ETV Bharat / sports

ಓಟದ ಮೂಲಕ ವಿಶ್ವದ ಅತಿ ಎತ್ತರದ ರಸ್ತೆ ತಲುಪಿದ ಸಬಿತಾ.. ಹೊಸ ಇತಿಹಾಸ ಬರೆದ ಮಹತೋ!

author img

By ETV Bharat Karnataka Team

Published : Sep 9, 2023, 8:36 PM IST

ಉಮ್ಲಿಂಗ್ ಲಾ ವಿಶ್ವದ ಅತಿ ಎತ್ತರದ ವಾಹನ ಸಂಚಾರ ರಸ್ತೆ ಆಗಿದೆ. ಇಲ್ಲಿಗೆ ಓಟದಿಂದಲೇ ಹೋಗಿ ತಲುಪಿದ ವಿಶ್ವದ ಮೊದಲ ಮಹಿಳೆ ಸಬಿತಾ ಮಹತೋ ಆಗಿದ್ದಾರೆ.

sabita-mahto-of-chapra-reached-highest-road-umling-la-by-running
ಸಬಿತಾ ಮಹತೋ

ಪಾಟ್ನಾ (ಬಿಹಾರ): ವಾಹನ ಚಲಿಸ ಬಲ್ಲ ಹಾಗೂ ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ರಸ್ತೆ ಎಂದರೆ ಅದು ಉಮ್ಲಿಂಗ್ ಲಾ. 19 ದಿನಗಳ ಕಾಲ ಓಡಿಯೇ ಈ ಸ್ಥಳವನ್ನು ಬಿಹಾರದ ಒಬ್ಬ ಮಹಿಳೆ ತಲುಪಿದ್ದಾರೆ. ಈ ಮೂಲಕ ವಿಶ್ವದ ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಓಡಿದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಸಬಿತಾ ಮಹತೋ ಭಾಜನರಾಗಿದ್ದಾರೆ. ಪರ್ವತಾರೋಹಿ, ಸೈಕ್ಲಿಸ್ಟ್ ಮತ್ತು ಅಲ್ಟ್ರಾ ರನ್ನರ್ ಸಬಿತಾ ಮಹತೋ ಸಪ್ಟೆಂಬರ್​ 5 ರಂದು ಉಮ್ಲಿಂಗ್ ಲಾ ತಲುಪಿ ಈ ಸಾಧನೆ ಮಾಡಿದ್ದಾರೆ.

sabita-mahto-of-chapra-reached-highest-road-umling-la-by-running
2022 ರಲ್ಲಿ ಸೈಕಲ್ ಮೂಲಕ ಉಮ್ಲಿಂಗ್ ಲಾಕ್ಕೆ ತಲುಪಿದ್ದ ಸಬಿತಾ

ಚಾಪ್ರಾದ ಪಾನಾಪುರ ಗ್ರಾಮದ ನಿವಾಸಿ ಸಬಿತಾ ಮಹತೋ ಅವರು ವಿಶ್ವದ ಅತಿ ಎತ್ತರದ ವಾಹನ ಸಂಚಾರ ರಸ್ತೆ ಆದ ಉಮ್ಲಿಂಗ್ ಲಾದಲ್ಲಿ ಓಡಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ. ಸಬಿತಾ ಇಲ್ಲಿಗೆ ತಲುಪಲು 19 ದಿನ ರಸ್ತೆಯಲ್ಲಿ ಓಟವನ್ನು ಮಾಡಿದ್ದಾರೆ. ಅವರು ಆಗಸ್ಟ್ 19 ರಂದು ಮನಾಲಿಯಿಂದ ತಮ್ಮ ಓಟವನ್ನು ಪ್ರಾರಂಭಿಸಿದರು ಮತ್ತು ಸೆಪ್ಟೆಂಬರ್ 5 ರಂದು ವಿಶ್ವದ ಅತಿ ಎತ್ತರದ ರಸ್ತೆ ಉಮ್ಲಿಂಗ್ ಲಾ ತಲುಪುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.

570 ಕಿಲೋಮೀಟರ್ ಓಟದಿಂದ ಇತಿಹಾಸ: ಸಬಿತಾ ಮನಾಲಿಯಿಂದ 570 ಕಿಲೋಮೀಟರ್ ಓಡಿ ಸಮುದ್ರ ಮಟ್ಟದಿಂದ 19024 ಅಡಿ ಎತ್ತರದಲ್ಲಿರುವ ಉಮ್ಲಿಂಗ ಲಾ ತಲುಪಿದರು. ಮನಾಲಿಯಿಂದಲೇ ರಸ್ತೆ ಏರುಮುಖವಾಗಿರುವುದರಿಂದ ಓಡುವುದು ಸುಲಭವಾಗಿರಲಿಲ್ಲ. ಕೇವಲ 100 ಮೀಟರ್​ ತಲುಪುವಷ್ಟರಲ್ಲಿ ಉಸಿರಾಟದ ಸಮಸ್ಯೆ ಆಗುತ್ತದೆ. ಇದಕ್ಕೆ ಕಾರಣ ಎತ್ತರಕ್ಕೆ ಹೋದಂತೆಲ್ಲ ಗಾಳಿಯ ಪ್ರಮಾಣ ಕಡಿಮೆ ಇರುತ್ತದೆ. ಇದಲ್ಲದೇ ಬಿಸಿಲು, ಗಾಳಿಯ ಜೊತೆಗೆ ಆಗಾಗ ಸುರಿಯುತ್ತಿದ್ದ ಮಳೆಯ ಎದುರಿಸಿ ರಸ್ತೆ ಏರಿದ್ದಾರೆ.

