ETV Bharat / sports

ಪಿವಿ ಸಿಂಧು ತೊರೆದ ಕೋಚ್​​​​ ಪಾರ್ಕ್ ಟೇ ಸಾಂಗ್ : ಹಫೀಜ್ ಹಾಶಿಮ್​​ರಿಂದ ತರಬೇತಿ

ಪಾರ್ಕ್ ಟೇ ಸಾಂಗ್ ಕೋಚಿಂಗ್​ ತೊರೆದ​ ಪಿವಿ ಸಿಂಧು - ನೂತನ ಕೋಚ್​ ಆಗಿ ಹಫೀಜ್ ಹಾಶಿಮ್ ನೇಮಕ - ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಸಿಂಧು

shuttler PV Sindhu parts ways with coach Park Tae-Sang
ಪಾರ್ಕ್ ಟೇ ಸಾಂಗ್ ಕೋಚಿಂಗ್​ ತೊರೆದ​ ಪಿವಿ ಸಿಂಧು
author img

By

Published : Feb 25, 2023, 8:44 AM IST

ನವದೆಹಲಿ: ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಂದರ್ಭದಲ್ಲಿ ಪಿವಿ ಸಿಂಧು ಅವರಿಗೆ ಕೋಚ್​ ಆಗಿದ್ದ ಕೊರಿಯಾದ ಪಾರ್ಕ್ ಟೇ-ಸಾಂಗ್, ತಮ್ಮ ದೇಶಕ್ಕೆ ಮರಳಿ ಹೋಗುತ್ತಿರುವುದರಿಂದ ಸಿಂಧು ಅವರಿಂದ ದೂರವಾಗುತ್ತಿದ್ದೇನೆ ಎಂದು ತಿಳಿಸಿದ್ದಾರೆ. 2024ರ ಪ್ಯಾರಿಸ್​ ಒಲಂಪಿಕ್​ಗೆ ಸಿಂಧುಗೆ ಕೋಚಿಂಗ್​ ಮಾಡಲಾಗುತ್ತಿಲ್ಲ ಎಂದಿದ್ದಾರೆ.

ಸಿಂಧು ಇನ್ನು ಹೈದರಾಬಾದ್‌ನ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಮಲೇಷ್ಯಾದ ಮುಹಮ್ಮದ್ ಹಫೀಜ್ ಹಶೀಮ್ ಅವರೊಂದಿಗೆ ತರಬೇತಿ ಪಡೆಯಲಿದ್ದಾರೆ. 2003 ರಲ್ಲಿ ಆಲ್ ಇಂಗ್ಲೆಂಡ್ ಪ್ರಶಸ್ತಿಯನ್ನು ಗೆದ್ದಿದ್ದ ಹಫೀಜ್, ಹೈದರಾಬಾದ್ ಮೂಲದ ಅಕಾಡೆಮಿಯೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಮತ್ತು ಅಲ್ಲಿ ಪುರುಷ ಮತ್ತು ಮಹಿಳಾ ಆಟಗಾರರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಆರಂಭದಲ್ಲಿ ಸುಚಿತ್ರಾ ಬ್ಯಾಡ್ಮಿಂಟನ್ ಅಕಾಡೆಮಿಯಿಂದ ಸಿಂಧು ಅವರು ತರಬೇತಿ ಪಡೆದಿದ್ದು, ವಾರದಲ್ಲಿ ಒಂದು ಅಥವಾ ಎರಡು ದಿನ ಅಲ್ಲಿ ಅಭ್ಯಾಸ ಮಾಡಲಿದ್ದಾರೆ.

