ಈಸ್ಟ್‌ಬೋರ್ನ್ (ಇಂಗ್ಲೆಂಡ್): ಸೆರೆನಾ ವಿಲಿಯಮ್ಸ್ ಒಂದು ವರ್ಷದ ನಂತರ ವಿಂಬಲ್ಡನ್ ಕ್ರೀಡಾಕೂಟದ ಅಭ್ಯಾಸ ಪಂದ್ಯ ಗೆದ್ದರು. ಈಸ್ಟ್‌ಬೋರ್ನ್‌ನಲ್ಲಿ ಮಹಿಳೆಯರ ಡಬಲ್ಸ್ ಪಂದ್ಯ ನಡೆಯಿತು. ಸೆರೆನಾ ತಮ್ಮ ಜೊತೆಗಾರ್ತಿ ಒನ್ಸ್ ಜಬುರ್ ಅವರೊಂದಿಗೆ 2-6, 6-3, 13-11 ಸೆಟ್‌ಗಳ ಮೂಲಕ ಸಾರಾ ಸೊರಿಬ್ಸ್ ಟಾರ್ಮೊ ಮತ್ತು ಮೇರಿ ಬುಜ್ಕೋವಾ ಜೋಡಿಯನ್ನು ಪರಾಭವಗೊಳಿಸಿದರು.
ಮೊದಲ ಸೆಟ್‌ನಲ್ಲಿ ಸೋತರೂ ಎರಡು ಮತ್ತು ಮೂರನೇ ಸೆಟ್‌ನಲ್ಲಿ ಸೆರೆನಾ ಜೋಡಿ ಅದ್ಭುತ ಆಟದೊಂದಿಗೆ ಲಯಕ್ಕೆ ಮರಳಿದರು. ಗೆಲುವಿನ ನಂತರ ಸೆರೆನಾಗೆ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ಎದ್ದು ನಿಂತು ಗೌರವ ಸೂಚಿಸಿದರು. ಸೆರೆನಾ 23 ಬಾರಿಯ ಟೆನಿಸ್ ಗ್ರಾಂಡ್ಸ್ಲ್ಯಾಮ್ ಸಿಂಗಲ್ಸ್ ವಿಜೇತೆಯಾಗಿದ್ದಾರೆ.
ಇದನ್ನೂ ಓದಿ: ಭಾರತ ಮಹಿಳಾ ತಂಡದ ಮಾಜಿ ನಾಯಕಿ ರುಮೇಲಿ ಧಾರ್ ಕ್ರಿಕೆಟ್ಗೆ ಗುಡ್ಬೈ