ETV Bharat / sports

ಹರಿಯಾಣ ಸ್ಟೀಲರ್ಸ್​ ವಿರುದ್ಧ ತಲೆಬಾಗಿದ ತಮಿಳ್​ ತಲೈವಾಸ್​ - Haryana Beat Tamil 43-35 points

ಹರಿಯಾಣ ಸ್ಟೀಲರ್ಸ್ ತಂಡ​ 43- 35 ಅಂಕಗಳ ಅಂತರದಲ್ಲಿ ತಮಿಳ್​ ತಲೈವಾಸ್​ ವಿರುದ್ಧ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.

haryana steelers
author img

By

Published : Sep 14, 2019, 10:51 PM IST

ಪುಣೆ: ಪ್ರೋ ಕಬಡ್ಡಿ ಲೀಗ್​ನ 7ನೇ ಸೀಸನ್​ನ 90ನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್​ 43-35 ಅಂತರದಲ್ಲಿ ತಮಿಳ್​ ತಲೈವಾಸ್​ ವಿರುದ್ಧ ಗೆಲುವು ಸಾಧಿಸಿದೆ.

ಅನುಭವಿಗಳ ದಂಡನ್ನೇ ಹೊಂದಿರುವ ತಮಿಳ್​ ತಲೈವಾಸ್​ ಮೊದಲಾರ್ಧದಲ್ಲಿ 14-17ರಲ್ಲಿ ಹಿನ್ನೆಡೆ ಸಾಧಿಸಿತ್ತು. ಆದರೆ ದ್ವಿತೀಯಾರ್ಧದ ಆರಂಭದಲ್ಲೇ ಭರ್ಜರಿ ಪ್ರದರ್ಶನ ತೋರಿ 18-17 ರಲ್ಲಿ ಮುನ್ನಡೆ ಕಾಯ್ದುಕೊಂಡಿತು. ಕೊನೆಯ 7 ನಿಮಿಷಗಳ ವರೆಗೂ ಎರಡೂ ತಂಡಗಳು ಸಮಬಲದ ಪ್ರದರ್ಶನ ಕಾಯ್ದುಕೊಂಡಿದ್ದವು. ಆದರೆ ದ್ವಿತೀಯಾರ್ಧದ ಅಂತ್ಯದ ವೇಳೆ ವೇಗವಾಗಿ ಅಂಕ ಕಲೆ ಹಾಕಿದ ಸ್ಟೀಲರ್ಸ್​ 43-35 ರಲ್ಲಿ ಗೆದ್ದುಕೊಂಡಿತು.

ಸ್ಟೀಲರ್ಸ್​ ಪರ ಅದ್ಭುತ ರೈಡಿಂಗ್​ ನಡೆಸಿದ ವಿಕಾಶ್​ ಕಂಡೊಲ 13, ವಿನಯ್​ 10, ಪಡೆದರೆ ಡಿಫೆಂಡರ್​ಗಳಾದ ವಿಕಾಸ್​ ಕಾಳೆ 4, ಅಂಕ ಧರ್ಮರಾಜ್​ 3, ಸುನಿಲ್​ 4, ರವಿಕುಮಾರ್​ 3 ಅಂಕ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಈ ಗೆಲುವಿನೊಂದಿಗೆ ಸ್ಟೀಲರ್ಸ್​ 15 ಪಂದ್ಯಗಳಲ್ಲಿ 54 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿತು. ತಮಿಳ್​ ತಲೈವಾಸ್​ 16 ಪಂದ್ಯಗಳಲ್ಲಿ 11ನೇ ಸೋಲುಕಂಡು ಕೊನೆೆಯ ಸ್ಥಾನಿಯಾಯಿತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.