ETV Bharat / sports

ಕೊರೊನಾದಿಂದ ಸಂಕಷ್ಟಕ್ಕೀಡಾಗಿದ್ದ ಕ್ರೀಡಾಪಟುಗಳಿಗೆ ಹಣ ಮಂಜೂರು ಮಾಡಿದ ಕ್ರೀಡಾ ಸಚಿವರು - ಖೇಲೋ ಇಂಡಿಯಾ

ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಉತ್ತರ ಪ್ರದೇಶದ ಈ ಕ್ರೀಡಾಪಟುಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯಡಿ ಆರ್ಥಿಕ ಸಹಾಯವನ್ನು ಮಂಜೂರು ಮಾಡಿದ್ದಾರೆ.

ಕ್ರೀಡಾಪಟುಗಳಿಗೆ 5 ಲಕ್ಷ ರೂ ಮಂಜೂರು
ಕ್ರೀಡಾಪಟುಗಳಿಗೆ 5 ಲಕ್ಷ ರೂ ಮಂಜೂರು
author img

By

Published : Oct 6, 2020, 11:33 PM IST

ನವದೆಹಲಿ: ಕೋವಿಡ್​​ನಿಂದ ತಂದೆ ಕೆಲಸ ಕಳೆದುಕೊಂಡಿದ್ದರಿಂದ ಹಲವು ಸಂಕಷ್ಟ ಎದುರಿಸುತ್ತಿದ್ದ ಬಿಲ್ಲುಗಾರ ಸುನೀಲ್ ಚೌಹಾಣ್ ಹಾಗೂ ಅವರ ಸಹೋದರ ನೀರಜ್ ಚೌಹಾಣ್ ಅವರಿಗೆ ಕ್ರೀಡಾ ಸಚಿವಾಲಯ ಮಂಗಳವಾರ ತಲಾ 5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದೆ.

ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಉತ್ತರ ಪ್ರದೇಶದ ಈ ಕ್ರೀಡಾಪಟುಗಳಿಗೆ ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿಯಡಿ ಆರ್ಥಿಕ ಸಹಾಯವನ್ನು ಮಂಜೂರು ಮಾಡಿದ್ದಾರೆ.

2019ರ ಸೀನಿಯರ್​ ಅರ್ಚರಿ ಚಾಂಪಿಯನ್​ಶಿಪ್​ನಲ್ಲಿ ನೀರಜ್​ 50 ಮೀಟರ್​ ವಿಭಾಗದಲ್ಲಿ ಬೆಳ್ಳಿ ಗೆದ್ದಿದ್ದರು. 2020ರ ರಾಷ್ಟ್ರೀಯ ಶಾಲಾಕೂಟದಲ್ಲೂ ಪದಕ ಗೆದ್ದಿದ್ದರು. ಇವರ ಸಹೋದರ ಸುನೀಲ್ ಈ ವರ್ಷದ ಆರಂಭದಲ್ಲಿ ಖೇಲೋ ಇಂಡಿಯಾ ವಿಶ್ವ ವಿದ್ಯಾಲಯ ಕ್ರೀಡಾಕೂಟದಲ್ಲಿ ಬಾಕ್ಸಿಂಗ್​ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಈ ಆರ್ಥಿಕ ಸಹಾಯದಿಂದ ನನ್ನ ಮತ್ತು ನನ್ನ ಕುಟುಂಬಕ್ಕೆ ಬಹಳ ಅನುಕೂಲವಾಗಲಿದೆ. ನಮಗೆ ಅಗತ್ಯದ ಸಮಯದಲ್ಲಿ ಸಹಾಯ ಮಾಡಿದ ಸಚಿವರಿಗೆ ನಾವು ನಿಜವಾಗಿಯೂ ಕೃತಜ್ಞರಾಗಿರುತ್ತೇವೆ ಎಂದು ಕ್ರೀಡಾ ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಸುನೀಲ್​ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.