ETV Bharat / sports

2020ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ: ವಿಜೇತರಿಗೆ ಟ್ರೋಫಿ ಹಸ್ತಾಂತರಿಸಿದ ಕ್ರೀಡಾ ಸಚಿವ - Major Dhyan Chand Khel Ratna

ದೆಹಲಿಯ ಅಶೋಕ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​, ಸ್ಟಾರ್​ ಕುಸ್ತಿಪಟು ವಿನೇಶ್ ಫೋಗಟ್​ ಮತ್ತು 2016ರ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ತಂಗವೇಲು ಪ್ರತಿಷ್ಠಿತ ಖೇಲ್​ ರತ್ನ ಪ್ರಶಸ್ತಿ ಸ್ವೀಕರಿಸಿದರು.

2020 National Sports Awards winners
ರಾಷ್ಟ್ರೀಯ ಕ್ರೀಡಾ ಪುರುಸ್ಕಾರ
author img

By

Published : Nov 1, 2021, 8:42 PM IST

ನವದೆಹಲಿ: ಕ್ರೀಡಾ ಸಚಿವ ಅನುರಾಗ್ ಠಾಕೂರ್​ 2020ರ ರಾಷ್ಟ್ರೀಯ ಕ್ರೀಡಾ ಪುರಸ್ಕ್ರತರಿಗೆ ಬೌತಿಕವಾಗಿ ಟ್ರೋಫಿಗಳನ್ನು ಸೋಮವಾರ ವಿತರಿಸಿದ್ದಾರೆ. ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಪ್ರಶಸ್ತಿ ಪ್ರದಾನ ಸಮಾರಂಭ ವರ್ಚುವಲ್​ ಆಗಿ ನಡೆದಿತ್ತು.

2020ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರೆಲ್ಲಾ ಈಗಾಗಲೇ ಅವರ ನಗದು ಬಹುಮಾನ ಪಡೆದುಕೊಂಡಿದ್ದರು. ಆದರೆ ಕೋವಿಡ್​ ಸಾಂಕ್ರಾಮಿಕ ಕಾರಣ ಟ್ರೋಫಿ ಮತ್ತು ಪ್ರಮಾಣ ಪತ್ರ ವಿತರಣೆ ತಡವಾಗಿತ್ತು.

ಕಳೆದ ವರ್ಷ ಆಗಸ್ಟ್​ 29ರಂದು ಕ್ರೀಡಾ ಸಚಿವಾಲಯ 74 ಕ್ರೀಡಾಪಟುಗಳಿಗೆ ಪ್ರಶಸ್ತಿ ಘೋಷಣೆ ಮಾಡಿತ್ತು. 5 ಆಟಗಾರರಿಗೆ ರಾಜೀವ್ ಗಾಂಧಿ ಖೇಲ್​ರತ್ನ (ಇದೀಗ ಮೇಜರ್​ ಧ್ಯಾನ್​ ಚಂದ್​ ಖೇಲ್​ ರತ್ನ ಎಂದು ಬದಲಿಸಲಾಗಿದೆ) ನೀಡಲಾಗಿತ್ತು.

ದೆಹಲಿಯ ಅಶೋಕ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್​, ಸ್ಟಾರ್​ ಕುಸ್ತಿಪಟು ವಿನೇಶ್ ಫೋಗಟ್​ ಮತ್ತು 2016ರ ಪ್ಯಾರಾಲಿಂಪಿಕ್ಸ್ ಚಿನ್ನದ ಪದಕ ವಿಜೇತ ತಂಗವೇಲು ಅವರಿಗೆ ಪ್ರತಿಷ್ಠಿತ ಖೇಲ್​ ರತ್ನ ಪ್ರಶಸ್ತಿ ಸ್ವೀಕರಿಸಿದರು.

​ಕ್ರಿಕೆಟರ್​ಗಳಾದ ಇಶಾಂತ್ ಶರ್ಮಾ, ಬಾಕ್ಸರ್​ ಲವ್ಲಿನಾ ಬೋರ್ಗೊಹೈನ್, ಓಟಗಾರ್ತಿ ದ್ಯುತಿ ಚಾಂದ್​, ಆರ್ಚರಿ ಪಟು ಆತನು ದಾಸ್​ ಮತ್ತು ಶಟ್ಲರ್​ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಸೇರಿದಂತೆ ಇತರರು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.

