುತ್ತಿದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.
ಕಿರಿಯ ಚೆಸ್ ತಾರೆಗಳನ್ನು ಉನ್ನತ ಶ್ರೇಣಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿರುವ ಫೆಲೋಶಿಪ್ ಕಾರ್ಯಕ್ರಮವಾಗಲಿದೆ ಎಂದೂ ಹೇಳಿದ್ದರು.