ETV Bharat / sports

IPL: ವಿರಾಟ್‌ ಫಿಫ್ಟಿಗೆ ಅನುಷ್ಕಾ ರಿಯಾಕ್ಷನ್​, ಶಮಿ ಶಹಬ್ಬಾಸ್‌ಗಿರಿ ಹೇಗಿತ್ತು ನೋಡಿ... - Mohammed Shami

ವಿರಾಟ್‌ ಕೊಹ್ಲಿಯ ಆಟಕ್ಕೆ ಗುಜರಾತ್​ ಟೈಟನ್ಸ್​​ ಬೌಲರ್​ ಮೊಹಮ್ಮದ್​ ಶಮಿ ಮೆಚ್ಚುಗೆ ವ್ಯಕ್ತಪಡಿಸಿದರು. ಇನ್ನೊಂದೆಡೆ, ಪತ್ನಿ ಅನುಷ್ಕಾ ಶರ್ಮಾ ರಿಯಾಕ್ಷನ್​ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

14 ಪಂದ್ಯಗಳ ಬಳಿಕ ರನ್​​ ಮಷಿನ್​ನಿಂದ ಸಿಡಿದ ಫಿಫ್ಟಿ
Virat Kohlis half century in 14 IPL games
author img

By

Published : May 1, 2022, 1:11 PM IST

ರನ್​​ ಮಷಿನ್​ ಎಂದೇ ಖ್ಯಾತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿ ಇತ್ತೀಚೆಗೆ ಮಂಕಾಗಿದ್ದಾರೆ. ಅವರ ಬ್ಯಾಟ್​ನಿಂದ ನಿರೀಕ್ಷಿತ ಮಟ್ಟದ ರನ್‌ಗಳು ಸಿಡಿಯುತ್ತಿಲ್ಲ. ಇದರಿಂದಾಗಿ ಅಭಿಮಾನಿಗಳಲ್ಲಿ ಸಾಕಷ್ಟು ನಿರಾಸೆ ಉಂಟಾಗಿದೆ. ಅದರಲ್ಲೂ, ಐಪಿಎಲ್​ನಲ್ಲಿ ಕಿಂಗ್​ ಕೊಹ್ಲಿ ಕಳೆದ 14 ಪಂದ್ಯಗಳಲ್ಲಿ ಒಂದೇ ಒಂದು ಅರ್ಧ ಶತಕ ಸಿಡಿಸಿಲ್ಲ. ಆದರೆ, ಶನಿವಾರ ನಡೆದ ಗುಜರಾತ್​ ಟೈಟನ್ಸ್​​ ವಿರುದ್ಧ 58 ರನ್​ಗಳನ್ನು ಬಾರಿಸಿರುವ ಅವರು ಅಭಿಮಾನಿಗಳಲ್ಲಿ ಮತ್ತೆ ನಿರೀಕ್ಷೆ ಹೆಚ್ಚಿಸಿದರು. ಅಷ್ಟೇ ಅಲ್ಲ, ಎದುರಾಳಿ ತಂಡದ ಬೌಲರ್​ ಮಮಮ್ಮದ್ ಶಮಿ ಸಹ ವಿರಾಟ್​ ಆಟದಿಂದ ಸಂತಸಗೊಂಡರು.

ಆರ್​ಸಿಬಿ ಮಾಜಿ ನಾಯಕ ವಿರಾಟ್​ ಕೊಹ್ಲಿ ಈ ಹಿಂದಿನ ಮೂರು ಪಂದ್ಯಗಳಲ್ಲಿ ಕ್ರಮವಾಗಿ 9, 0, 0ಗೆ ಓಟ್​ ಆಗಿದ್ದರು. ಆದರೆ, ಶನಿವಾರದ ಪಂದ್ಯದಲ್ಲಿ45 ಎಸೆತಗಳಲ್ಲಿ 50 ರನ್​​ಗಳನ್ನು ಬಾರಿಸಿ ಮತ್ತೆ ಲಯಕ್ಕೆ ಮರಳುವ ಸೂಚನೆ ಕೊಟ್ಟಿದ್ದಾರೆ. ಒಟ್ಟಾರೆ 53 ಎಸೆತಗಳನ್ನು ಎದುರಿಸಿದ ಅವರು ನಾಲ್ಕು ಬೌಂಡರಿ​ ಮತ್ತು ಒಂದು ಸಿಕ್ಸರ್‌ ​​ನೊಂದಿಗೆ 58 ರನ್ ಸಿಡಿಸಿದ್ದಾರೆ.

ಕೊಹ್ಲಿಯ ಆಟಕ್ಕೆ ಗುಜರಾತ್​ ಟೈಟನ್ಸ್ ಬೌಲರ್​ ಮೊಹಮ್ಮದ್​ ಶಮಿ ಮೆಚ್ಚಿ, ಹೆಗಲ ಮೇಲೆ ಕೈ ಹಾಕಿ ಪ್ರಶಂಸೆ ವ್ಯಕ್ತಪಡಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇತ್ತ, ಖ್ಯಾತ ನಟಿ, ಮಡದಿ ಅನುಷ್ಕಾ ಶರ್ಮಾ ಕೂಡ ಪತಿ ಆಟದಿಂದ ಖುಷಿಯಾದರು. ಪತಿ ಅರ್ಧ ಶತಕ ಸಿಡಿಸುತ್ತಿದ್ದಂತೆ ಅನುಷ್ಕಾ ಕೊಟ್ಟ ರಿಯಾಕ್ಷನ್​ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: IPL 2022: ಗುಜರಾತ್ ವಿರುದ್ಧ ಆರ್​ಸಿಬಿ ಸೋಲಿಗೆ ಕಾರಣವಾದ 3 ಅಂಶಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.