ಬ್ಯಾಂಕಾಕ್ (ಥಾಯ್ಲೆಂಡ್): ಥಾಯ್ಲೆಂಡ್ ಓಪನ್ 2023 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಂದು ಪದಕದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ. ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗಕ್ಕೆ ನಡೆದ ಸೆಮೀಸ್ ಪಂದ್ಯದಲ್ಲಿ ಲಕ್ಷ್ಯ ಸೇನ್ ಥಾಯ್ಲೆಂಡ್ ಓಪನ್ 2023 ಬ್ಯಾಡ್ಮಿಂಟನ್ ಟೂರ್ನಿಯ ಹೋರಾಟವನ್ನು ಕೊನೆಗೊಳಿಸಿದರು. ಕಾಮನ್‌ವೆಲ್ತ್ ಗೇಮ್ಸ್ 2022 ರ ಚಾಂಪಿಯನ್ ಲಕ್ಷ್ಯ ಸೇನ್ 21-13, 17-21, 13-21 ರಿಂದ ವಿಶ್ವದ 5ನೇ ಶ್ರೇಯಾಂಕದ ಥಾಯ್ಲೆಂಡ್ನ ಕುನ್ಲವುಟ್ ವಿಟಿಡ್ಸರ್ನ್ ವಿರುದ್ಧ ಸೋಲು ಕಂಡರು.
ಬ್ಯಾಡ್ಮಿಂಟನ್ನಲ್ಲಿ 23 ನೇ ಶ್ರೇಯಾಂಕವನ್ನು ಹೊಂದಿದ್ದ ಲಕ್ಷ್ಯ ಸೇನ್ ಅವರು ಆಲ್ ಇಂಗ್ಲೆಂಡ್ ಓಪನ್ 2022 ಪ್ರಶಸ್ತಿ ಘರ್ಷಣೆಯನ್ನು ತಲುಪಿದ ನಂತರ ತಮ್ಮ ಮೊದಲ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ (ಬಿಡಬ್ಲ್ಯೂ) ವರ್ಲ್ಡ್ ಟೂರ್ ಫೈನಲ್ ಮಾಡುವ ಗುರಿಯನ್ನು ಹೊಂದಿದ್ದರು. ಸೇನ್ ಉತ್ತಮ ಆರಂಭವನ್ನು ಕಂಡರು ಮತ್ತು ಮೊದಲ ಸೆಟ್ನ್ನು ಜಯಿಸಿದರು. ಆದರೆ ಮಿಕ್ಕೆರಡು ಸೆಟ್ನಲ್ಲಿ ವಿಶ್ವದ 5ನೇ ಶ್ರೇಯಾಂಕದ ಕುನ್ಲವುಟ್ ವಿಟಿಡ್ಸರ್ನ್ ಮುನ್ನಡೆ ಸಾಧಿಸಿ ಗೆದ್ದುಕೊಂಡರು.
ಮೊದಲ ಸೆಟ್ನಲ್ಲಿ ಗೆಲುವು: ಮೊದಲ ಸೆಟ್ನಲ್ಲಿ ಲಕ್ಷ್ಯ ಬಲವಾದ ಹೊಡೆತಗಳಿಂದ ಲೀಡ್ ಪಡೆದುಕೊಂಡು ಮುಂದೆ ಸಾಗಿದರು. ಆರಂಭದಲ್ಲೇ 7-4 ರಿಂದ ಮುನ್ನಡೆ ಪಡೆದುಕೊಂಡು ಅದೇ ಲಯದಲ್ಲಿ ಮೊದಲ ಸೆಟ್ ತಮ್ಮದಾಗಿಸಿಕೊಂಡರು. ಆದರೆ ಎರಡನೇ ಸೆಟ್ನಲ್ಲಿ ಲಕ್ಷ್ಯ ಸೇನ್ ಅವರನ್ನು ಹಿಮ್ಮೆಟ್ಟಿಸಿದ 5ನೇ ರ್ಯಾಂಕ್ನ ಥಾಯ್ಲೆಂಡ್ನ ಆಟಗಾರ 17 - 21 ರಲ್ಲಿ ಗೆಲುವು ಕಂಡರು. ಎರಡನೇ ಸೆಟ್ನಲ್ಲಿ ಕೇವಲ ನಾಲ್ಕು ಅಂಕಗಳ ಹಿನ್ನಡೆ ಕಂಡಿದ್ದ ಸೇನ್ ಮೂರನೇ ಸೆಟ್ನಲ್ಲಿ ನಿರ್ಣಾಯ ಹಂತ ತೆಗೆದುಕೊಂಡರು.
