ETV Bharat / sports

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ: 'ಸತ್-ಚಿ' ಜೋಡಿ ಶಿಫಾರಸು - ETV Bharath Kannada news

Major Dhyan Chand Khel Ratna Award 2023: ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತಕ್ಕೆ ಹಲವು ಪ್ರಥಮ ಪ್ರಶಸ್ತಿ, ಪದಕಗಳನ್ನು ಗೆದ್ದುಕೊಟ್ಟ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿಯನ್ನು ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Satwiksairaj-Chirag
Satwiksairaj-Chirag
author img

By ETV Bharat Karnataka Team

Published : Dec 13, 2023, 7:25 PM IST

ನವದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರನ್ನು 2023ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತಕ್ಕೆ ಹಲವಾರು ಪ್ರಥಮಗಳನ್ನು ಈ ಜೋಡಿ ಸಾಧಿಸಿದೆ. 'ಖೇಲ್ ರತ್ನ' ದೇಶದ ಅತಿದೊಡ್ಡ ಕ್ರೀಡಾ ಗೌರವವಾಗಿದೆ ಮತ್ತು ವಿಶ್ವದ ಎರಡನೇ ಶ್ರೇಯಾಂಕದ ಬ್ಯಾಡ್ಮಿಂಟನ್ ಜೋಡಿಯು ಈ ಪ್ರಶಸ್ತಿಗೆ ಆಯ್ಕೆ ಆಗುವ ಮಟ್ಟದ ಪ್ರದರ್ಶನ ನೀಡಿದೆ.

ಚಿರಾಗ್​ - ಸಾತ್ವಿಕ್​ ಪಯಣ: 2022 ರಿಂದ ಇವರಿಬ್ಬರು ಐದು ಬಿಡಬ್ಲ್ಯುಎಫ್​ ವರ್ಲ್ಡ್ ಟೂರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಜನವರಿ 2022ರಲ್ಲಿ ಇಂಡಿಯನ್ ಓಪನ್ ಪ್ರಶಸ್ತಿ ಜಯದೊಂದಿಗೆ ಪ್ರಾರಂಭವಾಯಿತು, ಇದರಲ್ಲಿ ಅವರು ಇಂಡೋನೇಷ್ಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ಅವರನ್ನು 21-16, 26-24 ರಿಂದ ಸೋಲಿಸಿದರು.

2023 ರಲ್ಲಿ ಅವರು ಸ್ವಿಸ್ ಓಪನ್, ಇಂಡೋನೇಷ್ಯಾ ಓಪನ್ ಮತ್ತು ಕೊರಿಯಾ ಓಪನ್ ಗೆದ್ದರು. ಇಂಡೋನೇಷ್ಯಾ ಓಪನ್ ಪ್ರಶಸ್ತಿ ಗೆಲುವು ವಿಶೇಷವಾಗಿತ್ತು, ಅವರು ಎರಡನೇ ಶ್ರೇಯಾಂಕದ ಮಲೇಷಿಯಾದ ಜೋಡಿ ಆರೋನ್ ಚಿಯಾ ಮತ್ತು ವೂಯಿ ಯಿಕ್ ಸೋಹ್ ಅವರನ್ನು 21-17, 21-18 ರಿಂದ ಸೋಲಿಸಿ ಭಾರತದ ಮೊದಲ ಬಿಡಬ್ಲ್ಯುಎಫ್​ ಸೂಪರ್ 1000 ವರ್ಲ್ಡ್ ಟೂರ್ ಪ್ರಶಸ್ತಿ ಗೆದ್ದ ಆಟಗಾರರಾದರು.

