ಬರ್ಮಿಂಗ್ಹ್ಯಾಮ್: 22ನೇ ಕಾಮನ್ವೆಲ್ತ್ ಗೆಮ್ಸ್ನಲ್ಲಿ ಭಾರತ ಶುಭಾರಂಭ ಮಾಡಿದ್ದು, ಇಂದು ನಡೆದ ಮೊದಲ ಪಂದ್ಯದಲ್ಲೇ ಭಾರತದ ಬಾಕ್ಸರ್ ಶಿವಾ ಥಾಪಾ ಎದುರಾಳಿಗೆ ಗೆಲುವಿನ ಪಂಚ್ ನೀಡಿದ್ದಾರೆ. ಈ ಮೂಲಕ ಪ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದ್ದಾರೆ.
ಪುರುಷರ 63 ಕೆಜಿ ವಿಭಾಗದ ಬಾಕ್ಸಿಂಗ್ನಲ್ಲಿ ಭಾರತದ ಶಿವ ಥಾಪಾ ಪಾಕಿಸ್ತಾನದ ಬಿ ಸುಲೇಮಾನ್ ವಿರುದ್ಧ 5-0 ಅಂತರದಿಂದ ಗೆಲುವು ದಾಖಲು ಮಾಡಿದ್ದು, ಪ್ರೀ ಕ್ವಾರ್ಟರ್ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದಾರೆ. ಮತ್ತೊಂದೆಡೆ ಟೆಬಲ್ ಟೆನ್ನಿಸ್ ಡಬಲ್ಸ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಮನಿಕಾ ಬಾತ್ರಾ ಬಳಗ ಗೆಲುವು ದಾಖಲು ಮಾಡಿದ್ದು, ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.
ಆದರೆ, ಪುರುಷರ 400 ಮೀಟರ್ ಫ್ರೀಸ್ಟೈಲ್ ಈಜು ಫೈನಲ್ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಭಾರತದ ಕುಶಾಗ್ರಾ ರಾವತ್ ವಿಫಲರಾಗಿದ್ದಾರೆ. ಸೈಕ್ಲಿಂಗ್ ವಿಭಾಗದಲ್ಲೂ ಭಾರತ ಫೈನಲ್ಗೆ ಅರ್ಹತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.ಸ್ವಿಮ್ಮಿಂಗ್ ವಿಭಾಗದಲ್ಲಿ ಭಾರತದ ಶ್ರೀಹರಿ ನಟರಾಜ್ ಸೆಮಿಫೈನಲ್ಗೆ ಕ್ವಾಲಿಫೈಯರ್ ಆಗಿದ್ದಾರೆ.