ETV Bharat / sports

ದುಬೈ ಪ್ಯಾರಾ-ಬ್ಯಾಡ್ಮಿಂಟನ್ ಟೂರ್ನಿ: ಪ್ರಮೋದ್‌ಗೆ ಡಬಲ್​​ ಧಮಾಕ, ಅಗ್ರಸ್ಥಾನದಲ್ಲಿ ಭಾರತ - ವಿಶ್ವ ಚಾಂಪಿಯನ್ ಪ್ರಮೋದ್ ಭಗತ್ ದುಬೈ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್ 2021

ದುಬೈ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್‌ ನ್ಯಾಷನಲ್ ಟೂರ್ನಿಯಲ್ಲಿ ಭಾರತ 4 ಚಿನ್ನ, 6 ಬೆಳ್ಳಿ ಮತ್ತು 10 ಕಂಚಿನ ಪದಕಗಳೊಂದಿಗೆ 20 ಪದಕ ಪಡೆದು ಅಗ್ರಸ್ಥಾನದಲ್ಲಿದೆ.

Shuttler Pramod Bhagat wins 2 gold, India finish on top with 20 medals
ಪ್ರಮೋದ್ ಭಗತ್
author img

By

Published : Apr 5, 2021, 1:04 PM IST

ದುಬೈ: ವಿಶ್ವ ಚಾಂಪಿಯನ್ ಪ್ರಮೋದ್ ಭಗತ್ ದುಬೈ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್‌ ನ್ಯಾಷನಲ್ ಟೂರ್ನಿಯಲ್ಲಿ ಸಿಂಗಲ್ಸ್​ ಹಾಗೂ ಡಬಲ್ಸ್​ಗಳಲ್ಲಿ ಚಿನ್ನದ ಪದಕದ ಸಾಧನೆ ಮಾಡಿದ್ದಾರೆ.

ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಪ್ರಮೋದ್ ಭಗತ್ 21-17, 21-18 ರಿಂದ ಭಾರತದವರೇ ಆದ ನಿತೀಶ್​ ಕುಮಾರ್​ ಅವರನ್ನು ಮಣಿಸಿ ಚಿನ್ನಕ್ಕೆ ಕೊರಳೊಡ್ಡಿದರು.

ಡಬಲ್ಸ್​ ವಿಭಾಗದಲ್ಲಿ ಮನೋಜ್​ ಸರ್ಕಾರ್​ ಜೊತೆಗೂಡಿ 21-18, 21-16 ರಿಂದ ಭಾರತದ ಸುಕಾಂತ್​ ಕದಂ-ನಿತೀಶ್​ ಕುಮಾರ್​ ಜೋಡಿಯನ್ನು ಸೋಲಿಸಿ ಚಿನ್ನ ಗೆದ್ದರು.

ಮಿಶ್ರ ಡಬಲ್ಸ್​ ವಿಭಾಗದಲ್ಲೂ ಪಲಕ್​ ಕೊಹ್ಲಿ ಜೊತೆಗೂಡಿದ ಪ್ರಮೋದ್​ ಕಂಚಿನ ಪದಕ ಪಡೆದುಕೊಂಡರು.

ಇದನ್ನೂ ಓದಿ : ಕೊರೊನಾ ಎಫೆಕ್ಟ್​​ : ಫ್ರೆಂಚ್ ಓಪನ್ ಟೆನ್ನಿಸ್‌ ಮುಂದೂಡುವ ಸಾಧ್ಯತೆ

ಈ ಟೂರ್ನಿಯಲ್ಲಿ ಭಾರತ 4 ಚಿನ್ನ, 6 ಬೆಳ್ಳಿ ಮತ್ತು 10 ಕಂಚಿನ ಪದಕಗಳೊಂದಿಗೆ 20 ಪದಕ ಪಡೆದು ಅಗ್ರಸ್ಥಾನದಲ್ಲಿದೆ. 8 ಪದಕ ಗೆದ್ದಿರುವ ಫ್ರಾನ್ಸ್ ಎರಡನೇ ಸ್ಥಾನದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.