-
Thailand Open Badminton: Indian shuttler Lakshya Sen lost in semi finals to K. Vitidsarn of Thailand by 21-17, 17-21, 13-21 at Bangkok.#ThailandOpen2023🏸 pic.twitter.com/COIFTj6ln7
— All India Radio News (@airnewsalerts) June 3, 2023 " class="align-text-top noRightClick twitterSection" data="
">Thailand Open Badminton: Indian shuttler Lakshya Sen lost in semi finals to K. Vitidsarn of Thailand by 21-17, 17-21, 13-21 at Bangkok.#ThailandOpen2023🏸 pic.twitter.com/COIFTj6ln7
— All India Radio News (@airnewsalerts) June 3, 2023Thailand Open Badminton: Indian shuttler Lakshya Sen lost in semi finals to K. Vitidsarn of Thailand by 21-17, 17-21, 13-21 at Bangkok.#ThailandOpen2023🏸 pic.twitter.com/COIFTj6ln7
— All India Radio News (@airnewsalerts) June 3, 2023
ಎರಡು ಮತ್ತು ಮೂರನೇ ಸೆಟ್ನಲ್ಲಿ ಲಕ್ಷ್ಯ ಕಳೆದುಕೊಂಡ ಸೇನ್: ಒಂದು ವಿರಾಮದ ವರೆಗೆ 11-10 ರಿಂದ ಒಂದು ಅಂಕದ ಮುನ್ನಡೆಯಲ್ಲಿದ್ದ ಲಕ್ಷ್ಯ ದಿಢೀರ್ ಕುಸಿತ ಕಂಡು ಮೂರನೇ ಸೆಟ್ನಲ್ಲಿ ಸೋಲುಂಡರು. ಸೇನ್ 11 ರಿಂದ 13 ಅಂಕ ಗಳಿಸುವಷ್ಟರಲ್ಲಿ ಎದುರಾಳಿ 10 ರಿಂದ 21 ಕ್ಕೆ ಸುಲಭವಾಗಿ ಹೋಗಿದ್ದರು. ಇದರಿಂದ ಎರಡು ಸೆಟ್ಗಳನ್ನು ಕಳೆದುಕೊಂಡ ಸೇನ್ ಸೆಮಿಸ್ನಿಂದ ಹೊರಬರಬೇಕಾಯಿತು. ಆದರೆ ಥಾಯ್ಲೆಂಡ್ನ ಕುನ್ಲವುಟ್ ವಿಟಿಡ್ಸರ್ನ್ ಅವರ ವಿರುದ್ಧ ಹೆಡ್-ಟು-ಹೆಡ್ನಲ್ಲಿ ಸೇನ್ 5-3 ರಿಂದ ಮುಂದಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ಲಕ್ಷ್ಯ ಅವರು 2023 ರ ಕಠಿಣ ಋತುವನ್ನು ಹೊಂದಿದ್ದಾರೆ. ಇದು ವರ್ಷದ ಅವರ ಮೊದಲ ಸೆಮಿಫೈನಲ್ ಪ್ರದರ್ಶನವಾಗಿದೆ. ಇಂಡೋನೇಷ್ಯಾ ಮಾಸ್ಟರ್ಸ್‌ನ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದು, ಅವರ ಈ ಹಿಂದಿನ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದಕ್ಕೂ ಮೊದಲು, ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತದ ಸವಾಲು ಸೈನಾ ನೆಹ್ವಾಲ್ 16 ರ ಸುತ್ತಿನಲ್ಲಿ ನಿರ್ಗಮಿಸುವುದರೊಂದಿಗೆ ಕೊನೆಗೊಂಡಿತು ಮತ್ತು ಪಿವಿ ಸಿಂಧು ಮೊದಲ ಸುತ್ತಿನಲ್ಲಿ ಸೋಲನುಭವಿಸಿದ್ದರು.
ಇದನ್ನೂ ಓದಿ: ಐಪಿಎಲ್ ಮತ್ತು ದೇಶೀಯ ಪಂದ್ಯಗಳ ಫಾರ್ಮ್ನ್ನು ಇಲ್ಲಿಯೂ ಮುಂದುವರೆಸುತ್ತೇನೆ: ಅಜಿಂಕ್ಯಾ ರಹಾನೆ