ETV Bharat / sports

ಸಾನಿಯಾ ಹುಟ್ಟುಹಬ್ಬಕ್ಕೆ ಶೋಯೆಬ್ ವಿಶ್.. ಬೇರ್ಪಡೆ ವದಂತಿಗೆ ಬ್ರೇಕ್​​

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇಂದು 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪತಿ ಶೋಯೆಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಅವರಿಗೆ ವಿಶೇಷವಾಗಿ ಶುಭ ಕೋರಿದ್ದಾರೆ.

author img

By

Published : Nov 15, 2022, 5:23 PM IST

shoaib malik wishes to sania mirza birthday
ಸಾನಿಯಾ ಹುಟ್ಟುಹಬ್ಬಕ್ಕೆ ಶೋಯೆಬ್ ವಿಶ್

ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಭಾರಿ ಚರ್ಚೆಗೆ ವೇದಿಕೆ ಸೃಷ್ಟಿಸಿರೋದಂತೂ ಸುಳ್ಳಲ್ಲ. ಇನ್ನೇನು ಈ ಜೋಡಿ ಸಂಪೂರ್ಣ ದೂರವಾಗಲಿದ್ದಾರೆ ಎನ್ನುವ ಮಾತು ದಟ್ಟವಾಗುವಷ್ಟರಲ್ಲಿ, ಶೀಘ್ರದಲ್ಲೇ ಕಾರ್ಯಕ್ರಮವೊಂದನ್ನು ನಡೆಸಿಕೊಡಲಿದ್ದೇವೆ ಎಂದು ತಿಳಿಸಿ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದರು. ಇದೀಗ ಶೋಯೆಬ್ ಮಲಿಕ್ ಅವರ ಹೊಸ ಪೋಸ್ಟ್​​ ಜನರಲ್ಲಿ ಗೊಂದಲ ಸೃಷ್ಟಿಸಿದೆ.

ಸಾನಿಯಾ ಮಿರ್ಜಾ ಇಂದು 36ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪತಿ ಶೋಯೆಬ್ ಮಲಿಕ್ ಪತ್ನಿ ಸಾನಿಯಾ ಮಿರ್ಜಾ ಅವರಿಗೆ ವಿಶೇಷವಾಗಿ ಶುಭ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳು ಸಾನಿಯಾ ಮಿರ್ಜಾ, ಸದಾ ನಿಮಗೆ ಆರೋಗ್ಯ ಮತ್ತು ಖುಷಿಯ ಜೀವನವಿರಲಿ ಎಂದು ಆಶಿಸುತ್ತೇನೆ ಎಂದು ಸೋಷಿಯಲ್​ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.

ಅವರ ಈ ಪೋಸ್ಟ್ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ಡಿವೋರ್ಸ್ ಗಾಸಿಪ್‌ ನಡುವೆ ಶೋಯೆಬ್ ಮಲಿಕ್ ಪೋಸ್ಟ್​ ನೆಟ್ಟಿಗರಲ್ಲಿ ಗೊಂದಲ ಸೃಷ್ಟಿಸಿದೆ. ಈ ಜೋಡಿ ಬೇರೆಯಾಗಲಿದ್ದಾರಾ? ಅಥವಾ ದಾಂಪತ್ಯ ಜೀವನ ಮುಂದುವರಿಸಲಿದ್ದಾರಾ? ಅನ್ನೋ ಚರ್ಚೆ ಜೋರಾಗಿದೆ.

2010ರ ಏಪ್ರಿಲ್​ನಲ್ಲಿ ಸಾನಿಯಾ ಮತ್ತು ಶೋಯೆಬ್ ದಾಂಪತ್ಯ ಜೀವನ ಆರಂಭಿಸಿದರು. ಶೋಯೆಬ್ ಪಾಕಿಸ್ತಾನ ಮೂಲದವರಾಗಿದ್ದರಿಂದ ಆ ಸಮಯದಲ್ಲಿ ಈ ಇಬ್ಬರ ಮದುವೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆ ನಂತರ ಅಂತಹ ದೊಡ್ಡ ಸುದ್ದಿ ಏನೂ ಆಗಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಸಾನಿಯಾ ತಮ್ಮ ಇನ್​​​ಸ್ಟಾಗ್ರಾಂ ಖಾತೆಯಲ್ಲಿ ಮಾಡಿದ್ದ ಪೋಸ್ಟ್​ನಿಂದ ಬೇರ್ಪಡೆ ವದಂತಿ ಶುರುವಾಯಿತು.

ಆದರೆ ಕಳೆದ ಕೆಲ ದಿನಗಳ ಹಿಂದೆ ಹೊಸ 'ಮಿರ್ಜಾ ಮಲಿಕ್ ಶೋ' ಕಾರ್ಯಕ್ರಮದಲ್ಲಿ ದಂಪತಿ ಜೊತೆಜೊತೆಯಾಗಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಈ ಶೋ ಪಾಕಿಸ್ತಾನದ ಉರ್ದುಫ್ಲಿಕ್ಸ್‌ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್​ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ.

ಇದನ್ನೂ ಓದಿ: 'ಮಿರ್ಜಾ ಮಲಿಕ್ ಶೋ'.. ಬೇರ್ಪಡೆ ವದಂತಿ ನಡುವೆ ಒಟ್ಟಿಗೆ ಕೆಲಸ ಮಾಡಲು ಮುಂದಾದ ದಂಪತಿ

'ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನನ್ನು ಹುಡುಕಲು' ಎಂಬ ಸಾನಿಯಾರ ಪೋಸ್ಟ್ ಬಳಿಕ ಈ ದಂಪತಿ ಬೇರ್ಪಡೆ ವದಂತಿ ಶುರುವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.