ಥಾಮಸ್ ಕಪ್ ಗೆದ್ದ ಜೋಡಿ: ಅವರು ಭಾರತಕ್ಕೆ ಐತಿಹಾಸಿಕ ಥಾಮಸ್ ಕಪ್ ಗೆಲುವಿನ ಭಾಗವಾಗಿದ್ದರು. 1949 ರಿಂದ ನಡೆದ ವಿಶ್ವದ ಅಗ್ರ ಪುರುಷರ ತಂಡ ಚಾಂಪಿಯನ್‌ಶಿಪ್‌ನಲ್ಲಿ ಭಾರತವು ಮೊದಲ ಬಾರಿಗೆ ಟ್ರೋಫಿ ವಶಪಡಿಸಿಕೊಂಡಿತು. 14 ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದ ಇಂಡೋನೇಷ್ಯಾವನ್ನು ಫೈನಲ್‌ನಲ್ಲಿ 3-0 ಅಂತರದಿಂದ ಈ ಜೋಡಿ ಮಣಿಸಿತ್ತು.

ಕಳೆದ ವರ್ಷ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಚಿನ್ನದ ಪದಕವನ್ನು ಗೆದ್ದರು. ಮಿಶ್ರ ತಂಡದಲ್ಲಿ ಭಾಗವಾಗಿದ್ದ ಜೋಡಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು. ಕಾಮನ್​ವೆಲ್ತ್​ ಗೇಮ್​ ನಂತರ ದುಬೈನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇವರಿಬ್ಬರು ಕಂಚಿನ ಪದಕವನ್ನು ಗೆದ್ದುಕೊಂಡರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷರ ಡಬಲ್ಸ್ ಜೋಡಿ ಆಗಿದ್ದಾರೆ.

'ಸತ್-ಚಿ' ಎಂದೇ ಕರೆಯಲ್ಪಡುವ ಜೋಡಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನವನ್ನು ವಶಪಡಿಸಿಕೊಂಡಿತು. ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಫೈನಲ್‌ನಲ್ಲಿ ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಈ ಯಿ ಅವರನ್ನು 16-21, 21-17, 21-19 ಸೆಟ್‌ಗಳಿಂದ ಸೋಲಿಸಿದರು. ಅಲ್ಲದೇ ಈವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಡಬಲ್ಸ್ ಜೋಡಿಯಾದರು.

ಈ ವರ್ಷ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ ಫೈನಲ್​ನಲ್ಲಿ ದಕ್ಷಿಣ ಕೊರಿಯಾದ ಚೋಯ್ ಸೋಲ್-ಗ್ಯು ಮತ್ತು ಕಿಮ್ ವಾನ್-ಹೊ ಅವರನ್ನು 21-18, 21-16 ರಿಂದ ಸೋಲಿಸಿ ಚಿನ್ನದ ಪದಕ ಜಯಿಸಿದ್ದಾರೆ. ಏಷ್ಯಾಡ್​ ಬ್ಯಾಡ್ಮಿಂಟನ್‌ನಲ್ಲಿ ದೇಶಕ್ಕೆ ಮೊದಲ ಚಿನ್ನ ಗೆದ್ದರು. ಅಕ್ಟೋಬರ್‌ನಲ್ಲಿ ಬ್ಯಾಡ್ಮಿಂಟನ್ ವಿಶ್ವ ಫೆಡರೇಶನ್ (BWF) ಬಿಡುಗಡೆ ಮಾಡಿದ ಶ್ರೇಯಾಂಕದಲ್ಲಿ ಅಗ್ರಸ್ಥಾನ ಈ ಜೋಡಿ ಪಡೆದುಕೊಂಡಿತು. ಈ ಹೆಗ್ಗುರುತನ್ನು ಸಾಧಿಸಿದ ಭಾರತದ ಮೊದಲ ಜೋಡಿಯಾಗಿದ್ದಾರೆ.

ಇದನ್ನೂ ಓದಿ: ಅರ್ಜುನ ಪ್ರಶಸ್ತಿಗೆ ವಿಶ್ವಕಪ್​ ಸ್ಟಾರ್​ ಮೊಹಮ್ಮದ್​ ಶಮಿ ಹೆಸರು ಸೂಚಿಸಿದ ಬಿಸಿಸಿಐ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.