ಬೆಂಗಳೂರು: 38 ವರ್ಷದ ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ತಮ್ಮ ನಿವೃತ್ತಿಯ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ತಂಡಕ್ಕಾಗಿ ನನಗೆ ಯಾವಾಗ ಆಡಲು ಸಾಧ್ಯವಿಲ್ಲ ಎಂದು ಅನ್ನಿಸುವುದೋ ಅಂದು ವಿದಾಯ ಹೇಳುತ್ತೇನೆ. ಅಲ್ಲಿಯವರೆಗೆ ಮೈದಾನದಲ್ಲಿರುತ್ತೇನೆ ಎಂದರು.
ಸುನಿಲ್ ಛೆಟ್ರಿ ಮತ್ತಷ್ಟು ಆಡಲು ಶಕ್ತರಾಗಿದ್ದಾರೆ ಎಂಬುದಕ್ಕೆ ಸದ್ಯ ನಡೆಯುತ್ತಿರುವ ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ (ಎಸ್ಎಎಫ್ಎಫ್) ಚಾಂಪಿಯನ್ಶಿಪ್ನ ಮೂರು ಪಂದ್ಯಗಳೇ ಸಾಕ್ಷಿ. ಈ ಪಂದ್ಯಗಳಲ್ಲಿ ಅವರು 5 ಗೋಲು ಗಳಿಸಿ ಅಮೋಘ ಪ್ರದರ್ಶನ ನೀಡಿದ್ದಾರೆ. ನಾಳೆ ಭಾರತ- ಲೆಬನಾನ್ ನಡುವೆ ಸೆಮಿಫೈನಲ್ ನಡೆಯಲಿದೆ.
-
Captain @chetrisunil11 and Assistant Coach Mahesh Gawali reiterate the point that 🇮🇳 is fully prepared and focused for the semifinal clash against 🇱🇧
— Indian Football Team (@IndianFootball) June 30, 2023 " class="align-text-top noRightClick twitterSection" data="
Watch the full pre-match press conference👉🏽 https://t.co/e0WKxOgSGb#SAFFChampionship2023 #LBNIND #BlueTigers #IndianFootball pic.twitter.com/uQI2EHZHz0
">Captain @chetrisunil11 and Assistant Coach Mahesh Gawali reiterate the point that 🇮🇳 is fully prepared and focused for the semifinal clash against 🇱🇧
— Indian Football Team (@IndianFootball) June 30, 2023
Watch the full pre-match press conference👉🏽 https://t.co/e0WKxOgSGb#SAFFChampionship2023 #LBNIND #BlueTigers #IndianFootball pic.twitter.com/uQI2EHZHz0Captain @chetrisunil11 and Assistant Coach Mahesh Gawali reiterate the point that 🇮🇳 is fully prepared and focused for the semifinal clash against 🇱🇧
— Indian Football Team (@IndianFootball) June 30, 2023
Watch the full pre-match press conference👉🏽 https://t.co/e0WKxOgSGb#SAFFChampionship2023 #LBNIND #BlueTigers #IndianFootball pic.twitter.com/uQI2EHZHz0
ಲೆಬನಾನ್ ವಿರುದ್ಧದ ಪಂದ್ಯಕ್ಕೂ ಮುನ್ನಾದಿನ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಛೆಟ್ರಿ, "ದೇಶಕ್ಕಾಗಿ ನನ್ನ ಕೊನೆಯ ಪಂದ್ಯ ಯಾವಾಗ ಎಂದು ನನಗೆ ಗೊತ್ತಿಲ್ಲ. ನಾನು ಎಂದಿಗೂ ದೀರ್ಘಾವಧಿಯ ಗುರಿಗಳನ್ನು ಹೊಂದಿಲ್ಲ. ಮುಂದಿನ ಪಂದ್ಯದ ಬಗ್ಗೆ ಯೋಚಿಸುತ್ತೇನೆ ಅಷ್ಟೇ. ಮುಂದಿನ 10 ದಿನಗಳ ಬಗ್ಗೆ ಯೋಚಿಸುತ್ತೇನೆ. ನಿವೃತ್ತಿ ಒಂದು ದಿನ ಸಂಭವಿಸುತ್ತದೆ. ನಾನು ಆಟವನ್ನು ಬಯಸದ ದಿನದಲ್ಲಿ ಅದು ನಡೆಯಲಿದೆ. ಆದರೆ ಅಲ್ಲಿಯವರೆಗೆ ಆ ಬಗ್ಗೆ ಯೋಚಿಸಲಾರೆ" ಎಂದು ಹೇಳಿದರು.