ಕಳೆದ ವರ್ಷ ಸಿಂಧು ಅವರು ಸೈಯದ್ ಮೋದಿ ಇಂಟರ್‌ನ್ಯಾಷನಲ್, ಸ್ವಿಸ್ ಓಪನ್ ಮತ್ತು ಸಿಂಗಾಪುರ್ ಓಪನ್ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಅಲ್ಲದೇ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ ಸಿಂಗಲ್ಸ್ ಚಿನ್ನವನ್ನು ಗೆದ್ದರು, ಇದು ಅವರ ಮೊದಲ CWG ಪ್ರಶಸ್ತಿಯಾಗಿದೆ. ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್​ನ ಪ್ರಕಾರ ಪಿವಿ ಸಿಂಧು ಅವರ ಅತ್ಯುತ್ತಮ ವರ್ಲ್ಡ್ ಟೂರ್ ಸೀಸನ್ ಕಳೆದ ವರ್ಷದ್ದಾಗಿತ್ತು. ಆಗಸ್ಟ್‌ನಲ್ಲಿ ಸಿಂಧು ಅವರ ಎಡ ಪಾದದಲ್ಲಿ ಉಳುಕಿಗೆ ಕಾರಣವಾಗಿತ್ತು. ಇದರಿಂದ 5 ತಿಂಗಳ ಕಾಲ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಪ್ರಸ್ತುತ ಮಹಿಳಾ ಸಿಂಗಲ್ಸ್ ಆಟಗಾರರ ವಿಶ್ವ ರ್‍ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಮಾರ್ಚ್ 14 ರಿಂದ 19 ರವರೆಗೆ ನಡೆಯಲಿರುವ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಸಿದ್ಧರಾಗಲು ಸಿಂಧುಗೆ ಹಫೀಜ್ ಹಾಶಿಮ್ ಅವರಿಂದ ಕೋಚಿಂಗ್​ ಪಡೆಯಲಿದ್ದಾರೆ. ಈ ಬಗ್ಗೆ ಪಿವಿ ಸಿಂಧು ಯಾವುದೇ ರೀತಿ ಹೇಳಿಕೆ ನೀಡಿಲ್ಲ. ಪಾರ್ಕ್ ಟೇ-ಸಾಂಗ್ ಇನ್​ಸ್ಟಾಗ್ರಾಂನಲ್ಲಿ ತಮ್ಮ ನಿಲುವನ್ನು ಹೇಳಿದ್ದಾರೆ. ಫಾರ್ಮ್‌ನಲ್ಲಿನ ಕುಸಿತ ಮತ್ತು ಬಿಡಬ್ಲ್ಯೂಎಫ್ ಶ್ರೇಯಾಂಕದ ಸಿಂಧು ಅವರ ಕಳಪೆ ಪ್ರದರ್ಶನದ ಕಾರಣ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ.

ಸಿಂಧು ಬದಲಾವಣೆ ಬಯಸಿದ್ದು, ಹೊಸ ಕೋಚ್ ಹುಡುಕಲು ನಿರ್ಧರಿಸಿದ್ದಾರೆ. ಅವರು ಇತ್ತೀಚಿನ ಎಲ್ಲಾ ಪಂದ್ಯಗಳಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ ಮತ್ತು ಕೋಚ್ ಆಗಿ ನಾನು ಸೋಲಿನ ಜವಾಬ್ದಾರಿ ವಹಿಸುತ್ತೇನೆ. ಕ್ಷಮಿಸಿ, ಮುಂದಿನ ಒಲಿಂಪಿಕ್ಸ್ ತನಕ ನಾನು ಅವಳೊಂದಿಗೆ ಇರಲು ಸಾಧ್ಯವಿಲ್ಲ, ಆದರೆ, ಈಗ ನಾನು ಅವಳನ್ನು ದೂರದಿಂದಲೇ ಬೆಂಬಲಿಸುತ್ತೇನೆ. ತನ್ನ ತಂದೆಯ ಅನಾರೋಗ್ಯದ ಕಾರಣ ತನ್ನ ಸ್ಥಳೀಯ ದಕ್ಷಿಣ ಕೊರಿಯಾಕ್ಕೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಕೆಲವು ದಿನಗಳ ಹಿಂದೆ ಹೈದರಾಬಾದ್‌ಗೆ ಮರಳಿದೆ. ನನ್ನ ತಂದೆಯ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಿಜ ಹೇಳಬೇಕೆಂದರೆ ನನ್ನ ತಂದೆಯ ಸ್ಥಿತಿ ಈಗ ಚೆನ್ನಾಗಿಲ್ಲ. ಅದಕ್ಕಾಗಿಯೇ ನಾನು ಭಾರತದಿಂದ ಹಿಂದಿರುಗುತ್ತಿದ್ದೇನೆ. ಆಕೆಯ (ಸಿಂಧು) ಜೊತೆಗಿನ ಪ್ರತಿ ಕ್ಷಣವನ್ನು ನೆನಪಿಸಿಕೊಳ್ಳುತ್ತೇನೆ. ನನಗೆ ಬೆಂಬಲ ಮತ್ತು ಪ್ರೋತ್ಸಾಹಿಸುವ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಪುಲ್ಲೇಲ ಗೋಪಿಚಂದ್ ಅಕಾಡೆಮಿಯಿಂದ ಹೊರಬಂದ ನಂತರ 2020 ರಲ್ಲಿ ಸಿಂಧು ಅವರ ಕೋಚ್ ಪಾರ್ಕ್ ನೇಮಕವಾದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಮತ್ತು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನವನ್ನು ಗೆಲ್ಲಲು ಸಿಂಧು ಅವರಿಗೆ ಪಾರ್ಕ್‌ ಬೆನ್ನೆಲುಬಾಗಿ ನಿಂತಿದ್ದರು. ಅವರ ಗೆಲುವಿನ ಕೀರ್ತಿ ಪಾರ್ಕ್​ಗೂ ಸಲ್ಲುತ್ತದೆ.

ಇದನ್ನೂ ಓದಿ: "ನಾನು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ": ಪ್ಯಾರಿಸ್ ಒಲಿಂಪಿಕ್​​ಗೆ ಸಿಂಧು ಸಿದ್ಧತೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.