ಭುವನೇಶ್ವರ (ಒಡಿಶಾ) : ಹಾಕಿ ವಿಶ್ವಕಪ್ 2023ರ ಟೂರ್ನಿ ಜನವರಿ 13 ರಿಂದ 29 ರವರೆಗೆ ಒಡಿಶಾದ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಪ್ರಾರಂಭವಾಗಲಿದೆ. ಅತಿ ದೊಡ್ಡ ಹಾಕಿ ಕದನದಲ್ಲಿ ವಿಶ್ವದ 16 ದೇಶಗಳು ವಿಶ್ವ ಚಾಂಪಿಯನ್ ಪಟ್ಟ ಗಿಟ್ಟಿಸಲು ಪೈಪೋಟಿ ನಡೆಸಲಿವೆ. ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳನ್ನು ನಾಲ್ಕು ಗುಂಪುಗಳಾಗಿ(ಪೂಲ್) ವಿಂಗಡಿಸಲಾಗಿದೆ. ಪೂಲ್ ಎ ಯಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಫ್ರಾನ್ಸ್, ಅರ್ಜೆಂಟೀನಾ ತಂಡಗಳಿವೆ. ಪೂಲ್ ಬಿ ಯಲ್ಲಿ ಬೆಲ್ಜಿಯಂ, ಜಪಾನ್, ಕೊರಿಯಾ, ಜರ್ಮನಿ ಇವೆ. ಪೂಲ್ ಸಿ ಯಲ್ಲಿ ನೆದರ್ಲ್ಯಾಂಡ್ಸ್, ಚಿಲಿ, ಮಲೇಷ್ಯಾ, ನ್ಯೂಜಿಲೆಂಡ್ ಇರಲಿದೆ. ಪೂಲ್ ಡಿ ಯಲ್ಲಿ ಭಾರತ, ವೇಲ್ಸ್, ಸ್ಪೇನ್, ಇಂಗ್ಲೆಂಡ್ ತಂಡಗಳಿವೆ.
-
The final team of Pool A, France has arrived in Bhubaneswar and are raring to compete in the FIH Odisha Hockey Men's World Cup 2023 Bhubaneswar-Rourkela.#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @Media_SAI @IndiaSports @FIH_Hockey pic.twitter.com/4bo8A2Ixae
— Hockey India (@TheHockeyIndia) January 8, 2023 " class="align-text-top noRightClick twitterSection" data="
">The final team of Pool A, France has arrived in Bhubaneswar and are raring to compete in the FIH Odisha Hockey Men's World Cup 2023 Bhubaneswar-Rourkela.#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @Media_SAI @IndiaSports @FIH_Hockey pic.twitter.com/4bo8A2Ixae
— Hockey India (@TheHockeyIndia) January 8, 2023The final team of Pool A, France has arrived in Bhubaneswar and are raring to compete in the FIH Odisha Hockey Men's World Cup 2023 Bhubaneswar-Rourkela.#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @Media_SAI @IndiaSports @FIH_Hockey pic.twitter.com/4bo8A2Ixae
— Hockey India (@TheHockeyIndia) January 8, 2023
ವಿಶ್ವಕಪ್ ಕ್ರೀಡಾಕೂಟಕ್ಕಾಗಿ ಫ್ರಾನ್ಸ್, ಸ್ಪೇನ್ ಮತ್ತು ಕೊರಿಯಾ ತಂಡಗಳು ಭಾನುವಾರ ಒಡಿಶಾ ತಲುಪಿವೆ. ಭುವನೇಶ್ವರದ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರೀಡಾಳುಗಳಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಬೆಲ್ಜಿಯಂ, ಜಪಾನ್ ಮತ್ತು ಜರ್ಮನಿಯೊಂದಿಗೆ ಕೊರಿಯಾ ಪೂಲ್ ಬಿ ಯಲ್ಲಿವೆ. ಕೊರಿಯಾ-ಬೆಲ್ಜಿಯಂ ನಡುವಿನ ಮೊದಲ ಪಂದ್ಯ ಜನವರಿ 14 ರಂದು ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿದೆ. ಜನವರಿ 17 ರಂದು ಜಪಾನ್ ವಿರುದ್ಧ ಎರಡನೇ ಪಂದ್ಯ ಮತ್ತು ಜನವರಿ 20 ರಂದು ಜರ್ಮನಿ ವಿರುದ್ಧ ಮೂರನೇ ಪಂದ್ಯ ರೂರ್ಕೆಲಾದಲ್ಲಿ ನಿಗದಿಯಾಗಿದೆ.
