ಪುಣೆ(ಮಹಾರಾಷ್ಟ್ರ): ಲಿಂಬೋ ಸ್ಕೇಟಿಂಗ್‌ನಲ್ಲಿ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆಯುವ ಮೂಲಕ ಪುಣೆಯ 7 ವರ್ಷದ ಪುಟಾಣಿ ಚೀನಾದ ವಿಶ್ವ ದಾಖಲೆ ಬ್ರೇಕ್ ಮಾಡಿದ್ದಾರೆ. ಏಕಕಾಲದಲ್ಲಿ 20 ಕಾರುಗಳ ಅಡಿ ವೇಗವಾಗಿ ಸ್ಕೇಟ್ ಮಾಡುವ ಮೂಲಕ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಗೆ ಸೇರಿದ್ದಾಳೆ. ಈ ಹಿಂದೆ ಚೀನಾದ 14 ವರ್ಷದ ಬಾಲಕಿಯಿಂದ ನಿರ್ಮಾಣಗೊಂಡಿದ್ದ ದಾಖಲೆ ಬ್ರೇಕ್ ಆಗಿದೆ. ಪುಣೆಯಲ್ಲಿ ಆಯೋಜನೆಗೊಂಡಿದ್ದ ಪಂದ್ಯದಲ್ಲಿ ದೇಶ್ನಾ ಒಟ್ಟಿಗೆ 20 ಕಾರುಗಳ ಕೆಳಗೆ ಸ್ಕೇಟ್ ಮಾಡಿದ್ದಾರೆ. ಕೇವಲ 13:74 ಸೆಕೆಂಡ್ಗಳಲ್ಲಿ 193 ಅಡಿ ವಿಸ್ತಾರ ಪೂರ್ಣಗೊಳಿಸಿದ್ದಾರೆ.
ಸ್ಕೇಟಿಂಗ್‌ನಲ್ಲಿ ಹೊಸ ದಾಖಲೆ ಬರೆದ 7 ವರ್ಷದ ಪುಟಾಣಿ: ಈ ಹಿಂದೆ 2015ರಲ್ಲಿ ಚೀನಾದ 14 ವರ್ಷದ ಬಾಲಕಿ 14:15 ಸೆಕೆಂಡ್ಗಳಲ್ಲಿ ಇದೇ ದೂರವನ್ನ ಕ್ರಮಿಸಿ, ವಿಶ್ವದಾಖಲೆ ನಿರ್ಮಿಸಿದ್ದಳು. ಮಗಳ ಸಾಧನೆ ಬಗ್ಗೆ ಮಾತನಾಡಿರುವ ತಂದೆ ಆದಿತ್ಯ, ಸ್ಕೇಟಿಂಗ್‌ನಲ್ಲಿ ಮಗಳು ಕಳೆದ ಎರಡು ವರ್ಷಗಳಿಂದ ಅಭ್ಯಾಸ ಮಾಡ್ತಿದ್ದಾಳೆ. ಆರು ತಿಂಗಳಿಂದ ಲಿಂಬೋ ಸ್ಕೇಟಿಂಗ್‌ನಲ್ಲಿ ದಾಖಲೆ ಬರೆಯಲು ತಯಾರಿ ನಡೆಸಿದ್ದಾಳೆ. ಇದಕ್ಕಾಗಿ ಆಕೆಯ ತರಬೇತುದಾರ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದರು.
ಕಳೆದ ಒಂದು ತಿಂಗಳಿಂದ ಕಾಟ್ರಾಜ್ ಕೊಂಡ್ವಾ ರಸ್ತೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದು,ಅಭ್ಯಾಸ ನಡೆಸಲು ಸರಿಯಾದ ಸ್ಥಳವಕಾಶ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ದೇಶ್ನಾ ಈಗಾಗಲೇ ಅನೇಕ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದು, 40 ಅಧಿಕ ಪದಕ ಹಾಗೂ 16ಕ್ಕೂ ಹೆಚ್ಚು ಪ್ರಮಾಣಪತ್ರ ಗೆದ್ದಿದ್ದಾರೆ.