"ನಾನು ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯಾದ ಉಮ್ಲಿಂಗ್ ಲಾ ತಲುಪಿದ್ದೇನೆ. ಈ 19 ದಿನಗಳ ಅವಧಿಯಲ್ಲಿ ಪ್ರತಿದಿನ ನನಗೆ ಏನಾದರೂ ಹೊಸ ಸವಾಲು ಇರುತ್ತಿತ್ತು. ಅವನ್ನು ಎದುರಿಸುತ್ತಾ ಮುಂದೆ ಸಾಗಿದೆ. ಪ್ರತಿದಿನ 8 ಗಂಟೆಗಳ ಕಾಲ ಓಡುತ್ತಿದ್ದೆ ಮತ್ತು ಸಂಜೆಯ ನಂತರ ಧಾಬಾ ಅಥವಾ ಆರ್ಮಿ ಕ್ಯಾಂಟ್‌ನಲ್ಲಿ ನಿಲ್ಲುತ್ತಿದ್ದೆ" ಎಂದು ಪರ್ವತಾರೋಹಿ ಸಬಿತಾ ಮಹತೋ ಹೇಳಿದರು.

ಕಳೆದ ಬಾರಿ ಸೈಕಲ್ ಮೂಲಕ ಉಮ್ಲಿಂಗ್ ಲಾ ತಲುಪಿದ್ದು ಸಬಿತಾ: ಓಟದ ಮೂಲಕ ವಿಶ್ವದ ಅತ್ಯುನ್ನತ ಉಮ್ಲಿಂಗ್ ಲಾ ತಲುಪಿದ ದೇಶದ ಮೊದಲ ಮಹಿಳಾ ಓಟಗಾರ್ತಿ ಎಂಬುದಕ್ಕೆ ಅತೀವ ಸಂತಸವಾಗುತ್ತಿದೆ. ಸುಲಭ್ ಇಂಟರ್ನ್ಯಾಷನಲ್ ಸೋಷಿಯಲ್ ಸರ್ವಿಸ್ ಆರ್ಗನೈಸೇಶನ್ ಈ ಧ್ಯೇಯದಲ್ಲಿ ದೊಡ್ಡ ಕೊಡುಗೆಯನ್ನು ಹೊಂದಿದೆ. ಜೂನ್ 5, 2022 ರಂದು ಸಬಿತಾ ಅವರು ಬೈಸಿಕಲ್ ಇದೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. ಜೂನ್ 28 ರಂದು 5798 ಮೀಟರ್ ಎತ್ತರದ ಉಮ್ಲಿಂಗ್ ಲಾ ರಸ್ತೆಯನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಲಾಯಿತು.

ಕನಸುಗಳ ಹಾರಾಟ ದೀರ್ಘ: ತನ್ನ ಕನಸು ಇನ್ನೂ ಈಡೇರಿಲ್ಲ ಎನ್ನುತ್ತಾರೆ ಸಬಿತಾ. ಮೌಂಟ್ ಎವರೆಸ್ಟ್ ಮೇಲೆ ತನ್ನ ದೇಶದ ತ್ರಿವರ್ಣ ಧ್ವಜವನ್ನು ಹಾರಿಸುವುದು ಅವನ ಕನಸು. ಆಕೆಗೆ ಬೆಂಬಲ ಸಿಗದ ಕಾರಣ ಮೌಂಟ್ ಎವರೆಸ್ಟ್ ಅನ್ನು ಏರಲು ಸಾಧ್ಯವಾಗಿಲ್ಲ. ಸರಕಾರದಿಂದ ಹಾಗೂ ಜನಸಾಮಾನ್ಯರಿಂದಲೂ ನೆರವು ಸಿಕ್ಕರೆ ಮೌಂಟ್ ಎವರೆಸ್ಟ್ ಕನಸು ನನಸಾಗಲಿದೆ ಎಂದಿದ್ದಾರೆ.

ಸೈಕಲ್ ಮೂಲಕ 29 ರಾಜ್ಯಗಳ ಕವರ್: 2017ರಲ್ಲಿ ಬರೋಬ್ಬರಿ 173 ದಿನಗಳಲ್ಲಿ 29 ರಾಜ್ಯಗಳನ್ನು ಸೈಕಲ್ ಮೂಲಕ ತೆರಳಿದ ಮೊದಲ ಮಹಿಳೆ ಸಬಿತಾ. 2016 ರಿಂದ 2019 ರವರೆಗೆ, ಅವರು 7000 ಮೀಟರ್‌ಗಿಂತ ಹೆಚ್ಚಿನ ಪರ್ವತಗಳನ್ನು ಏರಿದ್ದಾರೆ. 2019 ರಲ್ಲಿ, ಅವರು 7120 ಮೀಟರ್ ಎತ್ತರದಲ್ಲಿ ಗರ್ವಾಲ್‌ನ ತ್ರಿಶೂಲ್ ಪರ್ವತವನ್ನು ಏರಿದ್ದಾರೆ. 2022 ರಲ್ಲಿ, ಅವರು ಬೈಸಿಕಲ್ ಮೂಲಕ ವಿಶ್ವದ ಅತಿ ಎತ್ತರದ (19300 ಮೀ) ಉಮ್ಲಿಂಗ್ ಲಾಗೆ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.

ಇದ್ನನೂ ಓದಿ: ಮೂವರು ಪ್ರಮುಖ ವೇಗಿಗಳೊಂದಿಗೆ ಪಾಕಿಸ್ತಾನ ಎದುರಿಸಿ.. ರಾಹುಲ್​ಗಿಂತ ಕಿಶನ್​ ಆಡಿಸುವುದು ಉಚಿತ: ಸಂಜಯ್​ ಬಂಗಾರ​ ಸಲಹೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.