-
The Spanish Hockey team was warmly welcomed in Rourkela and expressed excitement about competing in the FIH Odisha Hockey Men's World Cup 2023, Bhubaneswar-Rourkela. pic.twitter.com/F9iqE43Mtu
— Hockey India (@TheHockeyIndia) January 8, 2023 " class="align-text-top noRightClick twitterSection" data="
">The Spanish Hockey team was warmly welcomed in Rourkela and expressed excitement about competing in the FIH Odisha Hockey Men's World Cup 2023, Bhubaneswar-Rourkela. pic.twitter.com/F9iqE43Mtu
— Hockey India (@TheHockeyIndia) January 8, 2023The Spanish Hockey team was warmly welcomed in Rourkela and expressed excitement about competing in the FIH Odisha Hockey Men's World Cup 2023, Bhubaneswar-Rourkela. pic.twitter.com/F9iqE43Mtu
— Hockey India (@TheHockeyIndia) January 8, 2023
ಫ್ರಾನ್ಸ್ ತಂಡ ಆಸ್ಟ್ರೇಲಿಯ, ಅರ್ಜೆಂಟೀನಾ ಮತ್ತು ದಕ್ಷಿಣ ಆಫ್ರಿಕಾದೊಂದಿಗೆ ಪೂಲ್ ಎ ನಲ್ಲಿದೆ. ಜನವರಿ 13ರಂದು ಭುವನೇಶ್ವರದಲ್ಲಿ ಫ್ರಾನ್ಸ್‌ನ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ. ಫ್ರಾನ್ಸ್ ನಾಯಕ ವಿಕ್ಟರ್ ಚಾರ್ಲೋಟ್ ಮಾಧ್ಯಮಗಳೊಂದಿಗೆ ಮಾತನಾಡಿ, ಹಾಕಿ ವಿಶ್ವಕಪ್ ಗೆಲ್ಲುವುದು ನಮ್ಮ ಗುರಿ. ಆಕ್ರಮಣಕಾರಿ ಆಟವನ್ನು ನಾವು ಎದುರು ನೋಡುತ್ತಿದ್ದೇವೆ ಎಂದರು. ಜನವರಿ 13 ರಂದು ರೂರ್ಕೆಲಾದಲ್ಲಿ ಆತಿಥೇಯ ಭಾರತದ ವಿರುದ್ಧ ಸ್ಪೇನ್ ತನ್ನ ಅಭಿಯಾನ ಪ್ರಾರಂಭಿಸಲಿದೆ. ನಾಯಕ ಅಲ್ವಾರೊ ಇಗ್ಲೇಷಿಯಸ್ ಮಾತನಾಡಿ, ವಿಶ್ವದ ಯಾವುದೇ ಎದುರಾಳಿ ತಂಡಕ್ಕೆ ಇದು ರೋಚಕ ಸವಾಲು ಎಂದು ಹೇಳಿದ್ದಾರೆ.
-
The Korean Hockey team has landed in Bhubaneswar to compete in the FIH Odisha Hockey Men's World Cup 2023 Bhubaneswar-Rourkela.#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @Media_SAI @IndiaSports pic.twitter.com/gcQgLmP470
— Hockey India (@TheHockeyIndia) January 8, 2023 " class="align-text-top noRightClick twitterSection" data="
">The Korean Hockey team has landed in Bhubaneswar to compete in the FIH Odisha Hockey Men's World Cup 2023 Bhubaneswar-Rourkela.#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @Media_SAI @IndiaSports pic.twitter.com/gcQgLmP470
— Hockey India (@TheHockeyIndia) January 8, 2023The Korean Hockey team has landed in Bhubaneswar to compete in the FIH Odisha Hockey Men's World Cup 2023 Bhubaneswar-Rourkela.#HockeyIndia #IndiaKaGame #HWC2023 #StarsBecomeLegends @CMO_Odisha @sports_odisha @Media_SAI @IndiaSports pic.twitter.com/gcQgLmP470
— Hockey India (@TheHockeyIndia) January 8, 2023
50 ದಿನಗಳಿಗೂ ಮುನ್ನ ಟಿಕೆಟ್ ಬುಕ್ಕಿಂಗ್ ಆರಂಭ: ಹಾಕಿ ವಿಶ್ವಕಪ್ 2023 ಪಂದ್ಯಗಳಿಗೆ ಟಿಕೆಟ್ ಮಾರಾಟ ಆರಂಭವಾಗಿದೆ. ಆನ್‌ಲೈನ್ ಬುಕ್ಕಿಂಗ್ ಅನ್ನು 24 ನವೆಂಬರ್ 2022 ರಂದು ಮಧ್ಯಾಹ್ನ 1 ಗಂಟೆಯಿಂದಲೇ ಆರಂಭಿಸಲಾಗಿದೆ 50 ದಿನಗಳೊಳಗೆ ಪ್ರೇಕ್ಷಕರು ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: Indian Hockey History: ಹಿಟ್ಲರ್ ಎದುರೇ ಜರ್ಮನಿಯನ್ನು ಬಗ್ಗುಬಡಿದಿದ್ದ ಭಾರತ