ETV Bharat / sports

ಇಂಡಿಯಾ ಓಪನ್​: ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದ ಸಿಂಧು

ಇಂಡಿಯಾ ಓಪನ್​​ನಲ್ಲಿ ಸುಲಭ ಗೆಲುವು ದಾಖಲು ಮಾಡಿರುವ ಪಿ.ವಿ.ಸಿಂಧು ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದಾರೆ. ಇಂದು ನಡೆದ ಕ್ವಾರ್ಟರ್​ಫೈನಲ್​​ ಪಂದ್ಯದಲ್ಲಿ ಎದುರಾಳಿ ವಿರುದ್ಧ ಅವರು ಭರ್ಜರಿ ಗೆಲುವು ದಾಖಲಿಸಿದರು.

Shuttler PV Sindhu
Shuttler PV Sindhu
author img

By

Published : Jan 14, 2022, 5:22 PM IST

ನವದೆಹಲಿ: ಭಾರತದ ಎರಡು ಬಾರಿಯ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ.ಸಿಂಧು ಇಂಡಿಯಾ ಓಪನ್​​​ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಇಂದು ನಡೆದ ಕ್ವಾರ್ಟರ್​​ ಫೈನಲ್​ ಪಂದ್ಯದಲ್ಲಿ ಭಾರತದ ಅಸ್ಮಿತಾ ಚಲಿಹಾ ವಿರುದ್ಧ 21-7, 21-18 ಸೆಟ್‌ಗಳಿಂದ ಗೆಲುವು ದಾಖಲು ಮಾಡಿ ಸೆಮಿಫೈನಲ್‌ಗೆ ಎಂಟ್ರಿ ಪಡೆದರು.

ಬಿಡಬ್ಲ್ಯುಎಫ್ ಋತುವಿನ ಮೊದಲ ಟೂರ್ನಿಯಾದ ಇಂಡಿಯಾ ಓಪನ್‌ನಲ್ಲಿ ಮಾಜಿ ವಿಶ್ವಚಾಂಪಿಯನ್​ ಪಿ.ವಿ.ಸಿಂಧು ಭಾರತದ ಸಹ ಶಟ್ಲರ್​ ಇರಾ ಶರ್ಮಾ ವಿರುದ್ಧ 21-0, 21-10 ಗೇಮ್​ಗಳ ಅಂತರದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದರು. ಆಶ್ಮಿತಾ ತಮ್ಮ 2ನೇ ಸುತ್ತಿನ ಪಂದ್ಯದಲ್ಲಿ ಫ್ರಾನ್ಸ್​ನ ಯೆಲ್ಲೆ ಹೊಯಾಕ್ಸ್ ವಿರುದ್ಧ 21-17, 21-14ರ ಅಂತರದಲ್ಲಿ ಗೆಲುವು ಸಾಧಿಸಿ 8ರ ಘಟ್ಟಕ್ಕೆ ಅರ್ಹತೆ ಪಡೆದಿದ್ದರು.

ಇನ್ನು ಭಾರತದ ಯುವ ತಾರೆ ಲಕ್ಷ್ಯ ಸೇನ್ ಕೂಡ ಸ್ಟಾರ್ ಆಟಗಾರ ಎಚ್.ಎಸ್.ಪ್ರಣೋಯ್ ಅವರನ್ನು ಸೋಲಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.