ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ ತಮ್ಮ ಅವಿರತ ಹೋರಾಟದ ಹೊರೆಯಾಗಿಯೂ ಪದಕ ಕಳೆದುಕೊಂಡು ನಿರಾಸೆಯನುಭವಿಸಿದ್ದ ಭಾರತೀಯ ಹಾಕಿ ತಂಡ ಹಾಗೂ ಇನ್ನೂ ಕೆಲವು ಕ್ರೀಡಾಪಟುಗಳಿಗೆ ಭಾರತದ ಖ್ಯಾತ ವಾಹನ ಉತ್ಪಾದನಾ ಕಂಪನಿಯಾದ ಟಾಟಾ ಮೋಟರ್ಸ್ 24 ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಕೋಟ್ಯಂತರ ಕ್ರೀಡಾಭಿಮಾನಿಗಳ ಮನಸ್ಸು ಗೆದ್ದಿದೆ.
ಒಲಿಂಪಿಕ್ಸ್ನಲ್ಲಿ ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದ ಭಾರತೀಯ ಮಹಿಳಾ ಹಾಕಿ ತಂಡದ ಎಲ್ಲ ಸದಸ್ಯರಿಗೆ ಕಾರು ನೀಡಿದೆ. ಜೊತೆಗೆ ಗಾಲ್ಫರ್ ಅದಿತಿ ಅಶೋಕ್, ಕುಸ್ತಿಪಟು ದೀಪಕ್ ಪೂನಿಯಾ, ಡಿಸ್ಕಸ್ ಥ್ರೋವರ್ ಕಮಲ್ಪ್ರೀತ್ ಕೌರ್ ಮತ್ತು ಬಾಕ್ಸರ್ಗಳಾದ ಸತೀಶ್ ಕುಮಾರ್ ಮತ್ತು ಪೂಜಾರಾಣಿ ಅವರಿಗೆ ನೂತನ ಅಲ್ಟ್ರಾಜ್ ಕಾರನ್ನು ಇಂದು ಹಸ್ತಾಂತರಿಸಲಾಗಿದೆ.
-
#ALTROZForOlympians was an unforgettable celebration of our Olympians who won our hearts and inspired billions with their performance at Tokyo Olympics 2020. It was a privilege to present the #Altroz to them.#TheGoldStandard #TataMotors pic.twitter.com/CeHNk7JRyZ
— Tata Motors Cars (@TataMotors_Cars) August 26, 2021 " class="align-text-top noRightClick twitterSection" data="
">#ALTROZForOlympians was an unforgettable celebration of our Olympians who won our hearts and inspired billions with their performance at Tokyo Olympics 2020. It was a privilege to present the #Altroz to them.#TheGoldStandard #TataMotors pic.twitter.com/CeHNk7JRyZ
— Tata Motors Cars (@TataMotors_Cars) August 26, 2021#ALTROZForOlympians was an unforgettable celebration of our Olympians who won our hearts and inspired billions with their performance at Tokyo Olympics 2020. It was a privilege to present the #Altroz to them.#TheGoldStandard #TataMotors pic.twitter.com/CeHNk7JRyZ
— Tata Motors Cars (@TataMotors_Cars) August 26, 2021
ಈ ಒಲಿಂಪಿಕ್ ಭಾರತಕ್ಕೆ ಪದಕಗಳಿಗಿಂತ ಹೆಚ್ಚಿನದ್ದಾಗಿದೆ. ನಮ್ಮ ಆಟಗಾರರ ಶ್ರಮ ಹಾಗೂ ಚೈತನ್ಯವನ್ನು ನಾವು ಸಂಭ್ರಮಿಸಬೇಕು. ಒತ್ತಡದ ನಡುವೆಯೂ ಅದ್ಭುತವಾಗಿ ಪ್ರದರ್ಶನ ನೀಡಿದ ಕ್ರೀಡಾಪಟುಗಳಿಗೆ ನಾವು ಪ್ರೋತ್ಸಾಹ ನೀಡಬೇಕು ಎಂದು ಕೆಲವು ದಿನಗಳ ಹಿಂದೆ ಟಾಟಾ ಮೋಟಾರ್ಸ್ನ ಪ್ಯಾಸೆಂಜರ್ ವೆಹಿಕಲ್ ಬ್ಯುಸಿನೆಸ್ನ ಅಧ್ಯಕ್ಷ ಶೈಲೇಶ್ ಚಂದ್ರ ತಿಳಿಸಿದ್ದರು.
ಈ ಆಟಗಾರರು ಪದಕ ಗೆಲ್ಲುವಲ್ಲಿ ಸೋತಿರಬಹುದು. ಆದರೆ, ಕೋಟ್ಯಂತರ ಭಾರತೀಯರ ಹೃದಯ ಗೆದ್ದಿದ್ದಾರೆ. ಅವರ ತ್ಯಾಗ ಹಾಗೂ ಪರಿಶ್ರಮ ಭಾರತೀಯ ಉದಯೋನ್ಮುಖ ಯುವ ಆಟಗಾರರಿಗೆ ಖಂಡಿತವಾಗಿಯೂ ಸ್ಫೂರ್ತಿ ಆಗಿದೆ. ಇವರನ್ನು ನಾವು ಗೌರವಿಸಿ ಅಭಿನಂದಿಸಬೇಕು. ಈ ನಿಟ್ಟಿನಲ್ಲಿ ಗೋಲ್ಡನ್ ಕಲರ್ನ ‘ಅಲ್ಟ್ರಾಜ್’ ಕಾರು ಉಡುಗೊರೆ ರೂಪದಲ್ಲಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದರು. ಈ ‘ಅಲ್ಟ್ರಾಜ್’ ಕಾರು ಕಳೆದ ವರ್ಷ ಮಾರುಕಟ್ಟೆಗೆ ಪರಿಚಯವಾಗಿದೆ.
ಇದನ್ನು ಓದಿ:ಜೋ ರೂಟ್ ಹ್ಯಾಟ್ರಿಕ್ ಶತಕ.. ಭಾರತದ ವಿರುದ್ಧ ಹೆಚ್ಚು ಶತಕ ಬಾರಿಸಿದ ಇಂಗ್ಲೀಷ್ ಬ್ಯಾಟ್ಸ್ಮನ್!