2020ರ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಪುರಸ್ಕೃತರ ಪಟ್ಟಿ:

ಖೇಲ್ ರತ್ನ ಪ್ರಶಸ್ತಿ: ರೋಹಿತ್ ಶರ್ಮಾ (ಕ್ರಿಕೆಟ್), ಮರಿಯಪ್ಪನ್ ತಂಗವೇಲು (ಪ್ಯಾರಾ ಅಥ್ಲೆಟಿಕ್ಸ್), ಮನಿಕಾ ಬಾತ್ರಾ (ಟೇಬಲ್ ಟೆನಿಸ್), ವಿನೇಶ್ ಫೋಗಟ್ (ಕುಸ್ತಿ), ರಾಣಿ ರಾಂಪಾಲ್ (ಹಾಕಿ).

ಅರ್ಜುನ ಪ್ರಶಸ್ತಿ: ಅತನು ದಾಸ್ (ಆರ್ಚರಿ), ದ್ಯುತಿ ಚಂದ್ (ಅಥ್ಲೆಟಿಕ್ಸ್), ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ (ಬ್ಯಾಡ್ಮಿಂಟನ್), ಚಿರಾಗ್ ಚಂದ್ರಶೇಖರ್ ಶೆಟ್ಟಿ (ಬ್ಯಾಡ್ಮಿಂಟನ್), ವಿಶೇಷ್ ಭೃಗುವಂಶಿ (ಬ್ಯಾಸ್ಕೆಟ್‌ಬಾಲ್), ಮನೀಶ್ ಕೌಶಿಕ್ (ಬಾಕ್ಸಿಂಗ್), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್), ಇಶಾಂತ್ ಶರ್ಮಾ (ಕ್ರಿಕೆಟ್ ), ದೀಪ್ತಿ ಶರ್ಮಾ (ಕ್ರಿಕೆಟ್), ಸಾವಂತ್ ಅಜಯ್ ಅನಂತ್ (ಈಕ್ವೆಸ್ಟ್ರಿಯನ್), ಸಂದೇಶ್ ಜಿಂಗನ್ (ಫುಟ್‌ಬಾಲ್), ಅದಿತಿ ಅಶೋಕ್ (ಗಾಲ್ಫ್), ಆಕಾಶದೀಪ್ ಸಿಂಗ್ (ಹಾಕಿ), ದೀಪಿಕಾ (ಹಾಕಿ), ದೀಪಕ್ (ಕಬಡ್ಡಿ), ಕಾಳೆ ಸಾರಿಕಾ ಸುಧಾಕರ್ (ಖೋ ಖೋ) ,ದತ್ತು ಬಬನ್ ಭೋಕನಲ್ (ರೋಯಿಂಗ್), ಮನು ಭಾಕರ್ (ಶೂಟಿಂಗ್), ಸೌರಭ್ ಚೌಧರಿ (ಶೂಟಿಂಗ್), ಮಧುರಿಕಾ ಪಾಟ್ಕರ್ (ಟೇಬಲ್ ಟೆನಿಸ್), ದಿವಿಜ್ ಶರಣ್ (ಟೆನಿಸ್), ಶಿವ ಕೇಶವನ್ (ಚಳಿಗಾಲದ ಕ್ರೀಡೆ), ದಿವ್ಯಾ ಕಕ್ರನ್ (ಕುಸ್ತಿ), ರಾಹುಲ್ ಅವೇರ್ ( ಕುಸ್ತಿ), ಸುಯಶ್ ನಾರಾಯಣ ಜಾಧವ್ (ಪ್ಯಾರಾ-ಈಜು), ಸಂದೀಪ್ (ಪ್ಯಾರಾ-ಅಥ್ಲೆಟಿಕ್ಸ್), ಮನೀಶ್ ನರ್ವಾಲ್ (ಪ್ಯಾರಾ ಶೂಟಿಂಗ್).

