ವಾಷಿಂಗ್ಟನ್(ಅಮೆರಿಕ): ರಷ್ಯಾದ ಅತ್ಯುನ್ನತ ಶ್ರೇಯಾಂಕದ ಮಹಿಳಾ ಟೆನ್ನಿಸ್ ಆಟಗಾರ್ತಿ ಡೇರಿಯಾ ಕಸಟ್ಕಿನಾ ಅವರು ಮಹಿಳೆಯೊಂದಿಗೆ ಡೇಟಿಂಗ್ ಮಾಡುತ್ತಿರುವುದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ರಷ್ಯಾದ ಸಂಸತ್ತು LGBTQ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದರ ಮೇಲೆ ಕಟ್ಟುನಿಟ್ಟಾದ ನಿರ್ಬಂಧವನ್ನು ವಿಧಿಸುವ ಕುರಿತು ಚರ್ಚಿಸುತ್ತಿರುವಾಗಲೇ ಟೆನ್ನಿಸ್ ತಾರೆಯ ಈ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.
ರಷ್ಯಾದ ಬ್ಲಾಗರ್ ವಿತ್ಯಾ ಕ್ರಾವ್ಚೆಂಕೊ ಅವರೊಂದಿಗಿನ ಯೂಟ್ಯೂಬ್ ಸಂದರ್ಶನದಲ್ಲಿ, ಕಸಟ್ಕಿನಾ ಅವರಿಗೆ ಗೆಳತಿ ಇದ್ದಾರೆಯೇ ಎಂದು ಕೇಳಿದಾಗ ಅವರು ಹೌದು ಎಂದು ಹೇಳಿದ್ದಾರೆ. ಸಂದರ್ಶನವು ಬಿಡುಗಡೆಯಾದ ಕೂಡಲೇ, ಕಸಟ್ಕಿನಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಸ್ಕೇಟರ್ ನಟಾಲಿಯಾ ಜಬಿಯಾಕೊ ಅವರ ಫೋಟೋವನ್ನು ಹೃದಯದ ಎಮೋಜಿಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ನೆಟ್ಸ್‌ನಲ್ಲಿ ಕೆ.ಎಲ್.ರಾಹುಲ್‌ಗೆ ಜೂಲನ್ ಗೋಸ್ವಾಮಿ ಬೌಲಿಂಗ್: ವಿಡಿಯೋ ನೋಡಿ
ಟ್ವಿಟರ್ ಪೋಸ್ಟ್‌ನಲ್ಲಿ ಜಬಿಯಾಕೊ ನನ್ನ ಕ್ಯೂಟಿ ಪೈ ಎಂದು ಕರೆದಿದ್ದಾರೆ. 2013ರಿಂದ ರಷ್ಯಾದಲ್ಲಿ LGBTQ ಸಂಬಂಧಗಳನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗಿದೆ. 25 ವರ್ಷ ವಯಸ್ಸಿನ ಕಸಟ್ಕಿನಾ ಅವರು ವಿಶ್ವದಲ್ಲಿ 12ನೇ ಶ್ರೇಯಾಂಕವನ್ನು ಹೊಂದಿದ್ದಾರೆ. ಸಂದರ್ಶನದಲ್ಲಿ, ಅವರು ಉಕ್ರೇನ್‌ನಲ್ಲಿ ನಡೆಸುತ್ತಿರುವ ದಾಳಿಯನ್ನು ನಿಲ್ಲಿಸಬೇಕು ಎಂದು ಕರೆ ನೀಡಿದ್ದರು.