ಸಿಂಗಾಪುರ: ಗಾಯ ಮತ್ತು ಸತತ ವೈಫಲ್ಯದಿಂದ ಕಂಗೆಟ್ಟಿದ್ದ ಒಲಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಇಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಪಂದ್ಯಾವಳಿಯಲ್ಲಿ ಚೀನಾದ ಆಟಗಾರ್ತಿಯನ್ನು ಸೋಲಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಇದಲ್ಲದೇ, ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು, ಎಚ್.ಎಸ್ ಪ್ರಣಯ್ ಕೂಡ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟರು.
ವಿಶ್ವದ 9ನೇ ಶ್ರೇಯಾಂಕದ ಆಟಗಾರ್ತಿ ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ ಸೈನಾ ನೆಹ್ವಾಲ್ 21-19 11-21 21-17 ರ ಅಂತರದಲ್ಲಿ ಮಣಿಸಿದರು. ಮೊದಲ ಸೆಟ್ ಗೆದ್ದ ಸೈನಾ 2ನೇ ಸೆಟ್ನಲ್ಲಿ ಚೀನಾದ ಆಟಗಾರ್ತಿ ತಿರುಗೇಟು ನೀಡಿದರು. 3ನೇ ಸೆಟ್ನಲ್ಲಿ ಮೈಕೊಡವಿ ಎದ್ದ ಸೈನಾ 21-17 ಅಂತರದಲ್ಲಿ ಜಯಸಿ ವರ್ಷಗಳ ಬಳಿಕ ಕ್ವಾರ್ಟರ್ ಫೈನಲ್ ತಲುಪಿದರು.
ಈ ಹಿಂದೆ ಸೈನಾ ನೆಹ್ವಾಲ್ 2020 ರಲ್ಲಿ ಮಲೇಷ್ಯಾ ಮಾಸ್ಟರ್ಸ್ ಮತ್ತು ಬಾರ್ಸಿಲೋನಾ ಸ್ಪೇನ್ ಮಾಸ್ಟರ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ಹಂತವನ್ನು ತಲುಪಿದ್ದರು. ಅದಾದ ಬಳಿಕ ಗಾಯ ಮತ್ತು ಫಾರ್ಮ್ ಕೊರತೆಯಿಂದ ಅವರ ಆಟ ಮಂಕಾಗಿತ್ತು.
-
India's Quarter Finals Round Up at the Singapore Open! ✅
— Sportskeeda (@Sportskeeda) July 14, 2022 " class="align-text-top noRightClick twitterSection" data="
🇮🇳 Saina Nehwal vs Aya Ohari 🇯🇵
🇮🇳 HS Prannoy vs Kodai Naraoka 🇯🇵
🇮🇳 PV Sindhu vs Han Yue 🇨🇳
🇮🇳 Dhruv Kapila/MR Arjun vs M Ahsan/H Setiawan 🇮🇩
All shuttlers take centre court tomorrow. All the best! #IndianSports pic.twitter.com/xH9hffrfXn
">India's Quarter Finals Round Up at the Singapore Open! ✅
— Sportskeeda (@Sportskeeda) July 14, 2022
🇮🇳 Saina Nehwal vs Aya Ohari 🇯🇵
🇮🇳 HS Prannoy vs Kodai Naraoka 🇯🇵
🇮🇳 PV Sindhu vs Han Yue 🇨🇳
🇮🇳 Dhruv Kapila/MR Arjun vs M Ahsan/H Setiawan 🇮🇩
All shuttlers take centre court tomorrow. All the best! #IndianSports pic.twitter.com/xH9hffrfXnIndia's Quarter Finals Round Up at the Singapore Open! ✅
— Sportskeeda (@Sportskeeda) July 14, 2022
🇮🇳 Saina Nehwal vs Aya Ohari 🇯🇵
🇮🇳 HS Prannoy vs Kodai Naraoka 🇯🇵
🇮🇳 PV Sindhu vs Han Yue 🇨🇳
🇮🇳 Dhruv Kapila/MR Arjun vs M Ahsan/H Setiawan 🇮🇩
All shuttlers take centre court tomorrow. All the best! #IndianSports pic.twitter.com/xH9hffrfXn
ಸಿಂಧು, ಪ್ರಣಯ್ ಕ್ವಾರ್ಟರ್ಗೆ: ಇನ್ನೊಂದೆಡೆ ವಿಶ್ವದ 3ನೇ ಶ್ರೇಯಾಂಕಿತೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ವಿಯೆಟ್ನಾಂನ ಆಟಗಾರ್ತಿ ಥುಯ್ ಲಿನ್ ನುಯೆನ್ ವಿರುದ್ಧ 19-21 21-19 21-18 ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ತೆರಳಿದರು. ಸಿಂಧು ಕ್ವಾರ್ಟರ್ ಫೈನಲ್ನಲ್ಲಿ ಚೀನಾದ ಹಾನ್ ಯುಯೆ ಅವರೊಂದಿಗೆ ಮುಖಾಮುಖಿಯಾಗಲಿದ್ದಾರೆ.
ಪುರುಷರ ವಿಭಾಗದಲ್ಲಿ ವಿಶ್ವದ 19ನೇ ಶ್ರೇಯಾಂಕದ ಪ್ರಣಯ್ ಮೂರನೇ ಶ್ರೇಯಾಂಕದ ಚೈನೀಸ್ ತೈಪೆಯ ಚೌ ಟಿಯೆನ್ ಚೆನ್ ವಿರುದ್ಧ ಒಂದು ಗಂಟೆ ಒಂಬತ್ತು ನಿಮಿಷಗಳ ಕಾಲ ನಡೆದ ಕಾದಾಟದಲ್ಲಿ ಗೆಲುವು ಸಾಧಿಸಿ ಕ್ವಾರ್ಟರ್ ತಲುಪಿದರು. ಪ್ರಣಯ್ 14-21 22-20 21-18 ಅಂತರದಿಂದ ಗೆದ್ದರು. ಇದು ತೈಪೆ ಆಟಗಾರನ ವಿರುದ್ಧ ಮೂರು ವಾರದಲ್ಲಿ ಇದು ಎರಡನೇ ಗೆಲುವಾಗಿದೆ.
ಓದಿ: ಹೆಣ್ಣು ಮಗುವಿನ ತಂದೆಯಾದ ರಾಬಿನ್ ಉತ್ತಪ್ಪ.. ಸಂತಸ ಹಂಚಿಕೊಂಡ ಸಿಎಸ್ಕೆ ಬ್ಯಾಟರ್!