ದ್ರೋಣಾಚಾರ್ಯ ಪ್ರಶಸ್ತಿ: (ಜೀವನ ಶ್ರೇಷ್ಠ ಸಾಧನೆ ವಿಭಾಗ): ಧರ್ಮೇಂದ್ರ ತಿವಾರಿ (ಆರ್ಚರಿ), ಪುರುಷೋತ್ತಮ ರೈ (ಅಥ್ಲೆಟಿಕ್ಸ್), ಶಿವ ಸಿಂಗ್ (ಬಾಕ್ಸಿಂಗ್), ರೋಮೇಶ್ ಪಠಾನಿಯಾ (ಹಾಕಿ), ಕ್ರಿಶನ್ ಕುಮಾರ್ ಹೂಡಾ (ಕಬಡ್ಡಿ), ವಿಜಯ್ ಭಾಲಚಂದ್ರ ಮುನೀಶ್ವರ್ (ಪ್ಯಾರಾ ಪವರ್‌ಲಿಫ್ಟಿಂಗ್), ನರೇಶ್ ಕುಮಾರ್ (ಟೆನಿಸ್), ಓಂ ಪ್ರಕಾಶ್ ದಹಿಯಾ (ಕುಸ್ತಿ).

ದ್ರೋಣಾಚಾರ್ಯ: (ಸಾಮಾನ್ಯ ವಿಭಾಗ): ಜೂಡ್ ಫೆಲಿಕ್ಸ್ (ಹಾಕಿ), ಯೋಗೇಶ್ ಮಾಳವಿಯಾ (ಮಲ್ಲಕಂಬ), ಜಸ್ಪಾಲ್ ರಾಣಾ (ಶೂಟಿಂಗ್), ಕುಲದೀಪ್ ಕುಮಾರ್ ಹ್ಯಾಂಡೂ (ವುಶು), ಗೌರವ್ ಖನ್ನಾ (ಪ್ಯಾರಾ ಬ್ಯಾಡ್ಮಿಂಟನ್).

ಧ್ಯಾನ್‌ಚಂದ್ ಪ್ರಶಸ್ತಿ: ಕುಲದೀಪ್ ಸಿಂಗ್ ಭುಲ್ಲರ್ (ಅಥ್ಲೆಟಿಕ್ಸ್), ಜಿನ್ಸಿ ಫಿಲಿಪ್ಸ್ (ಅಥ್ಲೆಟಿಕ್ಸ್), ಪ್ರದೀಪ್ ಶ್ರೀಕೃಷ್ಣ ಗಂಧೆ (ಬ್ಯಾಡ್ಮಿಂಟನ್), ತೃಪ್ತಿ ಮುರ್ಗುಂಡೆ (ಬ್ಯಾಡ್ಮಿಂಟನ್), ಎನ್ ಉಷಾ (ಬಾಕ್ಸಿಂಗ್), ಲಾಖಾ ಸಿಂಗ್ (ಬಾಕ್ಸಿಂಗ್), ಸುಖವಿಂದರ್ ಸಿಂಗ್ ಸಂಧು (ಫುಟ್‌ಬಾಲ್), ಅಜಿತ್ ಸಿಂಗ್ (ಹಾಕಿ), ಮನ್‌ಪ್ರೀತ್ ಸಿಂಗ್ (ಕಬಡ್ಡಿ), ಜೆ ರಂಜಿತ್ ಕುಮಾರ್ (ಪ್ಯಾರಾ-ಅಥ್ಲೆಟಿಕ್ಸ್), ಸತ್ಯಪ್ರಕಾಶ್ ತಿವಾರಿ (ಪ್ಯಾರಾ ಬ್ಯಾಡ್ಮಿಂಟನ್), ಮಂಜೀತ್ ಸಿಂಗ್ (ರೋಯಿಂಗ್), ದಿವಂಗತ ಶ್ರೀ ಸಚಿನ್ ನಾಗ್ (ಈಜು), ನಂದನ್ ಬಾಲ್ (ಟೆನಿಸ್), ನೆಟರ್‌ಪಾಲ್ ಹೂಡಾ ( ಕುಸ್ತಿ).

ಇದನ್ನೂ ಓದಿ: ಕ್ರೀಡೆಯಲ್ಲಿ ಸೋಲಿಲ್ಲದವರ್ಯಾರು ಇಲ್ಲ: ಕೊಹ್ಲಿ ಪಡೆಯ ಬೆನ್ನಿಗೆ ನಿಲ್ಲುವಂತೆ ಭಾರತೀಯರಿಗೆ ಪೀಟರ್ಸನ್​ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.