ನವದೆಹಲಿ: ಭಾರತದ ಅಂಗದ್ ವೀರ್ಸಿಂಗ್ ಬಜ್ವಾ ಮತ್ತು ಗನೆಮತ್ ಶೆಖೋನ್ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನ ಮಿಶ್ರ ಸ್ಕೀಟ್ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತದ ಸ್ವರ್ಣ ಪದಕಗಳ ಸಂಖ್ಯೆಯನ್ನು 7ಕ್ಕೇರಿಸಿದ್ದಾರೆ.
ಮಂಗಳವಾರ ಈ ಜೋಡಿ ಕಜಾಕಿಸ್ತಾನದ ಓಲ್ಗಾ ಪನರಿನಾ ಮತ್ತು ಅಲೆಕ್ಸಾಂಡರ್ ಯೆಶೆಂಕೊ ವಿರುದ್ಧ 33-29ರಲ್ಲಿ ಗೆಲ್ಲುವ ಮೂಲಕ ಭಾರತದ ಖಾತೆಗೆ ಮತ್ತೊಂದು ಚಿನ್ನದ ಪದಕ ಸೇರಿಸಿದರು.
ಈ ವಿಶ್ವಕಪ್ನಲ್ಲಿ ಗನೆಮತ್ ಶೆಕೋನ್ ಗೆದ್ದ ಮೂರನೇ ಪದಕ ಇದಾಗಿದೆ. ಅವರು ವುಮೆನ್ಸ್ ಸ್ಕೀಟ್ ವಿಭಾಗದಲ್ಲಿ ಕಂಚು ಮತ್ತು ವುಮೆನ್ಸ್ ತಂಡದ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದರು.
-
It’s another gold for India!
— SAIMedia (@Media_SAI) March 23, 2021 " class="align-text-top noRightClick twitterSection" data="
The Skeet Mixed Team of @angadvirbajwa and #GanematSekhon win 🥇 at the @ISSF_Shooting World Cup in Delhi after a 33-29 win over Kazakhstan. #Shooting #WorldCup pic.twitter.com/k72Jdd5vO4
">It’s another gold for India!
— SAIMedia (@Media_SAI) March 23, 2021
The Skeet Mixed Team of @angadvirbajwa and #GanematSekhon win 🥇 at the @ISSF_Shooting World Cup in Delhi after a 33-29 win over Kazakhstan. #Shooting #WorldCup pic.twitter.com/k72Jdd5vO4It’s another gold for India!
— SAIMedia (@Media_SAI) March 23, 2021
The Skeet Mixed Team of @angadvirbajwa and #GanematSekhon win 🥇 at the @ISSF_Shooting World Cup in Delhi after a 33-29 win over Kazakhstan. #Shooting #WorldCup pic.twitter.com/k72Jdd5vO4
ಆದರೆ ಮಿಕ್ಸಡ್ ಟೀಂ ಸ್ಕೀಟ್ ಸ್ಪರ್ಧೆಯಲ್ಲಿ ಭಾರತದ ಪರಿನಾಜ್ ಧಲಿವಾಲ್ ಮತ್ತು ಮೈರಾಜ್ ಅಹ್ಮದ್ ಖಾನ್ ಮಿಕ್ಸಡ್ ಸ್ಕೀಟ್ ವಿಭಾಗದಲ್ಲಿ 31-32ರಲ್ಲಿ ಕತಾರ್ನ ರಶೀದ್ ಹಮದ್ ಮತ್ತು ರೀಮಾ ಅಲ್ ಶಾರ್ಶಾನಿ ವಿರುದ್ಧ ಸೋಲು ಕಂಡು ಕಂಚಿನ ಪದಕದಿಂದ ವಂಚಿತರಾದರು.
ಭಾರತ ತಂಡ ಸೋಮವಾರ 3 ಚಿನ್ನದ ಪದಕ ಸೇರಿದಂತೆ 5 ಪದಕ ಗೆದ್ದಿದೆ. ಒಟ್ಟಾರೆ ಭಾರತ 7 ಚಿನ್ನ, 4 ಬೆಳ್ಳಿ ಮತ್ತು 4 ಕಂಚಿನ ಪದಕದೊಂದಿಗೆ ಒಟ್ಟು 15 ಪದಕಗಳನ್ನು ಪಡೆದು ಅಗ್ರಸ್ಥಾನದಲ್ಲಿದೆ.
ಇದನ್ನು ಓದಿ:ಐಎಸ್ಎಸ್ಎಫ್ ವಿಶ್ವಕಪ್: ಭಾರತದ ಪುರುಷರ ಸ್ಕೀಟ್ ತಂಡಕ್ಕೆ ಚಿನ್ನ, ಬೆಳ್ಳಿ ಗೆದ್ದ ಮಹಿಳಾ ತಂಡ