ಹೈದರಾಬಾದ್ : ಮಲೇಷಿಯನ್ ಓಪನ್ ಸ್ಕ್ವಾಷ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತದ ಸೌರವ್ ಘೋಷಾಲ್ ಎದುರಾಳಿಗೆ ಸೋಲಿನ ರುಚಿ ತೋರಿಸಿದ್ದು, ಈ ಮೂಲಕ ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಗ್ರ ಶ್ರೇಯಾಂಕದ ಮಿಗುಯೆಲ್ ರೊಡ್ರಿಗಸ್ ವಿರುದ್ಧ ಜಯ ಸಾಧಿಸಿ ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎಂಬ ಸಾಧನೆಗೂ ಪಾತ್ರರಾಗಿದ್ದಾರೆ.
ಇಂದು ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸ್ಕ್ವಾಷ್ ತಾರೆ ಅದ್ಭುತ ಪ್ರದರ್ಶನ ನೀಡಿದ್ದು, ಕೊಲಂಬಿಯಾದ ಅಗ್ರ ಶ್ರೇಯಾಂಕದ ರೋಡ್ರಿಗಸ್ ವಿರುದ್ಧ 55 ನಿಮಿಷಗಳಲ್ಲಿ 11-7, 11-8 ಮತ್ತು 13-11 ಅಂತರದಿಂದ ಗೆಲುವು ಸಾಧಿಸಿದರು. ಜೊತೆಗೆ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಚಾಂಪಿಯನ್ ಕಿರೀಟ ತೊಟ್ಟಿದ್ದಾರೆ.
ಇದನ್ನೂ ಓದಿರಿ: IND-SA ಸರಣಿ ನಡೆಸಲು ಆದ್ಯತೆ.. ಆದರೆ, ಪ್ಲೇಯರ್ಸ್ ಸುರಕ್ಷತೆ ಮುಖ್ಯ ಎಂದ ಬಿಸಿಸಿಐ ಖಜಾಂಚಿ..
40ನೇ ಮಲೇಷಿಯನ್ ಓಪನ್ ಸ್ಕ್ವಾಷ್ನಲ್ಲಿ ಭಾಗಿಯಾಗಿದ್ದ ಭಾರತದ ಸೌರವ್ ಘೋಷಾಲ್ ಈ ಸಾಧನೆ ಮಾಡಿರುವ ಮೊದಲ ಭಾರತೀಯನಾಗಿದ್ದು, ಅಂತ್ಯಕ ಕಠಿಣ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಈ ಹಿಂದೆ 2018ರಲ್ಲಿ ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಕ್ವಾಷ್ ಓಪನ್ನಲ್ಲಿ ಸೌರಬ್ ಪ್ರಶಸ್ತಿ ಗೆದ್ದಿದ್ದರು.