ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿರುವ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವೈವಾಹಿಕ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಪಾಕಿಸ್ತಾನಿ ಮಾಧ್ಯಮಗಳಲ್ಲಿ ವರದಿಯಾಗಿದೆ.
-
Sania Mirza Instagram story. pic.twitter.com/BBKEztyCa6
— Avinash Aryan (@AvinashArya09) November 6, 2022 " class="align-text-top noRightClick twitterSection" data="
">Sania Mirza Instagram story. pic.twitter.com/BBKEztyCa6
— Avinash Aryan (@AvinashArya09) November 6, 2022Sania Mirza Instagram story. pic.twitter.com/BBKEztyCa6
— Avinash Aryan (@AvinashArya09) November 6, 2022
ಸಾನಿಯಾ ಮತ್ತು ಶೋಯೆಬ್ 2010ರ ಏಪ್ರಿಲ್ನಲ್ಲಿ ವಿವಾಹವಾಗಿದ್ದರು. ಶೋಯೆಬ್ ಪಾಕಿಸ್ತಾನ ಮೂಲದವರಾಗಿದ್ದರಿಂದ ಆ ಸಮಯದಲ್ಲಿ ಈ ಇಬ್ಬರ ಮದುವೆಗೆ ಭಾರಿ ವಿರೋಧ ಕೂಡ ವ್ಯಕ್ತವಾಗಿತ್ತು. ಆ ನಂತರ ಅಂತಹ ದೊಡ್ಡ ಸುದ್ದಿ ಏನೂ ಆಗಲಿಲ್ಲ. ಆದ್ರೆ ಕೆಲ ದಿನಗಳ ಹಿಂದೆ ಸಾನಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿದ್ದ ಪೋಸ್ಟ್ನಿಂದ ಇದೀಗ ಬೇರ್ಪಡೆ ವದಂತಿ ಜೋರಾಗಿದೆ.
- " class="align-text-top noRightClick twitterSection" data="
">
ಇದನ್ನೂ ಓದಿ: ವಿರಾಟ್ ಕೊಹ್ಲಿಯೂ ಸಾಧಿಸದ ದಾಖಲೆ ಬರೆದ ಸೂರ್ಯಕುಮಾರ್.. ಏನದು?
'ಒಡೆದ ಹೃದಯಗಳು ಎಲ್ಲಿಗೆ ಹೋಗುತ್ತವೆ. ಅಲ್ಲಾನನ್ನು ಹುಡುಕಲು' ಎಂಬುದು ಸಾನಿಯಾರ ಪೋಸ್ಟ್. ಇನ್ನೂ ಮಗ ಇಜಾನ್ ಮಿರ್ಜಾ ಮಲಿಕ್ ಅವರ ಹುಟ್ಟುಹಬ್ಬದ ಫೋಟೋವನ್ನು ಸಾನಿಯಾ ಶೇರ್ ಮಾಡಿಲ್ಲ. ಈ ಹಿನ್ನೆಲೆ ಈ ದಂಪತಿ ಜೀವನದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿಗೆ ರೆಕ್ಕೆಪುಕ್ಕ ಸಿಕ್ಕಂತಾಗಿದೆ.
- " class="align-text-top noRightClick twitterSection" data="
">