ಬ್ಯಾಂಕಾಕ್: ಎರಡು ಬಾರಿ ಒಲಿಂಪಿಕ್ ವಿಜೇತೆ ಪಿವಿ ಸಿಂಧು ಥಾಯ್ಲೆಂಡ್ ಓಪನ್ ಸೆಮಿಫೈನಲ್ನಲ್ಲಿ ಸೋಲು ಕಂಡಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್ನ ಅಕಾನೆ ಯಮಗುಚಿ ಅವರನ್ನ ಸೋಲಿಸಿ ಸೆಮೀಸ್ಗೆ ಲಗ್ಗೆ ಹಾಕಿದ್ದ ಸ್ಟಾರ್ ಆಟಗಾರ್ತಿ ಸಿಂಧು, ಇಂದು ನಡೆದ ಪಂದ್ಯದಲ್ಲಿ 17-21,16-21 ಪಾಯಿಂಟ್ ಅಂತರದಿಂದ ಸೋಲು ಕಂಡಿದ್ದು, ಕೇವಲ 43 ನಿಮಿಷಗಳಲ್ಲಿ ಪಂದ್ಯ ಮುಕ್ತಾಯವಾಗಿದೆ.
-
💔
— BAI Media (@BAI_Media) May 21, 2022 " class="align-text-top noRightClick twitterSection" data="
Despite a good fight @Pvsindhu1 goes down against Tokyo Olympic Champion 🇨🇳's Chen Yu Fei 17-21, 16-21 in the semifinals of #ThailandOpen2022.#BWFWorldTour#Badminton pic.twitter.com/7EjhTNKyrJ
">💔
— BAI Media (@BAI_Media) May 21, 2022
Despite a good fight @Pvsindhu1 goes down against Tokyo Olympic Champion 🇨🇳's Chen Yu Fei 17-21, 16-21 in the semifinals of #ThailandOpen2022.#BWFWorldTour#Badminton pic.twitter.com/7EjhTNKyrJ💔
— BAI Media (@BAI_Media) May 21, 2022
Despite a good fight @Pvsindhu1 goes down against Tokyo Olympic Champion 🇨🇳's Chen Yu Fei 17-21, 16-21 in the semifinals of #ThailandOpen2022.#BWFWorldTour#Badminton pic.twitter.com/7EjhTNKyrJ
ಚೀನಾ ಆಟಗಾರ್ತಿ ಚೆನ್ ಯು ಫೀ ವಿರುದ್ಧ ಆರಂಭದಲ್ಲಿ 6-4, 7-11 ಅಂತರದ ಮುನ್ನಡೆ ಪಡೆದುಕೊಂಡಿದ್ದ ಸಿಂಧು, ತದನಂತರ ಹಿನ್ನಡೆ ಅನುಭವಿಸಿ, ಸೋಲು ಕಾಣುವಂತಾಯಿತು. ಎರಡನೇ ಸೆಟ್ನಲ್ಲೂ ಹೈದರಾಬಾದ್ ಆಟಗಾರ್ತಿ ನಿರಾಸೆ ಅನುಭವಿಸಿದರು. ಈ ಆಟಗಾರ್ತಿ ವಿರುದ್ಧ 2019ರಲ್ಲಿ ನಡೆದ ಬಿಡಬ್ಲೂಎಫ್ ಫೈನಲ್ ಪಂದ್ಯದಲ್ಲೂ ಸಿಂಧು ಸೋಲು ಕಂಡಿದ್ದರು.
ಇದನ್ನೂ ಓದಿ: IPL ನಲ್ಲಿಂದು ಮುಂಬೈ - ಡೆಲ್ಲಿ ಫೈಟ್: ಆರ್ಸಿಬಿ ಪ್ಲೇ - ಆಫ್ ಕನಸು ನನಸಾಗುವುದೇ?
ಸಿಂದು ಇದೀಗ ಜಕಾರ್ತ್ನಲ್ಲಿ ಜೂನ್ 7ರಿಂದ ಆರಂಭಗೊಳ್ಳಲಿರುವ ಇಂಡೋನೆಷ್ಯಾ ಮಾಸ್ಟರ್ ಸೂಪರ್ 500 ಟೂರ್ನಿಯಲ್ಲಿ ಭಾಗಿಯಾಗಲಿದ್ದಾರೆ. ಕಳೆದ ವರ್ಷ ನಡೆದ ರಿಯೋ ಒಲಿಂಪಿಕ್ನಲ್ಲಿ ಸಿಂಧು, ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.