ETV Bharat / sports

ಭಾರತೀಯ ಕ್ರೀಡಾ ಪ್ರಾಧಿಕಾರದಿಂದ ಪಿಎಂ-ಕೇರ್ಸ್ ನಿಧಿಗೆ 76 ಲಕ್ಷ ರೂ. ದೇಣಿಗೆ - ಕ್ರೀಡಾ ಸಚಿವ ಕಿರೆನ್​ ರೆಜಿಜು

ಕೋವಿಡ್​-19 ವಿರುದ್ಧ ಹೋರಾಡಲು ಭಾರತೀಯರೆಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಶನಿವಾರ ಪಿಎಂ-ಕೇರ್ಸ್​ ಪರಿಹಾರ ನಿಧಿ ಘೋಷಣೆ ಮಾಡಿದ್ದರು. ಈ ನಿಧಿಗೆ ಜನ ಸಾಮಾನ್ಯರು, ಗಣ್ಯರು, ಕ್ರೀಡಾಪಟುಗಳು, ಸಂಘ-ಸಂಸ್ಥೆಗಳು ಸೇರಿದಂತೆ ವಿವಿಧೆಡೆಯಿಂದ ಸಹಾಯದ ಮಹಾಪೂರ ಹರಿದು ಬರುತ್ತಿದೆ.

Rs 76 lakh for PM-CARES Fund
Rs 76 lakh for PM-CARES Fund
author img

By

Published : Mar 31, 2020, 1:05 PM IST

Updated : Mar 31, 2020, 1:11 PM IST

ನವದೆಹಲಿ: ಭಾರತೀಯ ಕ್ರೀಡಾ ಪ್ರಾಧಿಕಾರವು ಪ್ರಧಾನ ಮಂತ್ರಿ ಕೋವಿಡ್​ ಪರಿಹಾರ ನಿಧಿಗೆ 76 ಲಕ್ಷ ರೂಪಾಯಿ ದೇಣಿಗೆ ನೀಡಿದೆ. ಕ್ರೀಡಾ ಪ್ರಾಧಿಕಾರದ ಸಿಬ್ಬಂದಿಯು ತಮ್ಮ ವೇತನದ ಪಾಲು ನೀಡುವ ಮೂಲಕ ಈ ಮೊತ್ತ ಸಂಗ್ರಹಿಸಿದ್ದಾರೆ.

  • I feel honoured to share that employees of Sports Authority of India have come forward to donate 3 days salary of Group A, 2 days of group B & 1 day of all other employees to #PMCARES fund to fight coronavirus. The total amount is 76 lakhs.#IndiaFightsCorona pic.twitter.com/amqYnlO1Fs

    — Kiren Rijiju (@KirenRijiju) March 30, 2020 " class="align-text-top noRightClick twitterSection" data=" ">

76 ಲಕ್ಷ ರೂಪಾಯಿ ಡೆಬಿಟ್​ ಅಗಿರುವುದನ್ನು ತೋರಿಸುವ ಬ್ಯಾಂಕ್​ ಪಾಸ್​ಬುಕ್​ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳುವ ಮೂಲಕ ಕ್ರೀಡಾ ಸಚಿವ ಕಿರೆನ್​ ರಿಜಿಜು ದೇಣಿಗೆ ಸಂದಾಯವಾಗಿರುವುದನ್ನು ಖಚಿತಪಡಿಸಿದ್ದಾರೆ.

"ಭಾರತೀಯ ಕ್ರೀಡಾ ಪ್ರಾಧಿಕಾರದ ಗ್ರೂಪ್​ ಎ ನೌಕರರು ತಮ್ಮ 3 ದಿನಗಳ ವೇತನ, ಗ್ರೂಪ್​ ಬಿ ನೌಕರರು 2 ದಿನಗಳ ವೇತನ ಹಾಗೂ ಇತರ ಎಲ್ಲ ಸಿಬ್ಬಂದಿ 1 ದಿನದ ವೇತನವನ್ನು ಪ್ರಧಾನ ಮಂತ್ರಿಗಳ PMCARES ನಿಧಿಗೆ ನೀಡಿದ್ದು ಹೆಮ್ಮೆಯ ವಿಷಯವಾಗಿದೆ." ಎಂದು ರಿಜಿಜು ಟ್ವಿಟರ್​ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ 'ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ ನಿಧಿ (ಪಿಎಂ-ಕೇರ್ಸ್ ನಿಧಿ)' ಘೋಷಣೆ ಮಾಡಿ, ದೇಶದ ನಾಗರಿಕರೆಲ್ಲೂ ಕೋವಿಡ್​ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದ್ದರು.

ಪ್ರಧಾನಿಗಳ ಕರೆಗೆ ಓಗೊಟ್ಟು ಈಗಾಗಲೇ ಹಲವಾರು ಕ್ರೀಡಾಪಟುಗಳು ಈ ನಿಧಿಗೆ ದೇಣಿಗೆ ನೀಡಿದ್ದಾರೆ. ಕ್ರಿಕೆಟರ್ ಸುರೇಶ ರೈನಾ ಪಿಎಂ-ಕೇರ್ಸ್​ ನಿಧಿಗೆ 31 ಲಕ್ಷ ರೂ. ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿಗಳ ವಿಪತ್ತು ನಿಧಿಗೆ 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಹಾಗೆಯೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಹ ಪಿಎಂ-ಕೇರ್ಸ್​ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳ ವಿಪತ್ತು ನಿಧಿಗೆ ತಲಾ 25 ಲಕ್ಷ ರೂ. ಸಂದಾಯ ಮಾಡಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕ್ರೀಡಾಪಟುಗಳಾದ ಹಿಮಾ ದಾಸ್, ಪಿವಿ ಸಿಂಧು, ಬಜರಂಗ್​ ಪೂನಿಯಾ ಸಹ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.

Last Updated : Mar 31, 2020, 1:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.