91 ಗೋಲುಗಳೊಂದಿಗೆ ಏಷ್ಯಾದ ಎರಡನೇ ಅತಿ ದೊಡ್ಡ ಸ್ಕೋರರ್ ಆಗಿರುವ ಛೆಟ್ರಿ, ನಿವೃತ್ತಿ ಹೊಂದಬೇಕೇ ಎಂದು ನಿರ್ಧರಿಸಲು ಸ್ವತಃ ತಾವೇ ಕೆಲವು ಮಾನದಂಡಗಳನ್ನು ಹೊಂದಿರುವುದಾಗಿ ಎಂದು ಹೇಳಿದರು. "ನನ್ನದೇ ಕೆಲವು ಮಾನದಂಡಗಳಿವೆ. ನಾನು ತಂಡಕ್ಕೆ ಕೊಡುಗೆ ನೀಡಲು ಸಾಧ್ಯವೇ ಅಥವಾ ಇಲ್ಲವೇ? ನಾನು ಗೋಲು ಗಳಿಸಲು ಶಕ್ತನಾಗಿದ್ದೇನೆಯೇ ಅಥವಾ ಇಲ್ಲವೇ, ನಾನು ಬಯಸಿದಷ್ಟು ಕಠಿಣ ತರಬೇತಿ ನೀಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ. ಈ ಕೆಲವು ನಿಯತಾಂಕಗಳು ನಾನು ಈ ತಂಡಕ್ಕೆ ಸೂಕ್ತವೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತವೆ ಎಂದರು.
-
The long camp has helped this team get closer on and off the field 💙
— Indian Football Team (@IndianFootball) June 30, 2023 " class="align-text-top noRightClick twitterSection" data="
There are two more games to play, and the #BlueTigers are prepared to give everything they can 🙌🏻#IndianFootball ⚽️ pic.twitter.com/Agi9rjVIaF
">The long camp has helped this team get closer on and off the field 💙
— Indian Football Team (@IndianFootball) June 30, 2023
There are two more games to play, and the #BlueTigers are prepared to give everything they can 🙌🏻#IndianFootball ⚽️ pic.twitter.com/Agi9rjVIaFThe long camp has helped this team get closer on and off the field 💙
— Indian Football Team (@IndianFootball) June 30, 2023
There are two more games to play, and the #BlueTigers are prepared to give everything they can 🙌🏻#IndianFootball ⚽️ pic.twitter.com/Agi9rjVIaF
ನಾಳಿನ ಮುಖಾಮುಖಿ ಬಗ್ಗೆ ಮಾತನಾಡಿದ ಅವರು, ಲೆಬನಾನ್ ಅತ್ಯಂತ ಬಲಿಷ್ಠ ತಂಡ. ಅವರನ್ನು ಲಘುವಾಗಿ ಪರಿಗಣಿಸಿದರೆ ದುಬಾರಿಯಾಗಬಹುದು. ಇತ್ತೀಚೆಗೆ, ಇಂಟರ್‌ಕಾಂಟಿನೆಂಟಲ್ ಕಪ್‌ನ ಫೈನಲ್‌ನಲ್ಲಿ ಭಾರತ ಲೆಬನಾನ್ ವಿರುದ್ಧ 2-0 ಗೆಲುವು ಸಾಧಿಸಿದೆ ಎಂದರು.
ಇದನ್ನೂ ಓದಿ: SAFF Championship: ಸ್ಯಾಫ್ ಫುಟ್ಬಾಲ್- ನೇಪಾಳ ಮಣಿಸಿ ಸೆಮೀಸ್ಗೇರಿದ ಭಾರತ: ಚೆಟ್ರಿ 91ನೇ ಗೋಲು ಸಾಧನೆ