ETV Bharat / sports

ಚಿನ್ನದ ಹುಡುಗಿ ಮೀರಾಬಾಯಿ ಚಾನು ಹುಟ್ಟುಹಬ್ಬ: ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಹೀಗೆ.. - ಈಟಿವಿ ಭಾರತ ಕರ್ನಾಟಕ

ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ಬರೆದ ಭಾರತದ ಹೆಮ್ಮೆಯ ವೇಟ್‌ ಲಿಫ್ಟರ್‌ ಮೀರಾಬಾಯಿ ಚಾನು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Star Weightlifter Mirabai Chanu
Star Weightlifter Mirabai Chanu
author img

By

Published : Aug 10, 2022, 4:59 PM IST

2022ರ ಬರ್ಮಿಂಗ್​ಹ್ಯಾಮ್​​ ಕಾಮನ್​​ವೆಲ್ತ್ ಗೇಮ್ಸ್​​ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿರುವ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 28ನೇ ವಸಂತಕ್ಕೆ ಕಾಲಿಟ್ಟಿರುವ ಚಾನು ಸಿಕ್ಕಿಂನಲ್ಲಿರುವ ತಮ್ಮ ನಿವಾಸದಲ್ಲಿ ಕೇಕ್​ ಕತ್ತರಿಸಿ ಖುಷಿಪಟ್ಟರು.

Star Weightlifter Mirabai Chanu
ಕುಟುಂಬ, ಸ್ನೇಹಿತರೊಂದಿಗೆ ಕೇಕ್ ಕತ್ತರಿಸಿದ ಮೀರಾಬಾಯಿ

ಕುಟುಂಬ ವರ್ಗ ಹಾಗೂ ಸ್ನೇಹಿತರೊಂದಿಗೆ ಬೃಹತ್‌ ಕೇಕ್ ಕತ್ತರಿಸಿ ಹುಟ್ಟಿದ ದಿನಾಚರಿಸಿದ ಅವರು ಖುಷಿ ಕ್ಷಣಗಳ ಕೆಲವು ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸುಸಂದರ್ಭದಲ್ಲಿ ಚಾನು, ಸಸಿಗಳನ್ನು ನೆಟ್ಟು ಪರಿಸರ ಪ್ರೇಮವನ್ನೂ ಮೆರೆದರು.

Star Weightlifter Mirabai Chanu
ಚಿನ್ನದ ಹುಡುಗಿ ಮೀರಾಬಾಯಿ ಚಾನು ಹುಟ್ಟುಹಬ್ಬ

ಇದನ್ನೂ ಓದಿ: CWG-2022.. ಮೀರಾಬಾಯಿ ಚಾನುಗೆ ಸ್ವರ್ಣ ಪದಕ.. ಚಿನ್ನದ ಹುಡುಗಿಗೆ ಪ್ರಧಾನಿ ಅಭಿನಂದನೆ

ಟೋಕಿಯೋ ಒಲಿಂಪಿಕ್ಸ್​​​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸಾಯಿಕೋಮ್ ಮೀರಾಬಾಯಿ ಚಾನು, 49 ಕೆಜಿ ಮಹಿಳಾ ವಿಭಾಗದ ವೇಟ್​ ಲಿಫ್ಟಿಂಗ್​​ನಲ್ಲಿ ಒಟ್ಟು 201 ಕೆಜಿ ಭಾರ ಎತ್ತುವ ಮೂಲಕ ಐತಿಹಾಸಿಕ ಸಾಧನೆ ತೋರಿದ್ದರು.

Star Weightlifter Mirabai Chanu
ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿನ್ನದ ಹುಡುಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.