ETV Bharat / sports

ಫಿಫಾ ವಿಶ್ವಕಪ್​: ಮೆಸ್ಸಿ ತಂಡಕ್ಕೆ ಸೌದಿ ಅರೇಬಿಯಾ ಶಾಕ್​ - ವಿಶ್ವಕಪ್​ನಲ್ಲಿಂದು ಅಚ್ಚರಿಯ ಫಲಿತಾಂಶ

ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನಲ್ಲಿಂದು ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವಿನ ಪಂದ್ಯದಲ್ಲಿ ಲಿಯೋನೆಲ್​ ಮೆಸ್ಸಿ ತಂಡಕ್ಕೆ, ಸೌದಿ ಪಡೆ 1-2 ಗೋಲುಗಳಿಂದ ಸೋಲಿಸಿ ಶಾಕ್​ ನೀಡಿದೆ.

saudi-arabia-beat-argentina
ಫಿಫಾ ವಿಶ್ವಕಪ್​
author img

By

Published : Nov 22, 2022, 5:53 PM IST

Updated : Nov 22, 2022, 6:26 PM IST

ಲುಸೈಲ್​(ಕತಾರ್​): ಕ್ರೀಡೆಯೇ ಹಾಗೆ. ಎಷ್ಟೇ ಬಲಿಷ್ಠ ತಂಡವಾಗಿದ್ದರೂ ಎದುರಾಳಿ ಆಟಗಾರರ ಚಾಕಚಕ್ಯತೆಗೆ ಸೋಲಲೇಬೇಕು. ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನಲ್ಲಿಂದು ಲುಸೈಲ್​ ಮೈದಾನದಲ್ಲಿ ನಡೆದ ಸೌದಿ ಅರೇಬಿಯಾ ಮತ್ತು ಅರ್ಜೆಂಟೀನಾ ನಡುವಿನ ಪಂದ್ಯ ಇಂಥದ್ದೇ ಫಲಿತಾಂಶಕ್ಕೆ ಕಾರಣವಾಗಿದೆ.

ವಿಶ್ವಕಪ್​ ಗೆಲ್ಲುವ ಫೆವರೇಟ್​ ತಂಡಗಳಲ್ಲಿ ಒಂದಾಗಿ ಕದನಕ್ಕಿಳಿದಿರುವ, ವಿಶ್ವಶ್ರೇಷ್ಠ ಆಟಗಾರ ಲಿಯೋನೆಲ್​ ಮೆಸ್ಸಿ ಒಳಗೊಂಡಿರುವ ಅರ್ಜೆಂಟೀನಾಗೆ 51 ನೇ ಶ್ರೇಯಾಂಕದ ಸೌದಿ ಅರೇಬಿಯಾ ತಂಡ 1-2 ಗೋಲುಗಳಿಂದ ಸೋಲಿಸಿ ಅರಗಿಸಿಕೊಳ್ಳಲಾಗದ ಪೆಟ್ಟು ನೀಡಿದೆ.

ಈ ವಿಶ್ವಕಪ್​ನ 3 ನೇ ಶ್ರೇಯಾಂಕ ಹೊಂದಿರುವ ಅರ್ಜೆಂಟೀನಾ ತಂಡ ಪಂದ್ಯ ಗೆಲ್ಲುವ ಹುಮ್ಮಸ್ಸಿನಲ್ಲಿ ಮೈದಾನಕ್ಕಿಳಿಯಿತು. ಪಂದ್ಯ ಆರಂಭವಾದ 10 ನಿಮಿಷದಲ್ಲೇ ಲಿಯೋನೆಲ್​ ಮೆಸ್ಸಿ ತಮ್ಮ ಕಾಲ್ಚಳಕದಿಂದ ಸಿಕ್ಕ ಪೆನಾಲ್ಟಿ ಕಾರ್ನರ್​ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ 1-0 ಮುನ್ನಡೆ ಸಾಧಿಸಿಕೊಟ್ಟರು. ಬಳಿಕ 3 ಗೋಲು ಗಳಿಸಿದರೂ ಆಫ್​ಸೈಡ್​ ಆಗಿದ್ದ ಕಾರಣ ಅವುಗಳನ್ನು ಅಂಪೈರ್​ ಪರಿಗಣಿಸಲಿಲ್ಲ.

ದ್ವಿತೀಯಾರ್ಧದಲ್ಲಿ ಸೌದಿ ಚಮಕ್​: ಬಳಿಕ ಶುರುವಾದ ದ್ವಿತೀಯಾರ್ಧದದಲ್ಲಿ ಸೌದಿ ತಂಡ ಚುರುಕಿನ ಆಟ ಪ್ರದರ್ಶಿಸಿತು. ಮೆಸ್ಸಿ ಸಾಧಿಸಿದ ಗೋಲಿನ ಬಳಿಕ ಎಚ್ಚೆತ್ತ ಸೌದಿ ಪಡೆ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡಕ್ಕೆ ಶಾಕ್ ಮೇಲೆ ಶಾಕ್ ನೀಡಿತು. ದ್ವಿತೀಯಾರ್ಧ ಆರಂಭವಾದ 3 ನಿಮಿಷದಲ್ಲೇ ಸೌದಿಯ ಸಲೇಹ್ ಅಲ್-ಶೆಹ್ರಿ ಗೋಲು ಬಾರಿಸಿ ಪಂದ್ಯ 1-1 ಸಮಬಲ ಮಾಡಿದರು.

ಬಳಿಕ ಸಲೇಮ್ ಅಲ್ ದವ್ಸಾರಿ ಸ್ಟನ್ನಿಂಗ್​ ಗೋಲು ಬಾರಿಸಿ 2-1 ರ ಮುನ್ನಡೆ ನೀಡಿದರು. ಈ ಶಾಕ್​ನಿಂದ ತತ್ತರಿಸಿದ ಅರ್ಜೆಂಟೀನಾ ತಂಡ ಬಳಿಕ ಗೋಲು ಗಳಿಸಲಾಗದೇ 51 ಕ್ರಮಾಂಕದ ಅಬಲ ತಂಡದೆದುರು ಸೋತು ಶರಣಾಯಿತು.

ಲಿಯೋನೆಲ್​ ಮೆಸ್ಸಿ ದಾಖಲೆ: ಇನ್ನು ಲಿಯೋನೆಲ್​ ಮೆಸ್ಸಿ ತಾವಾಡಿದ ನಾಲ್ಕು ವಿಶ್ವಕಪ್​ಗಳಲ್ಲಿ ಗೋಲು ಗಳಿಸಿದ ಮೊದಲ ಅರ್ಜೆಂಟೀನಾ ಆಟಗಾರ ಎಂಬ ದಾಖಲೆ ಬರೆದರು. 2006, 2014, 2018, 2022ರ ವಿಶ್ವಕಪ್​ನಲ್ಲಿ ಗೋಲು ಬಾರಿಸಿದ್ದಾರೆ.

ಓದಿ: 64 ವರ್ಷಗಳ ಬಳಿಕ ಕಣಕ್ಕಿಳಿದು ಜಿದ್ದಾಜಿದ್ದಿನ ಹೋರಾಟ ನಡೆಸಿದ ವೇಲ್ಸ್‌; ಪಂದ್ಯ ಡ್ರಾ

Last Updated : Nov 22, 2022, 6:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.